ಕಾರ್ಕಳ: ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ (65) ಅವರು ಕೋವಿಡ್ ನಿಂದ ಸೋಮವಾರ ನಿಧನ ಹೊಂದಿದರು.
ಬೆಳ್ಮಣ್ ನಿವಾಸಿಯಾಗಿರುವ ಅವರು, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬಿಜೆಪಿ ಬೆಳ್ಮಣ್ ಘಟಕದ ಮಾಜಿ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿದ್ದರು. ಬೆಳ್ಮಣ್ ರೋಟರಿಯ ಸಕ್ರಿಯ ಸದಸ್ಯರಾಗಿದ್ದರು. ನಂದಳಿಕೆ ಬೋರ್ಡ್ ಶಾಲೆ, ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ಪತ್ನಿ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಗಣ್ಯರಿಂದ ಸಂತಾಪ:
ಮೋಹನ್ ದಾಸ್ ಶೆಟ್ಟಿ ನಿಧನಕ್ಕೆ ಕಾರ್ಕಳ ಶಾಸಕ ವಿ .ಸುನಿಲ್ ಕುಮಾರ್, ಬೆಳ್ಮಣ್ ಪಂಚಾಯತ್ ಅಧ್ಯಕ್ಷ ಜನಾರ್ದನ ತಂತ್ರಿ, ಉಪಾಧ್ಯಕ್ಷೆ ಸಹನಾ ಕುಂದರ್, ರೋಟರಿ ಅಧ್ಯಕ್ಷ ಸುಭಾಷ್ ಕುಮಾರ್, ಬಂಟರ ಸಂಘದ ಅಧ್ಯಕ್ಷ ಸುಹಾಸ್ ಹೆಗ್ಡೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.