80 ಬಡಗುಬೆಟ್ಟು ಗ್ರಾಪಂ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಧೀರ್ ಪೂಜಾರಿಗೆ ಭರ್ಜರಿ ಗೆಲುವು

ಮಂಚಿ: ಬಿಜೆಪಿ ಭದ್ರಕೋಟೆ 80ನೇ ಬಡಗುಬೆಟ್ಟು ಗ್ರಾಪಂನ 8ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಧೀರ್ ಪೂಜಾರಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಬಿಜೆಪಿಯ ಹಿರಿಯ ನಾಯಕ ವಿಠಲ್ ಅಮೀನ್ ಸೋಲುಂಡಿದ್ದಾರೆ.

ಭಾರೀ ಹಣಾಹಣಿಯಿಂದ ಕೂಡಿದ್ದ ಮತ ಎಣಿಕೆಯಲ್ಲಿ ಮೊದಲ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, ಬಳಿಕ ಸಮಬಲದ ಹೋರಾಟ ನಡೆಯಿತು. ಕೊನೆಯ ಹಂತದ ಮತ ಎಣಿಕೆಯಲ್ಲಿ ಸುಧೀರ್ ಪೂಜಾರಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.