ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿಸುದ್ದಿ; ಸೆಪ್ಟಂಬರ್‌ 28ರಿಂದ ವಿಶೇಷ ರೈಲು ಸಂಚಾರ ಆರಂಭ.

ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ದಸರಾ ಹಬ್ಬದಲ್ಲಿ ಸಿಹಿಸುದ್ದಿ ನೀಡಿದೆ. ಶಬರಿಮಲೆಗೆ ತೆರಳುವ ಯಾತ್ರಿಕರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಪ್ರಯತ್ನದ ಫಲವಾಗಿ ಹುಬ್ಬಳ್ಳಿಯಿಂದ ಕೊಲ್ಲಂವರೆಗೆ 22 ಕೋಚ್‌ಗಳುಳ್ಳ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಸೆಪ್ಟಂಬರ್‌ 28ರಿಂದ ಸಂಚಾರ ಆರಂಭಿಸಲಾಗಿದೆ.

ರೈಲು ಸಂಚಾರ ಯಾವ ಮಾರ್ಗದಲ್ಲಿ?:
ರಾಜ್ಯದ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗವಾಗಿ ಹಾಗೂ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್‌, ತಿರುಪುರ, ಪೊದನೂರ, ತ್ರಿಶೂರು, ಅಲುವಾ, ಎರ್ನಾಕುಲಂ ಟೌನ್​, ಕೊಟ್ಟಾಯಂ, ಚಂಗನಸ್ಸೇರಿ, ಚೆಂಗನ್ನೂರ್‌, ಕರುನಾಗಪಲ್ಲಿ, ಸಸ್ಥನಕೊಟ್ಟಾ ಮಾರ್ಗದಲ್ಲಿ ಈ ವಿಶೇಷ ರೈಲು ಸಂಚರಿಸಲಿದೆ.