‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ: ರವಿರಾಜ್​ ಹೆಗ್ಡೆ ಚಾಲನೆ

ಉಡುಪಿ: ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಸಮೃದ್ಧಿ ಹೊಂದಿರುವುದರಿಂದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ವರ್ಷದಲ್ಲಿ ಎರಡು ಬಾರಿ ​ಸಿಹಿ ​ಉತ್ಸವ ಆಚರಿಸುತ್ತಿ​ದ್ದು, ಇಂದಿನಿಂದ (ಆ.19) ಆ. 31ರ ವರೆಗೆ ಒಟ್ಟು 13 ದಿನಗಳ ಕಾಲ ಈ ಉತ್ಸವ ನಡೆಯಲಿದೆ.

ಈ ಉತ್ಸವದ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ. 10ರಷ್ಟು ರಿಯಾಯಿತಿಯನ್ನು ನೀಡುವ ಗ್ರಾಹಕ​ ​ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ​. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಂದಿನಿ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಿ ನಂದಿನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ರಾಜ್ಯದ ಹೈನುಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ.

ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಅಧ್ಯಕ್ಷರಾದ ​ಕೆ. ​ರವಿರಾಜ್​ ಹೆಗ್ಡೆ ಅವರು,​​ ರಾಜ್ಯದಲ್ಲಿ ಸಾಲು ಸಾಲು​ ಸಾಲು ​ಹಬ್ಬಗಳು ಪ್ರಾರಂಭವಾಗಿರುವುದರಿಂದ ಹಬ್ಬಗಳನ್ನು ನಂದಿನಿಯೊಂದಿಗೆ ಆಚರಿ​ಸಿ ಸಂತಸ ಪಡೋಣ ಎಂದು ಶುಭಾಹಾರೈಸಿದರು.

ಈ ಸಂದರ್ಭದಲ್ಲಿ​ ​​ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ​, ಸ್ಮಿ​ತಾ ಆರ್. ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸುಧಾಕರ್​, ​ ಮಾರುಕಟ್ಟೆ ವಿಭಾಗದ ​ಅಧಿಕಾರಿ ​ಸಂದೀ​ಪ್ ಮತ್ತು ಸತೀಶ್ ಪೂಜಾರಿ​, ನಂದಿನಿ ಮಳಿಗೆಯ ​ಮಾಲೀಕ ​ಪ್ರಭಾತ್ ಕೋಟ್ಯಾನ್ ಉಪಸ್ಥಿತರಿದ್ದರು. ​​