ಅಲೆವೂರು: ಎಂಟು ತಿಂಗಳ ಬಳಿಕ ಮೃತ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಉಡುಪಿ: ಇಲ್ಲಿನ ಅಲೆವೂರು ಜೋಡು ರಸ್ತೆಯ ಯೂನಿಯನ್ ಬ್ಯಾಂಕ್ (ಹಳೆಯ ಕಾರ್ಪೋರೇಷನ್ ಬ್ಯಾಂಕ್) ಬಳಿಯ ಮನೆಯೊಂದರಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಸುರೇಶ್ ಶೆಟ್ಟಿ (47) ಎಂದು ಗುರುತಿಸಲಾಗಿದೆ. ಇವರು ಮೃತಪಟ್ಟು ಸುಮಾರು ಎಂಟು ತಿಂಗಳು ಕಳೆದಿರಬಹುದೆಂದು ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದರು.