ಎಕೆಎಂಎಸ್ ಮಾಲೀಕ ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣ; ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಉಡುಪಿ: ಮಲ್ಪೆ ಕೊಡವೂರಿನ ಸಾಲ್ಮರದಲ್ಲಿ ನಡೆದ ಎಕೆಎಂಎಸ್ ಬಸ್ ಮಾಲೀಕ ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ‌ ಇಂದು ಹಾಜರುಪಡಿಸಲಾಯಿತು.

ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ (27), ಕರಂಬಳ್ಳಿ ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕುರ್ (43) ಎಂಬವರನ್ನು ಪೊಲೀಸರು‌ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿಗಳನ್ನು ಅ. 4ವರೆಗೆ ಪೊಲೀಸ್ ಕಸ್ಟಡಿ ನೀಡಿ ನ್ಯಾಯಾಲಯ ಆದೇಶ ನೀಡಿದೆ.ಸೈಫುದ್ದೀನ್ ಹತ್ಯೆಯ ಹಿಂದೆ ದುಬೈಯ ಉದ್ಯಮಿ ಮತ್ತು ಮಹಿಳೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ತೀವ್ರಗೊಂಡಿದೆ.