ಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಅಮಿತ್ ಶಾ ಭೇಟಿ: ಕಾನೂನು ಎಲ್ಲರಿಗೂ ಒಂದೇ ಎಂದ ಗೃಹ ಸಚಿವ

ನವದೆಹಲಿ: ಬಿಜೆಪಿ ಸಂಸದ ಮತ್ತು ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಶನಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಒಲಿಂಪಿಕ್ ಕ್ರೀಡಾಪಟು ಬಜರಂಗ್ ಪೂನಿಯಾ ಅವರು ಶನಿವಾರ ಸಂಜೆ ಗೃಹ ಸಚಿವರನ್ನು ಅವರ ದೆಹಲಿಯ ಮನೆಯಲ್ಲಿ ಭೇಟಿಯಾದರು ಎಂದು ಎನ್.ಡಿ.ಟಿ.ವಿ ವರದಿ ತಿಳಿಸಿದೆ. ರಾತ್ರಿ 11 ಗಂಟೆಗೆ ಆರಂಭವಾದ ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಸಭೆಯಲ್ಲಿ ಪುನಿಯಾ, […]

ಬಿಹಾರ: ನಿರ್ಮಾಣ ಹಂತದಲ್ಲಿದ್ದ 1,716 ಕೋಟಿ ರೂ ವೆಚ್ಚದ ಸೇತುವೆ ಎರಡನೇ ಬಾರಿ ಕುಸಿತ; ತನಿಖೆಗೆ ಆದೇಶ

ಪಟ್ನಾ: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಗೆ 1,716 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಕುಸಿದು ಬಿದ್ದಿದೆ. ಭಾಗಲ್ಪುರದ ಸುಲ್ತಂಗಂಜ್ ಮತ್ತು ಖಗಾರಿಯಾ ಜಿಲ್ಲೆಯ ಆಗುವನಿ ನಡುವೆ ನಿರ್ಮಿಸಲಾಗಿದ್ದ ಚತುಷ್ಪಥ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಜೋರಾದ ಗಾಳಿ ಮಳೆಗೆ ಸೇತುವೆ ಕುಸಿದಿತ್ತು. 2014 ರಲ್ಲಿ ಪ್ರಾರಂಭವಾದ ಸೇತುವೆಯನ್ನು ಪೂರ್ಣಗೊಳಿಸಲು ಇದುವರೆಗೆ ಎಂಟು ಬಾರಿ ಗಡು ನೀಡಲಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆ […]

ಒಡಿಶಾ ತ್ರಿವಳಿ ರೈಲು ಅಪಘಾತ: ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣ; ಸೇವೆ ಪುನರಾರಂಭ

ಒಡಿಶಾ: 275 ಜನರನ್ನು ಬಲಿತೆಗೆದುಕೊಂಡ ಭೀಕರ ಬಾಲಸೋರ್ ರೈಲು ಅಪಘಾತ ಸಂಭವಿಸಿದ ವಿಭಾಗದಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಪ್ರಯಾಣಿಕರು ಮತ್ತು ಸಿಬ್ಬಂದಿಯತ್ತ ಕೈಬೀಸಿದರು ಮತ್ತು ಅವರ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು. ಬಾಲಾಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಅವಧಿಯಲ್ಲಿ ಮೇಲಿನ ಮತ್ತು ಕೆಳಗಿನ ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣವಾಗಿದ್ದು ಸೇವೆಗಳು ಪುನರಾರಂಭಗೊಂಡಿವೆ. ದುರ್ಘಟನೆಯಲ್ಲಿ275 ಜನ ಸಾವನ್ನಪ್ಪಿದ್ದು 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. […]

ವಿಮೆ ಕ್ಲೈಮ್ ಪ್ರಕ್ರಿಯೆ ಒಡಿಶಾ ರೈಲು ಅಪಘಾತ ಸಂತ್ರಸ್ತರಿಗೆ ಸಡಿಲಗೊಳಿಸಿದ LIC

ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ ತೊಂದರೆಗೊಳಗಾದವರಿಗೆ ಬೆಂಬಲ ನೀಡಲು ಎಲ್‌ಐಸಿ ಬದ್ಧವಾಗಿದೆ. ಹಣಕಾಸಿನ ಪರಿಹಾರ ಒದಗಿಸಲು ಕ್ಲೈಮ್ ಇತ್ಯರ್ಥವನ್ನು ತ್ವರಿತಗೊಳಿಸುತ್ತದೆ. ಬಾಲಸೋರ್‌ ರೈಲು ದುರಂತದ ಸಂತ್ರಸ್ತರ ಕ್ಲೈಮ್‌ ಇತ್ಯರ್ಥ ಪ್ರಕ್ರಿಯೆಗೆ ರಾಷ್ಟ್ರೀಯ ವಿಮಾ ಸಂಸ್ಥೆ ಎಲ್‌ಐಸಿ ಶನಿವಾರ ಹಲವು ಸಡಿಲಿಕೆಗಳನ್ನು ಪ್ರಕಟಿಸಿದೆ. ಎರಡು ಪ್ರಯಾಣಿಕ ರೈಲುಗಳು ಮತ್ತು ಒಂದು ಗೂಡ್ಸ್ ರೈಲು ಒಳಗೊಂಡ ಅಪಘಾತದಲ್ಲಿ ಇಲ್ಲಿಯವರೆಗೆ ಕನಿಷ್ಠ 288 ಜನರ ಪ್ರಾಣಹಾನಿಯಾಗಿದ್ದು, 1,100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. LIC ಪಾಲಿಸಿಗಳ ಹಕ್ಕುದಾರರ […]

ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆ ಸೇರಿದಂತೆ 14 ಎಫ್‌ಡಿಸಿ ಔಷಧಿಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ನವದೆಹಲಿ: ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆಗಳು ಮತ್ತು ಕ್ಲೋರ್ಫೆನಿರಮೈನ್ ಮಲೇಟ್ ಮತ್ತು ಕೊಡೈನ್ ಸಿರಪ್ ಸೇರಿದಂತೆ 14 ಫಿಕ್ಸೆಡ್ ಡೋಸ್ ಸಂಯೋಜನೆಯ ಔಷಧಗಳು ಜನರಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಕೇಂದ್ರ ಸರ್ಕಾರವು ನಿಷೇಧಿಸಿದೆ. ಈ ಫಿಕ್ಸ್‌ಡ್ ಡೋಸ್ ಕಾಂಬಿನೇಶನ್ (ಎಫ್‌ಡಿಸಿ) ಔಷಧಿಗಳಿಗೆ “ಯಾವುದೇ ಚಿಕಿತ್ಸಕ ಸಮರ್ಥನೆ” ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಹೇಳಿದೆ. ಎಫ್‌ಡಿಸಿ ಔಷಧಿಗಳೆಂದರೆ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳು ಒಂದು ಸ್ಥಿರ ಅನುಪಾತದಲ್ಲಿ ಸಂಯೋಜನೆಯನ್ನು ಒಳಗೊಂಡಿರುತ್ತದೆ. ತಜ್ಞರ ಸಮಿತಿಯ […]