ರೈಲ್ವೆ ಇಲಾಖೆಯ ತಮ್ಮ ಕೆಲಸಗಳಿಗೆ ಮರಳಿದ ಕುಸ್ತಿ ಪಟುಗಳು: ನ್ಯಾಯಕ್ಕಾಗಿ ಹೋರಾಟ ಜಾರಿ

ನವದೆಹಲಿ: ದೇಶದ ಕುಸ್ತಿ ಒಕ್ಕೂಟದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಭಾರತದ ದಿಗ್ಗಜ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ರೈಲ್ವೆಯಲ್ಲಿ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ. ಪ್ರತಿಭಟಿಸುವ ಕುಸ್ತಿಪಟುಗಳನ್ನು ದೆಹಲಿಯ ಜಂತರ್ ಮಂತರ್‌ನಿಂದ ಹೊರಹಾಕಿದ ಕೆಲವು ದಿನಗಳ ನಂತರ ಮೇ 31 ರಂದು ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ತಮ್ಮ ಕೆಲಸವನ್ನು ಪುನರಾರಂಭಿಸಿದರು. ಅಲ್ಲಿ ಅವರು ಏಪ್ರಿಲ್‌ನಿಂದ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯಿಂದ ಹಿಂದೆ […]

ಅಸ್ಸಾಂ-ಅರುಣಾಚಲ ಗಡಿಯಲ್ಲಿ ಗುಂಡಿನ ದಾಳಿ ಇಬ್ಬರಿಗೆ ಗಾಯ ಇಬ್ಬರು ಸಾವು

ಗುವಾಹಟಿ: ಅಸ್ಸಾಂ-ಅರುಣಾಚಲಪ್ರದೇಶದ ಗಡಿಯ ಪನ್ಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ. ಧೇಮಾಜಿಯ ಹಲವು ಪ್ರದೇಶಗಳಲ್ಲಿ ಇದುವರೆಗೆ ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ನಡುವಿನ ಗಡಿಯನ್ನು ಗುರುತಿಸಿಲ್ಲ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ. ”ಸಾಮಾನ್ಯವಾಗಿ, ನೆರೆಯ ರಾಜ್ಯ ನಮ್ಮ ಮೇಲೆ ಯಾವುದೇ ದಾಳಿ ಮಾಡುತ್ತಿಲ್ಲ. ಆದರೆ, ನೆರೆಯ ರಾಜ್ಯದ ಕೆಲವರು ಭೂಮಿ ವಶಪಡಿಸಿಕೊಳ್ಳುವ ದುರಾಸೆಯಿಂದ ಇಂತಹ ಚಟುವಟಿಕೆಗಳಲ್ಲಿ […]

ಭಾರತ-ಪಾಕ್ ನಿಯಂತ್ರಣ ರೇಖೆಯ ತೀತ್ವಾಲ್ ನಲ್ಲಿ ತಾಯಿ ಶಾರದಾಂಬೆಗೆ ಪ್ರಾಣ ಪ್ರತಿಷ್ಠೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ತೀತ್ವಾಲ್‌ ನಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಜೂ.5ರಂದು ಶ್ರೀ ಶಾರದಾಂಬೆ ವಿಗ್ರಹವನ್ನು ವೇದ ಮಂತ್ರ ಘೋಷಗಳೊಂದಿಗೆ ವಿಧಿವತ್ತಾಗಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದರು. ಕಳೆದ ಮಾ.22ರಂದು ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಕೊಂಡೊಯ್ದ ಪಂಚಲೋಹದ ವಿಗ್ರಹವನ್ನು ಜಮ್ಮು ಮತ್ತು ಕಾಶ್ಮೀರದ ತೀತ್ವಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದರು. ಇದೀಗ ಶ್ರೀ ಶಾರದಾ ಪೀಠದ ಜಗದ್ಗುರುಗಳು ಕಾಶ್ಮೀರದ ತೀತ್ವಾಲ್ ಗೆ ತೆರಳಿ ಪೂಜೆ ಸಲ್ಲಿಸಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಭಾರತ-ಪಾಕಿಸ್ಥಾನ ನಿಯಂತ್ರಣ ರೇಖೆಯ ಕುಪ್ವಾರ […]

ಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಅಮಿತ್ ಶಾ ಭೇಟಿ: ಕಾನೂನು ಎಲ್ಲರಿಗೂ ಒಂದೇ ಎಂದ ಗೃಹ ಸಚಿವ

ನವದೆಹಲಿ: ಬಿಜೆಪಿ ಸಂಸದ ಮತ್ತು ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಶನಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಒಲಿಂಪಿಕ್ ಕ್ರೀಡಾಪಟು ಬಜರಂಗ್ ಪೂನಿಯಾ ಅವರು ಶನಿವಾರ ಸಂಜೆ ಗೃಹ ಸಚಿವರನ್ನು ಅವರ ದೆಹಲಿಯ ಮನೆಯಲ್ಲಿ ಭೇಟಿಯಾದರು ಎಂದು ಎನ್.ಡಿ.ಟಿ.ವಿ ವರದಿ ತಿಳಿಸಿದೆ. ರಾತ್ರಿ 11 ಗಂಟೆಗೆ ಆರಂಭವಾದ ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಸಭೆಯಲ್ಲಿ ಪುನಿಯಾ, […]

ಬಿಹಾರ: ನಿರ್ಮಾಣ ಹಂತದಲ್ಲಿದ್ದ 1,716 ಕೋಟಿ ರೂ ವೆಚ್ಚದ ಸೇತುವೆ ಎರಡನೇ ಬಾರಿ ಕುಸಿತ; ತನಿಖೆಗೆ ಆದೇಶ

ಪಟ್ನಾ: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಗೆ 1,716 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಕುಸಿದು ಬಿದ್ದಿದೆ. ಭಾಗಲ್ಪುರದ ಸುಲ್ತಂಗಂಜ್ ಮತ್ತು ಖಗಾರಿಯಾ ಜಿಲ್ಲೆಯ ಆಗುವನಿ ನಡುವೆ ನಿರ್ಮಿಸಲಾಗಿದ್ದ ಚತುಷ್ಪಥ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಜೋರಾದ ಗಾಳಿ ಮಳೆಗೆ ಸೇತುವೆ ಕುಸಿದಿತ್ತು. 2014 ರಲ್ಲಿ ಪ್ರಾರಂಭವಾದ ಸೇತುವೆಯನ್ನು ಪೂರ್ಣಗೊಳಿಸಲು ಇದುವರೆಗೆ ಎಂಟು ಬಾರಿ ಗಡು ನೀಡಲಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆ […]