ಕಾರ್ಕಳ: ಖ್ಯಾತ ಜ್ಯೋತಿಷಿ ರಾಜಗೋಪಾಲ ಭಟ್ ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಕಾರ್ಕಳದ ಪುಟ್ಟಗ್ರಾಮ ಬಜಗೋಳಿಯಲ್ಲಿ ಯಾರೊಬ್ಬರಿಂದಲೂ ದೇಣಿಗೆ ಪಡೆಯದೇ ಸ್ವಯಂ ತನ್ನ ತಪಸ್ಸು ಮತ್ತು ಮುತುವರ್ಜಿಯಿಂದಲೇ ಚಂಡೀಹವನ ,ದಶ – ಶತ- ಸಹಸ್ರ – ಅಯುತ ಚಂಡಿಕಾಯಾಗ , ಮಹಾಮೃತ್ಯುಂಜಯ ಯಾಗವೇ ಮೊದಲಾಗಿ ಬೃಹತ್ ಯಾಗಗಳನ್ನು ಲೋಕದೊಳಿತಿಗಾಗಿ ಸಂಕಲ್ಪಿಸಿ ಯಶಸ್ವೊಯಾಗಿ ಸಾಕಾರಗೊಳಿಸಿ ನಿಜಾರ್ಥದಲ್ಲಿ ಪುರದ ಹಿತ ಬಯಸಿದ (ಪುರೋಹಿತ ) ಈ ಗ್ರಾಮವನ್ನು ಯಾಗಭೂಮಿಯಾಗಿಸಿದ್ದ ಮಹಾಬ್ ಜ್ಯೋತಿಷಿ.
ನಿಸ್ಪೃಹ ದೇವೀ ಆರಾಧಕರಾಗಿದ್ದ ಭಟ್ಟರು ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು ಅನ್ನೋದಕ್ಕೆ ಅವರು ನಡೆಸಿದ ಯಜ್ಞ ಯಾಗಾದಿಗಳೇ ಸಾಕ್ಷಿ .
ಉತ್ತಮಜ್ಯೋತಿಷಿಯೂ ಆಗಿದ್ದ ಅವರು ಯಾವುದೇ ಡಿಮ್ಯಾಂಡ್ ಇಲ್ಲದೇ ಕೇವಲ ಶ್ರದ್ಧೆಯಿಂದ ಭಕ್ತರು ನೀಡುತ್ತಿದ್ದ ಸಂಭಾವನೆ ಸ್ವೀಕರಿಸಿ ಜ್ಯೋತಿಷ್ಯದ ಮೂಲಕ ಸಮಾಧಾನ ಸಾಂತ್ವನ ಹೇಳಿ ಅಸಂಖ್ಯ ಬಡ ಬಗ್ಗರ ಅಭಿಮಾನ ಭಕ್ತಿ ಪ್ರೀತಿಗೆ ಪಾತ್ರರಾದವರು.
ಅವರು ಧರ್ಮಪತ್ನಿ ಹಾಗೂ ಮೂವರು ಸುಪುತ್ರಿಯರು ಹಾಗೂ ಕುಟುಂಬಸ್ಥರು, ಅಪಾರ ಭಕ್ತರನ್ನು ಅಗಲಿದ್ದಾರೆ.