ಕುಂದಾಪುರ: 30 ವರ್ಷಗಳಿಂದ ಕೊರಗ ಸಮುದಾಯದ ವ್ಯಕ್ತಿಯನ್ನು ಜೀತದಾಳಾಗಿ ಇಟ್ಟುಕೊಂಡು ದೌರ್ಜನ್ಯ ನಡೆಸಿದ ಆರೋಪ – ಮಹಿಳೆ ಬಂಧನ

ಉಡುಪಿ: ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು 30 ವರ್ಷಗಳಿಂದ ಮನೆಯಲ್ಲಿ ಜೀತಕ್ಕೆ ಇಟ್ಟು ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಬ್ಬರನ್ನು ಪೊಲೀಸರು‌ ಬಂಧಿಸಿದ್ದಾರೆ. ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರು ಸುಮಾರು 30 ವರ್ಷಗಳ ಹಿಂದೆ ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅವರ ಅಳಿಯ ಕರುಣಾಕರ ಶೆಟ್ಟಿ ಎಂಬವರು ನಾಗ […]

ಮಾ.14ರಂದು ರಾಜ್ಯ ಬಜೆಟಿನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮಂಡಿಸಿದ ಬಜೆಟ್ ಕರಾವಳಿ ಜನತೆಯ ಪಾಲಿಗೆ ಕರಾಳ ಬಜೆಟ್ ಆಗಿದ್ದು, ಕರಾವಳಿ ಜಿಲ್ಲೆಯನ್ನು ಸಂಪೂರ್ಣ ಹೊರಗಿಟ್ಟು, ಜಿಲ್ಲೆಯ ನಿರಂತರ ಕಡೆಗಣನೆ ಮುಂದುವರಿದಿದೆ. ಇದರ ವಿರುದ್ಧ ಉಡುಪಿ ನಗರ ಬಿಜೆಪಿ ವತಿಯಿಂದ ಉಡುಪಿ ಹಳೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಾರ್ಚ್ 14 ರಂದು ಸಂಜೆ 4.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹೇಳಿದರು. ಉಡುಪಿಯಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಉಡುಪಿ ಶಾಸಕರ […]

ಮಾ.31ರಿಂದ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಮುಖ್ಯಪ್ರಾಣ ದೇವರ ಶಿಲಾಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಹಾಗೂ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್ ನ ಆಶ್ರಯದಲ್ಲಿ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಶಿಲಾಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಮಾ.31ರಿಂದ ಎಪ್ರಿಲ್ 3ರವರೆಗೆ ಶ್ರೀಕ್ಷೇತ್ರ ಶಂಕರಪುರದಲ್ಲಿ ನಡೆಯಲಿದೆ ಎಂದು ಶ್ರೀ ಸಾಯಿ ಈಶ್ವರ್ ಗುರೂಜಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿಲಾಮೂರ್ತಿಯನ್ನು ಮಾರ್ಚ್ 14 ರಂದು ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಗುವುದು. ಮಾರ್ಚ್ 26ರಂದು […]

ಮಲ್ಹಾರ್ ಫ್ಯಾಷನ್ ಮೇಳ 2026: ಉಡುಪಿಯಲ್ಲಿ ಮಾ.14 ಮತ್ತು 15 ರಂದು ಎರಡು ದಿನಗಳ ಭರ್ಜರಿ ಮಾರಾಟ

ಉಡುಪಿ: ಉಡುಪಿಯ ಜೋಡುಕಟ್ಟೆಯ ಡಯಾನಾ ಹೋಟೆಲ್‌ನಲ್ಲಿ ಮಾರ್ಚ್ 14 ಮತ್ತು 15 ರಂದು “ಮಲ್ಹಾರ್ ಫ್ಯಾಷನ್ ಫೇರ್ 2026” ಎಂಬ ಹೆಸರಿನಲ್ಲಿ ಭರ್ಜರಿ ಫ್ಯಾಷನ್ ಮೇಳ ಆಯೋಜಿಸಲಾಗಿದೆ. ಈ ಫ್ಯಾಷನ್ ಮೇಳದಲ್ಲಿ ವಿವಿಧ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು ಸೇರಿದಂತೆ ಹಲವಾರು ಹೊಸ ಫ್ಯಾಷನ್ ಉಡುಪುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ ಕೊರಿಯನ್ ಜುವೆಲ್ಲರಿ, ಆಂಟಿಕ್ ಜುವೆಲ್ಲರಿ, ಒನ್ ಗ್ರಾಮ್ ಜುವೆಲ್ಲರಿ, ಬ್ಯಾಗ್‌ಗಳು ಮತ್ತು ಬೆಡ್‌ಶೀಟ್‌ಗಳು ಸಹ ವಿಶೇಷ ರಿಯಾಯಿತಿಯಲ್ಲಿ ದೊರೆಯಲಿವೆ. ಮಾರ್ಚ್ 14 ಮತ್ತು 15ರಂದು ಬೆಳಗ್ಗೆ […]

ಉಡುಪಿ:ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಭೂಮಿಕಾ ಮೇಸ್ತಾ ಆಯ್ಕೆ

ಉಡುಪಿ: ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿನಿ ಭೂಮಿಕಾ ಮೇಸ್ತಾ ಅವರು ಕರ್ನಾಟಕ ರಾಜ್ಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ಭುಬನೇಶ್ವರ (ಒಡಿಶಾ) ನಲ್ಲಿ ಮಾರ್ಚ್ 15ರಿಂದ 20ರವರೆಗೆ ನಡೆಯಲಿರುವ 26ನೇ ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಪರವಾಗಿ ಭೂಮಿಕಾ ಮೇಸ್ತಾ ಭಾಗವಹಿಸಲಿದ್ದಾರೆ. ಮಿಲಾಗ್ರೆಸ್ ಕಾಲೇಜು ಕಲ್ಯಾಣಪುರವು ಇತ್ತೀಚೆಗೆ NAAC ನಿಂದ A+ ಗ್ರೇಡ್ ಪಡೆದುಕೊಂಡಿದ್ದು, ವಿದ್ಯಾರ್ಥಿನಿಯ ಈ ಸಾಧನೆ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ […]