ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡಲಾಗುವ ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ-2025ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.
ಸಮಗ್ರ ಸಾಹಿತ್ಯ ವಿಭಾಗಕ್ಕೆ ಸಂಬಂಧಿಸಿ ಧಾರವಾಡದ ಚನ್ನಪ್ಪ ಅಂಗಡಿ, ಸಂಶೋಧನೆ ಹಾಗೂ ವಿಮರ್ಶೆ ವಿಭಾಗಕ್ಕೆ ಉಡುಪಿಯ ಡಾ. ನಿಕೇತನಾ ಹಾಗೂ ಕಾವ್ಯ ವಿಭಾಗಕ್ಕೆ ಬೆಂಗಳೂರಿನ ಮುದಲ್ ವಿಜಯ್ ಆಯ್ಕೆಯಾಗಿದ್ದಾರೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಉಡುಪಿ ಶಾಖೆಯಲ್ಲಿ ನ. 22ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ, ಬೆಳ್ಳಿ ಪದಕ ಹಾಗೂ 5 ಸಾವಿರ ರೂ. ನಗದು ಒಳಗೊಂಡಿದೆ ಎಂದು ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















