ಕಾರ್ಕಳ: ಇಲ್ಲಿನ ಜೋಡುರಸ್ತೆಯಲ್ಲಿರುವ ದುರ್ಗಾ ಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ನ.5 ರಂದು ಬೆಳಿಗ್ಗೆ10 ಗಂಟೆಗೆ A1 ಸೂಪರ್ ಮಾರ್ಕೆಟ್ ಶುಭಾರಂಭಗೊಳ್ಳಲಿದ್ದು, ಗೃಹ ಬಳಕೆಯ ಅತ್ಯುತ್ತಮ ಗುಣಮಟ್ಟದ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸೂಪರ್ ಮಾರ್ಕೆಟ್ ಅನ್ನು ಉದ್ಘಾಟಿಸಲಿದ್ದು, ತುಳು ಚಿತ್ರನಟ ಅರ್ಜುನ್ ಕಾಪಿಕಾಡ್, ಕುಕ್ಕುಂದೂರು ಗ್ರಾ.ಪಂ ಅಧ್ಯಕ್ಷೆ ಉಷಾ ಕೆ, ಉದ್ಯಮಿಗಳಾದ ನವೀನ ಚಂದ್ರ ಶೆಟ್ಟಿ ಮುಂಬೈ, ಮುನಿಯಾಲು ಗಣೇಶ್ ನಾಯಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಕಳ ಶಾಖೆಯ ಮುಖ್ಯ ಪ್ರಬಂಧಕ ಸುಧೀರ್ ಕಾಮತ್ ಭಾಗವಹಿಸಲಿದ್ದಾರೆ.