ಜೆಕೆ ಟೈರ್ ರೇಸಿಂಗ್ ಸೀಸನ್ 2025: ಯುವ ಚಾಲಕರು ಮತ್ತು ಅನುಭವಿಗಳ ರೇಸರ್ ಗಳ ನಡುವೆ ಭರ್ಜರಿ ಪೈಪೋಟಿ!

ಬೆಂಗಳೂರು: ಕೊಯಮತ್ತೂರಿನ ಹೊರವಲಯದಲ್ಲಿರುವ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ 2025ರ ಜೆಕೆ ಟೈರ್ ರೇಸಿಂಗ್ ಸೀಸನ್‌ 2 ನೇ ಸುತ್ತಿನ ರೇಸಿಂಗ್ ನಡೆಯಿತು. ಅನುಭವಿ ರೇಸರ್‌ಗಳು ಮತ್ತು ಹೊಸ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಿ ಮೋಟಾರ್ ಸ್ಪೋರ್ಟ್ಸ್‌ನ ಸಂಭ್ರಮವನ್ನು ಹೆಚ್ಚಿಸಿದರು.

ಗುರುಗ್ರಾಮಿನ 10ನೇ ತರಗತಿಯ ವಿದ್ಯಾರ್ಥಿ ನಿಹಾಲ್ ಸಿಂಗ್ ತಮ್ಮ ವೇಗ ಮತ್ತು ಉತ್ಸಾಹದಿಂದ ಎಲ್ಲರ ಗಮನ ಸೆಳೆದರು. ಅನುಭವಿ ರೆಸೀರ್ ಗಳೊಂದಿಗೆ ಸ್ಪರ್ಧೆ ನಡೆಸಿದ ನಿಹಾಲ್ ಶನಿವಾರದ ಮೊದಲ ರೇಸ್‌ನಲ್ಲಿ ವಿಜಯಶಾಲಿಯಾದರು.

ಭಾನುವಾರ ನಡೆದ ರೇಸ್ ನ ಪ್ರಮುಖ ಅಂಶವೆಂದರೆ ಜೈ ಪ್ರಶಾಂತ್ ಮತ್ತು ಮೀರಾ ಎರ್ಡಾ ನಡುವಿನ ನಾಲ್ಕನೇ ರೇಸ್‌ನಲ್ಲಿ ಅತಿಥಿ ಚಾಲಕಿಯಾಗಿ ಸ್ಪರ್ಧಿಸಿದ್ದುರು. 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಮೀರಾ ಎಲ್ಲಾ ನಾಲ್ಕು ರೇಸ್‌ಗಳಲ್ಲಿ ಪೋಡಿಯಂ ಸ್ಥಾನ ಪಡೆದು ತಮ್ಮ ಸ್ಪರ್ಧಾತ್ಮಕ ಮನೋಭಾವವನ್ನು ತೋರಿಸಿದರು.

ಎರಡು ದಿನಗಳ ಕಾಲ ನಡೆದ ಸಿಂಗಲ್-ಮೇಕ್ ಲೆವಿಟಾಸ್ ಕಪ್ ರೇಸ್‌ಗಳು, ಯುವ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಯಂತ್ರದ ಸಾಮರ್ಥ್ಯವನ್ನು ತೋರಿಸಿದವು. ಜೈ ಪ್ರಶಾಂತ್ ನಾಲ್ಕನೇ ರೇಸ್‌ನಲ್ಲಿ 1:26.100ಕ್ಕೆ ತಮ್ಮ ಅತ್ಯುತ್ತಮ ಲ್ಯಾಪ್ ಅನ್ನು ತಲುಪುವ ಮೂಲಕ ಉತ್ತುಂಗಕ್ಕೇರಿದರು.

ರಾಯಲ್ ಎನ್‌ಫೀಲ್ಡ್ ಕಂಟಿನೆಂಟಲ್ GT ಕಪ್ ಯಂತ್ರಗಳಲ್ಲಿ ನವನೀತ್ ಕುಮಾರ್ ಮತ್ತು ಅನಿಶ್ ಡಿ ಶೆಟ್ಟಿ ತೀವ್ರ ಪೈಪೋಟಿ ನಡೆಸಿದರು. ಮೂರನೇ ರೇಸ್‌ನ ಅಂತಿಮ ಸುತ್ತಿನಲ್ಲಿ ನವನೀತ್ ಕೇವಲ 0.002 ಸೆಕೆಂಡಿನ ಅಂತರದಿಂದ ಅನಿಶ್ ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದರು. ನವನೀತ್ ಒಟ್ಟು ಸಮಯ 13:21.934 ದಾಖಲಿಸಿದರೆ, ಅನಿಶ್ ಅತ್ಯುತ್ತಮ ಲ್ಯಾಪ್ ಸಮಯ 1:16.898 ದಾಖಲಿಸಿದರು.

‘ಸ್ಟ್ರೀಟ್ ಟು ಸರ್ಕ್ಯೂಟ್’ ಎಂಬ ಥೀಮ್‌ನಡಿ ದೇಶದ ವಿವಿಧ ಭಾಗಗಳಿಂದ ಹೊಸ ಬೈಕ್ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಜೆಕೆ ಟೈರ್ ನೊವೀಸ್ ಕಪ್ ವಾರಾಂತ್ಯಕ್ಕೆ ಮತ್ತೊಂದು ಮನರಂಜನೆ ನೀಡಿತು. ಉದಯೋನ್ಮುಖ ರೇಸರ್‌ಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸ್ಪರ್ಧಾತ್ಮಕ ಅನುಭವವನ್ನು ಪಡೆಯಲು ನಿರ್ಣಾಯಕ ವೇದಿಕೆಯನ್ನು ನೀಡಿತು. ಮೂರು ಕಠಿಣ ಪೈಪೋಟಿಯ ರೇಸ್‌ಗಳಲ್ಲಿ MSPORT‌ನ ಭುವನ್ ಬೋನು ರೇಸ್ 1 (16:06.951) ಮತ್ತು ರೇಸ್ 3 (16:26.624) ನಲ್ಲಿ ಜಯಶಾಲಿಯಾದರೆ, ಮೊಮೆಂಟಮ್ ಮೋಟಾರ್‌ಸ್ಪೋರ್ಟ್ಸ್‌ನ ಅಭಿಜೀತ್ ವದವಳ್ಳಿ ರೇಸ್ 2ರಲ್ಲಿ 14:23.860 ಸಮಯದೊಂದಿಗೆ ಗೆದ್ದರು.