ಕಾಪು: ತಾಲೂಕಿನ ಕಳತ್ತೂರು ಚಂದ್ರನಗರ ಕನ್ನಡರಬೆಟ್ಟು ನಿವಾಸಿ ನವೀನ್ ಕುಮಾರ್ ಕರ್ಕಡ (50) ಕರ್ತವ್ಯ ನಿರತ ಸೇನಾ ಯೋಧ
ಜಾರ್ಖಂಡ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಸಿಐಎಸ್ಎಫ್ ಯೋಧನಾಗಿ ಕಳೆದ 29 ವರ್ಷಗಳಿಂದ ಸೇನಾ ಕರ್ತವ್ಯ ನಿರತರಾಗಿದ್ದ ಅವರು ಮುಂದಿನ ವರ್ಷದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು. ಬಿಹಾರ, ರಾಂಚಿ, ದೆಹಲಿ, ಮೈಸೂರು, ನಾಗ್ಪುರ ಸಹಿತ ದೇಶದ ವಿವಿಧೆಡೆಗಳ ಸೇನಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.