ಬ್ರಹ್ಮಾವರ: ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಬ್ರಹ್ಮಾವರ: ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ಹಾರಾಡಿ ಗ್ರಾಮ ಹೊನ್ನಾಳ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಸಿಯಾ (32) ಎಂಬ ಮಹಿಳೆ ತನ್ನ ಮೂರು ಮಕ್ಕಳಾದ ಫಾತಿಮಾ ನಶ್ರಾ (11), ಅಬ್ದುಲ್ ಮುತ್ತಾಹೀರ್ (7) ಹಾಗೂ ಚಿಕ್ಕ ಮಗಳಾದ ಆಯಿಷಾ ಝಿಫ್ರಾ (3) ಅವರೊಂದಿಗೆ ಡಿಸೆಂಬರ್ 18ರಿಂದ ನಾಪತ್ತೆಯಾಗಿದ್ದಾರೆ.

ಫಾತಿಮಾ ತನ್ನ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಪತಿ ಮಹಮ್ಮದ್ ಖಲೀಲ್ ಬಳಿ ಹೇಳಿ ತೆರಳಿದ್ದರು. ಪತಿ ಮಧ್ಯಾಹ್ನ ಹೆಂಡತಿಯ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಹೆಂಡತಿಯ ತಂದೆಗೆ ಕರೆ ಮಾಡಿ ವಿಚಾರಿಸಿದಾಗ ಅವರು ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಆದರೆ ಫಾತಿಮ ತವರು ಮನೆಗೂ ಹೋಗದೆ, ಸಂಬಂಧಿಕರ ಮನೆಗೂ ಹೋಗದೆ ಕಣ್ಮರೆಯಾಗಿದ್ದಾರೆ. ಈ ಬಗ್ಗೆ ಪತಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.