ಪಡುಬಿದ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಸಮಾವೇಶ

ಪಡುಬಿದ್ರಿ: ಪಡುಬಿದ್ರಿ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶವು ಪಡುಬಿದ್ರಿ ಉದಯಾದ್ರಿಯಲ್ಲಿ ನಡೆಯಿತು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರಿಗೂ ರಾಷ್ಟ್ರೀಯ ಅಧ್ಯಕ್ಷರಿಗೂ ಸಮಾನ ಗೌರವವಿದ್ದು ಅದನ್ನು ಬೂತ್ ಅಧ್ಯಕ್ಷರು ಅರ್ಥ ಮಾಡಿಕೊಂಡು ಪ್ರತೀ ಬೂತ್ ನಲ್ಲಿ ಅಧ್ಯಕ್ಷರುಗಳು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ನಾಮಫಲಕ ಅಳವಡಿಸುವ ಸಂದರ್ಭದಲ್ಲಿ ಪ್ರತೀ ಬೂತ್ ಅಧ್ಯಕ್ಷರ ಮನೆಯಲ್ಲಿ ಕನಿಷ್ಠ 30-40 ಜನ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕು. ತನ್ಮೂಲಕ ಪ್ರತೀ ಬೂತ್ ಅಧ್ಯಕ್ಷರು ಸಕ್ರಿಯವಾಗಿ ಪಕ್ಷ ಕೊಟ್ಟ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿರ್ವಹಿಸುತ್ತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡಿರಬೇಕು ಎಂದು ಕರೆ ನೀಡಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಕ್ಷ ಬೆಳೆದು ಬಂದ ರೀತಿ, ಹಿರಿಯರ ತ್ಯಾಗ ಬಲಿದಾನಗಳ ಬಗ್ಗೆ ವಿವರಿಸಿ ಪಕ್ಷ ಬೆಳೆದು ಬಂದ ಹಾದಿ ತಿಳಿದು ಅವರ ಆದರ್ಶದಂತೆ ಪಕ್ಷ ಬೆಳೆಸಬೇಕು ಎಂದರು. ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಸರಿಯಾಗಿ ಮಾಡಿ ವ್ಯಕ್ತಿ ಬೆಳೆಯಬೇಕು ತನ್ಮೂಲಕ ಪಕ್ಷವೂ ಬೆಳೆಯುವುದು ಎಂದರು.

ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ನಿಕಟಪೂರ್ವ ತಾಲೂಕು‌ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಪಡುಬಿದ್ರೆ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಹೆಜಮಾಡಿ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಮಂಡಲ ಉಪಾಧ್ಯಕ್ಷರೂ ಮಹಾಶಕ್ತಿಕೇಂದ್ರ ಉಸ್ತುವಾರಿಗಳು‌ ಆದ ಚಂದ್ರಶೇಖರ ಕೋಟ್ಯನ್, ಪಂಚಾಯತ್ ಉಪಾಧ್ಯಕ್ಷರುಗಳಾದ ಪವಿತ್ರ ಗಿರೀಶ್, ಯಶೋಧ, ಸೌಮ್ಯಲತಾ ಶೆಟ್ಟಿ, ಹಿರಿಯರಾದ ರಮಾಕಾಂತ್ ದೇವಾಡಿಗ, ಪಂಚಾಯತ್ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು, ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್ ಕೆ, ಮಂಡಲ ಕಾರ್ಯದರ್ಶಿಗಳಾದ ಮಾಲಿನಿ ಶೆಟ್ಟಿ, ಲತಾ ಆಚಾರ್ಯ, ವಿವಿಧ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ದೇವಾಡಿಗ ಧನ್ಯವಾದ ಸಮರ್ಪಿಸಿದರು. ಪ್ರಸಾದ್ ಪಲಿಮಾರು ಕಾರ್ಯಕ್ರಮ ನಿರೂಪಿಸಿದರು.