ಬಾರ್ಕೂರು-ಶಿರಿಯಾರ-ಜನ್ನಾಡಿ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಗೆ ಶಿರಿಯಾರ ಪ್ರಭಾಕರ ನಾಯಕ್ ಆಗ್ರಹ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು-ಶಿರಿಯಾರ-ಜನ್ನಾಡಿ ರಾಜ್ಯ ಹೆದ್ದಾರಿ ರಸ್ತೆಯೂ ಭಾರಿ ಹೊಂಡಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅಡೆತಡೆಯುಂಟು ಮಾಡಿದೆ. ಸಣ್ಣ ಪುಟ್ಟ ಅಪಘಾತಗಳು ತೀವ್ರ ಸ್ವರೂಪದ ಗಾಯಾಳುಗಳು, ವಾಹನಗಳು ಜಖಂ ಆದ ಅನೇಕ ಅಪಘಾತಗಳು ಸಂಭವಿಸಿದೆ. ಕ್ರಾಂಕ್ರೀಟು ರಸ್ತೆಗಳಲ್ಲೂ ಸಹ ಬಿರುಕು ಬಿಟ್ಟು ಹೊಂಡಗಳಿಂದ ಕೂಡಿದೆ.

ಬಾರ್ಕೂರು ಸೇತುವೆ ಬಳಿ, ಯಡ್ತಾಡಿ ಸಾಯಿಬ್ರಕಟ್ಟೆ ಮಹಾತ್ಮಗಾಂಧಿ ಹೈಸ್ಕೂಲ್ ಎದುರುಗಡೆ, ‘ಜೈಗಣೇಶ್ ಸೊಸೈಟಿಯ ಸೌಹಾರ್ದ ಶಿರಿ ಎದುರು, ಕದ್ರಿಕಟ್ಟೆ, ಶಿರಿಯಾರ, ಹಳ್ಳಾಡಿ, ಗಾವಳಿ ಇನ್ನಿತರ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಭಾರಿ ಹೊಂಡ ಇದ್ದು ಸಂಚಾರಕ್ಕೆ ತೊಂದರೆಯ ಬಗ್ಗೆ ಸಾರ್ವಜನಿಕರು, ಬಸ್ ಪ್ರಯಾಣೀಕರು ತುರ್ತು ಆಗ್ರಹ ಮಾಡಿದ್ದಾರೆ.

ರಾಜ್ಯ ಹೆದ್ದಾರಿ ಪಿ.ಡಬ್ಲ್ಯೂ.ಡಿ ಮುಖ್ಯಸ್ಥರು, ರಾಜ್ಯ ಹೆದ್ದಾರಿ ಕಾಂಟ್ರಾಕ್ಟರ್, ಈ ಕೂಡಲೇ ರಸ್ತೆ ತುರ್ತು ರಿಪೇರಿ ಮಾಡಬೇಕಾಗಿ ರಾಜ್ಯ ಸರಕಾರಕ್ಕೆ ಸಾಮಾಜಿಕ ಕಾರ್ಯಕರ್ತರು ನ್ಯಾಯ ಕೋರಿ ಶಿರಿಯಾರ ಪ್ರಭಾಕರ ನಾಯಕ್ ಆಗ್ರಹಿಸಿದ್ದಾರೆ.