ಉಡುಪಿ: ಆಚರಣೆಗಳಿಗೆ ಉದ್ದೇಶವನ್ನಿಟ್ಟುಕೊಂಡಾಗ ಮಾತ್ರ ಸಾರ್ಥಕ್ಯ ಭಾವ ಮೂಡುತ್ತದೆ. ಪ್ರಸ್ತುತ ಸಮಾಜವನ್ನು ಬದಲಿಸಲು ಓದಿನಿಂದ ಮಾತ್ರ ಸಾಧ್ಯ. ಪುಸ್ತಕ ನಮ್ಮ ದಾರಿಯನ್ನು ನಿರ್ಧರಿಸುತ್ತದೆ. ಓದುವ ಹವ್ಯಾಸ ಹೆಚ್ಚಾದಷ್ಟು ದೇಶ ಭದ್ರವಾಗಿರುತ್ತದೆ ಎಂದು ಸುಧಾ ಆಡುಕಳ ಹೇಳಿದರು.
ತ್ರಿಶಾ ಕಾಲೇಜಿನ ಪುಸ್ತಕಮನೆ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲಿಂದ ಪುಸ್ತಕದ ಕಡೆಗೆ ಹೆಚ್ಚು ಆತ್ಮೀಯರನ್ನಾಗಿ ಮಾಡಿದಷ್ಟು ಅವರ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕದ ಜೊತೆ ತಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕು .ಓದುವಿಕೆಯಿಂದ ಹೊಸತೊಂದು ದಾರಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ್ ಎನ್ ಎಸ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ನಮಿತಾ ಜಿ ಭಟ್, ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀನಿವಾಸ್ ಕಿಣಿ, ಬಿ.ಸಿ.ಪೈ, ಟೀಂ ಯುವ ತಂಡದ ರುವಾರಿ ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕರು ಹಾಗೂ ತರಗತಿಯನ್ನು ಗ್ರಂಥಾಲಯವಾಗಿ ಮಾರ್ಪಾಡು ಮಾಡಲು ಶ್ರಮವಹಿಸಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಶಿಕಿರಣ್ ನಿರೂಪಿಸಿ, ಪವನ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಕಥೆ ಮತ್ತು ಕವನ ಓದುವ ಮೂಲಕ ಪುಸ್ತಕ ಮನೆಗೆ ಚಾಲನೆ ನೀಡಿದರು. ಮಕ್ಕಳಲ್ಲಿ ಓದುವ ಪ್ರೀತಿಯನ್ನು ಹೆಚ್ಚಿಸಲು ಪುಸ್ತಕವನ್ನ ಕೊಡುಗೆಯಾಗಿ ನೀಡುವವರು ಶಾಲೆಗೆ ನೀಡಬಹುದು ಎಂದು ಅಧ್ಯಕ್ಷರು ವಿನಂತಿಸಿದರು. ಎಸ್.ವಿ.ಎಸ್ ವಿದ್ಯಾವರ್ಧಕ ಸಂಘವು ನಡೆಸುತ್ತಿರುವ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಯೊಂದನ್ನು ಗ್ರಂಥಾಲಯವಾಗಿ ಮಾರ್ಪಾಡು ಮಾಡಲಾಗಿದೆ.