ನಿಟ್ಟೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ:ಸಂಶೋಧನೆ,ಅಭಿವೃದ್ಧಿ ಕುರಿತು ಹೊಸ ನೋಟ ನೀಡಿದ ಕಾರ್ಯಕ್ರಮ

ಕಾರ್ಕಳ: ‘ಇಂದಿನ ದಿನಗಳಲ್ಲಿ ಅಂತರ್ವಿಭಾಗೀಯ (ಇಂಟರ್ ಡಿಸಿಪ್ಲಿನರಿ) ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಕಾಣುವಂತಾಗಿದೆ. ಪ್ರತಿಯೊಬ್ಬ ಸಂಶೋಧಕನೂ ತನ್ನ ಜ್ಞಾನವನ್ನು ಬೇರೆ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಉಪಯೋಗಿಸಬಹುದು ಹಾಗೂ ಅದರಿಂದ ಇನ್ನುಳಿದ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ಚಿಂತಿಸಬೇಕು’ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಸ್ಟ್ರೀ, ಫಿಸಿಕ್ಸ್ & ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ಪ್ರಾಧ್ಯಾಪಕ ಪ್ರೊ. ಪ್ರಸಾದ್ ಎರ್ಲಗಡ್ಡ ಅಭಿಪ್ರಾಯಪಟ್ಟರು. ಅವರು ಡಿ.೨೨ ಹಾಗೂ ೨೩ ರಂದು […]

ಡಿ.23 ರಂದು ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂದ ಕ್ರಿಸ್ ಮಸ್ ಸಂಭ್ರಮಾಚಣೆ

ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.23 ರಂದು ಸಂಜೆ 5 ಗಂಟೆಗೆ ಮಣಿಪಾಲದ ಹೋಟೇಲ್ ಆಶ್ಲೇಶ್ ಇದರ ವಜ್ರ ಹಾಲಿನಲ್ಲಿ ನಡೆಯುವ ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಲಿದ್ದಾರೆ. ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ […]

ಚರ್ಚಾ ಸ್ಪರ್ಧೆ: ಜನತಾ ಪ.ಪೂ ಕಾಲೇಜು ವಿದ್ಯಾರ್ಥಿನಿ ವರ್ಷಾ ರವಿಶಂಕರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಹೆಮ್ಮಾಡಿ: ಜಿಲ್ಲಾ ಸಹಕಾರ ಮಹಾಮಂಡಳದವರು ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಸಮೃದ್ದ ಭಾರತ ನಿರ್ಮಾಣದಲ್ಲಿ ಸಹಕಾರ ಚಳುವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲುದು’ ಎಂಬ ವಿಷಯದ ಕುರಿತು ನಡೆದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪಥಮ ಪಿ.ಯು.ಸಿ ವಿದ್ಯಾರ್ಥಿನಿ ವರ್ಷಾ ರವಿಶಂಕರ್ ಪ್ರಥಮ ಸ್ಥಾನ ಪಡೆದು ಕರ್ನಾಟಕ ಸಹಕಾರ ಮಹಾಮಂಡಳ ನಡೆಸುವ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ […]

ಪರಿಸರವನ್ನು ಸ್ವಚ್ಛವಾಗಿಟ್ಟು ಇಲಿ ಜ್ವರ ಬರುವುದನ್ನು ತಡೆಯಿರಿ: ಡಾ. ವಾಸುದೇವ ಉಪಾಧ್ಯ

ಉಡುಪಿ: ಇಲಿ ಜ್ವರವು ಬ್ಯಾಕ್ಟಿರಿಯಾದಿಂದ ಬರುವಂತಹ ಒಂದು ಕಾಯಿಲೆಯಾಗಿದ್ದು, ದೇಹ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಇಲಿ ಜ್ವರವನ್ನು ತಡೆಯಲು ಸಾಧ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ವಾಸುದೇವ ಉಪಾಧ್ಯಾಯ ಹೇಳಿದರು. ಅವರು ಗುರುವಾರ ನಗರದ ಪುತ್ತೂರು ಎಲ್.ವಿ.ಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಉಡುಪಿ, ಎಲ್.ವಿ.ಪಿ ಅನುದಾನಿತ ಹಿರಿಯ ಪ್ರಾಥಮಿಕ […]

ಯೂಟ್ಯೂಬ್ ನಲ್ಲಿ ಬಿಡುಗಡೆಯಾಯ್ತು ಗಗನ್ ಗಾಂವ್ಕರ್ ಸುಮಧುರ ಕಂಠದಲ್ಲಿ ಸಿಂಗಾರ ಸಿರಿಯೆ ತುಳು ಆವೃತ್ತಿ

ವಿಶ್ವದಾದ್ಯಂತ ಕಿಚ್ಚು ಹಚ್ಚಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆಯನ್ನು ಮೆಚ್ಚದವರೇ ಇಲ್ಲ. ಇದೀಗ ಸಿಂಗಾರ ಸಿರಿಯೆ ಹಾಡಿನ ತುಳು ಆವೃತ್ತಿಯು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಾಪ್ ಶೆಟ್ಟಿ ಸಾಹಿತ್ಯದ ಗೀತೆಯನ್ನು ಝೀಟಿವಿಯ ಸರೆಗಮಪ ಸಂಗೀತ ರಿಯಾಲಿಟಿ ಶೋ ವಿಜೇತ ಗಗನ್ ಗಾಂವ್ಕರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡಿನ ಮಿಕ್ಸಿಂಗ್ ಅನ್ನು ಉಡುಪಿಯ ನಿನಾದ್ ಆಡಿಯೋ ರೆಕಾರ್ಡಿಂಗ್ ಮಿಕ್ಸಿಂಗ್ ಸ್ಟುಡಿಯೋನ ಶರತ್ ಉಚ್ಚಿಲ ಮಾಡಿದ್ದಾರೆ.