ಮುಂಬೈ: ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಐದು ತಿಂಗಳ ಟೀರಾ ಕಾಮತ್‌ಳ ಜೀವ ಉಳಿಸುವ ಔಷಧಿ ಆಮದಿನ ಮೇಲಿನ ತೆರಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದು, ಇದರಿಂದ ಮಗುವಿನ ಪೋಷಕರಿಗೆ ಹೊಸ ಆಶಾಕಿರಣ ಮೂಡಿಸಿದೆ.
ಟೀರಾ ಕಾಮತ್ ಗೆ 16 ಕೋಟಿ ರೂ. ಮೌಲ್ಯದ ಔಷಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರ ಮೇಲಿನ 6 ಕೋಟಿ ರೂ.ಗಳ ಜಿಎಸ್ಟಿ ಮೊತ್ತವನ್ನು ಪಿಎಂ ಮೋದಿ ಮನ್ನಾ ಮಾಡಿದ್ದಾರೆ.
ಮುಂಬೈ ನಿವಾಸಿಗಳಾದ ಪ್ರಿಯಾಂಕಾ ಮತ್ತು ಮಿಹಿರ್ ಕಾಮತ್ ಅವರು ಆಗಸ್ಟ್ 14, 2020 ರಂದು ಟೀರಾಗೆ ಜನ್ಮ ನೀಡಿದರು. ಟೀರಾ ಹುಟ್ಟಿದಾಗ ಲವಲವಿಕೆಯಿಂದಲೇ ಇದ್ದಳು. ಆದರೆ ಎರಡು ವಾರಗಳ ನಂತರ, ಟೀರಾ ಎದೆ ಹಾಲು ಕುಡಿಯಲು ತೊಂದರೆ ಅನುಭವಿಸಿದ್ದಳು. ಆಗ ಪೋಷಕರು ಮಕ್ಕಳ ವೈದ್ಯರ ಬಳಿಗೆ ಕರೆದೊಯ್ದಿದ್ದರು. ಆಗ ಮಗುವಿಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ(ಎಸ್ಎಂಎ) ಕಾಯಿಲೆ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದರು.