ಉಡುಪಿ, ಬಂಟಕಲ್: ಬಂಟಕಲ್ನಲ್ಲಿರುವ ಶ್ರೀ ಮಧ್ವ ವಾದಿರಾಜ
ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಮತ್ತು ಫ್ರೌಢಶಾಲಾ
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಹಾಗೂ ಹೊಸ
ಆಲೋಚನೆಗಳನ್ನು ಉತ್ತೇಜಿಸಲು ಆವಿಷ್ಕಾರ 2025 ರಾಜ್ಯಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆಯನ್ನು ದಿನಾಂಕ 15 ನವೆಂಬರ್ 2025 ರಂದು ಆಯೋಜಿಸಲಾಗಿದೆ.
ವಿಜ್ಞಾನದಲ್ಲಿ ಆಸಕ್ತಿ ಬೆಳೆಸುವ, ಸೃಜನಾತ್ಮಕ ಚಿಂತನೆಗೆ ಉತ್ತೇಜನ
ನೀಡುವ ಹಾಗೂ ತಂತ್ರಜ್ಞಾನ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ
ಆವಿಷ್ಕಾರ 2025 ಯನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯ್ಯಲ್ ಐ. ಎ. ಎಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಹಾಗೂ ಜಗದೀಶ್ ನಾವಡ, ಪ್ರಾಂಶುಪಾಲರು, ವಿವೇಕ ಪಿಯು ಕಾಲೇಜು ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ಈ ಕಾರ್ಯಕ್ರಮವು ವಿಜ್ಞಾನ ಮಾದರಿ ಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಮತ್ತು ಕಿರು ವೀಡಿಯೋ ತಯಾರಿಕೆ ಸ್ಪರ್ಧೆ ಮೊದಲಾದ ಹಲವು ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ.
ಆವಿಷ್ಕಾರ 2025 ನ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಾಂತ್ರಿಕ, ಇಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರ ಮುಂತಾದ ಕ್ಷೇತ್ರಗಳತ್ತ ಆರಂಭಿಕ ಹಂತದ ಆಸಕ್ತಿಯನ್ನು ಬೆಳೆಸುವುದು, ಸೃಜನಾತ್ಮಕ ಕಲ್ಪನೆಗಳಿಗೆ ವೇದಿಕೆ ಒದಗಿಸುವುದು ಹಾಗೂ ಆರೋಗ್ಯಕರ ಸ್ಪರ್ಧೆಯ ಮೂಲಕ ಪರಸ್ಪರ ಕಲಿಯಲು ಅವಕಾಶಗಳನ್ನು ಒದಗಿಸುವುದಾಗಿದೆ. ಎಲ್ಲಾ ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಗಳು ತಮ್ಮ
ವಿದ್ಯಾರ್ಥಿಗಳನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತೇಜಿಸಲು ನಾವು
ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.
ನೊಂದಾವಣೆಗೆ ಕೊನೆಯ ದಿನಾಂಕ 08 ನವೆಂಬರ್ 2025 ಮತ್ತು
ನೊಂದಾಯಿಸಲು ಈ ಕೆಳಗಿನ ಲಿಂಕ್ನ್ನು ಬಳಸಿ: https://forms.gle/6wV7a5FTf6KH5RrHA
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್,
ಸಂಯೋಜಕರು- ಆವಿಷ್ಕಾರ 2025 (+ 944 96 12 014 ೯೪೪೯೬೧೨೦೧೪) ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:


















