ಉಡುಪಿ: ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ; ಮೆಡಿಕಲ್ ನ ಲೈಸೆನ್ಸ್ ರದ್ದು

ಉಡುಪಿ: ಉಡುಪಿ ಕೆ.ಎಂ ಮಾರ್ಗದ ಬಳಿ ಇರುವ ಲಂಡನ್ ಮೆಡಿಕಲ್ಸ್ ಸಂಸ್ಥೆಯವರು ನೋಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಅಮಲು ಬರಿಸುವ ಔಷಧಗಳ ಮಾರಾಟ ಮಾಡುತ್ತಿರುವುದರಿಂದ ಸಂಸ್ಥೆಯ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ, ಸದರಿ ಸಂಸ್ಥೆಗೆ ಮಂಜೂರು ಮಾಡಿರುವ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ ಎಂದು ಉಡುಪಿ ವೃತ್ತ ಸಹಾಯಕ ಔಷಧ ನಿಯಂತ್ರಕರು ಮತ್ತು ಪರವಾನಿಗೆ ಪ್ರಾಧಿಕಾರಿ ಕೆ.ವಿ. ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.