ಸರ್ಕಾರಿ ಶಾಲೆಯಲ್ಲಿರುವ ಎಲ್.ಕೆ.ಜಿ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು, ಮಧ್ಯಾಹ್ನದ ಬಿಸಿಯೂಟ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿರುವ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. 2019–20ನೇ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ವಿಭಾಗಗಳನ್ನು ಆರಂಭಿಸಲಾಗಿತ್ತು. ಆದರೆ, ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ ಆಗಿರಲಿಲ್ಲ. ಪ್ರಧಾನಮಂತ್ರಿ ಪೋಷಣ್‌ ಶಕ್ತಿ ಅಭಿಯಾನದ ಅನುಮೋದನಾ ಮಂಡಳಿಯ ಸಭೆಯ ನಿರ್ಧಾರದಂತೆ ಡಿ.1ರಿಂದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೂ ವಿಸ್ತರಿಸಲಾಗಿದೆ. ಪ್ರತಿ ಮಗುವಿಗೆ ಪ್ರತಿದಿನ ಕೇಂದ್ರ ಸರ್ಕಾರ ₹4.07, ರಾಜ್ಯ ಸರ್ಕಾರ ₹2.71 ವೆಚ್ಚ ಮಾಡಲಿವೆ. ಒಟ್ಟು ಆಹಾರ […]

ಡಿಸೆಂಬರ್ 25 ರಿಂದ ಮಂಗಳೂರಿನಿಂದ ನವಿ ಮುಂಬೈಗೆ ವಿಮಾನಸೇವೆ ಆರಂಭ.

ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಕ್ರಿಸ್‌ಮಸ್‌ ದಿನದಂದು ( ಇದೇ 25) ದೈನಂದಿನ ನೇರ ವಿಮಾನ ಸೇವೆ ಆರಂಭವಾಗಲಿದೆ. ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನಗಳು ದಿನದಲ್ಲಿ ನಾಲ್ಕು ಬಾರಿ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಒಂದು ವಿಮಾನ ದಿನದಲ್ಲಿ ಒಮ್ಮೆ ಮಂಗಳೂರು – ಗ್ರೀಫ್‌ ಫೀಲ್ಡ್‌ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ನವಿ ಮುಂಬೈ ನಡುವೆ ಸಂಚಾರ ನಡೆಸಲಿವೆ. ನವಿ ಮುಂಬೈನಿಂದ ಮಂಗಳೂರಿಗೆ (6ಇ […]

ಮಣಿಪಾಲದ MSDC ಯಲ್ಲಿದೆ ವಿವಿಧ ಉದ್ಯೋಗಾವಕಾಶ: ಆಸಕ್ತಿ, ಅರ್ಹತೆ ಇದ್ದರೆ ಕೂಡಲೇ ಅರ್ಜಿ ಸಲ್ಲಿಸಿ.

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ( ಟಿಎಂಎ ಪೈ ಫೌಂಡೇಶನ್’ನ ಒಂದು ಘಟಕ) MSDCಯಲ್ಲಿ ನೇಮಕಾತಿ ನಡೆಯುತ್ತಿದ್ದು ಸ್ಕಿಲ್ ಟ್ರೈನರ್ – PCB ಡಿಸೈನ್ & ಡೆವಲಪ್‌ಮೆಂಟ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಗಳು:BE ಇನ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ (E&C) / ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ (E&E) – PCB ಡಿಸೈನ್ (Ki-CAD/Altium) ಜ್ಞಾನ ಅಗತ್ಯ. ಡಿಪ್ಲೊಮಾ ಇನ್ E&C / E&E – 1 ವರ್ಷದ ಅನುಭವ ಮತ್ತು PCB ಡಿಸೈನ್ ಜ್ಞಾನ (Ki-CAD/Altium) […]

ಕೋಟೇಶ್ವರ ದೇವಳ ಕೊಡಿ ಹಬ್ಬ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಕಲಾರಾಧಾನೆ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ. ಭಗವಂತನಿಗೆ ಅತೀ ಪ್ರಿಯವಾದದ್ದು ಕಲಾ ಸೇವೆ. ಅದು ನೃತ್ಯ, ಯಕ್ಷಗಾನ ಅಥವಾ ಇನ್ನಾವುದೇ ರೂಪದಲ್ಲಿ ಇರಬಹುದು. ಕಲಾ ಸೇವೆಯಿಂದ ಮನುಷ್ಯ ಅತೀ ಉನ್ನತ ಸ್ಥಾನವನ್ನು ಏರ ಬಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ( ಕೊಡಿ ಹಬ್ಬ) ಪ್ರಯುಕ್ತ ದೇವಸ್ಥಾನದ ಶಾಂತಾರಾಮ ರಂಗಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಗವಂತ ಶ್ರೀಕೃಷ್ಣನಿಗೆ […]

ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್: ಇಬ್ಬರು ವಿದ್ಯಾರ್ಥಿಗಳಿಗೆ ಕಾರಂತ ಬಾಲ ಪುರಸ್ಕಾರ.

ಕುಂದಾಪುರ: ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರ ನಾರಾಯಣದ ಪ್ರತಿಭಾ ಪರಂಪರೆಗೆ ಮತ್ತೊಂದು ಸುವರ್ಣ ಕಿರೀಟ ಸೇರ್ಪಡೆಗೊಂಡಿದೆ. ಸಂಸ್ಥೆಯ ಹೆಮ್ಮೆಯ ಬಾಲ ಪ್ರತಿಭೆಗಳಾದ ಪನ್ನಗ ಕೆ. ಆರೂರ್ ಹಾಗೂ ಕು. ಸ್ಮಿತಾ ಬಿ. ಕೆ. ಇವರಿಗೆ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಮಾತಿನಂತೆ 2025ರ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಲಭಿಸಿರುವುದು ಸಂಸ್ಥೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಬಹುಮುಖ ಪ್ರತಿಭೆಯಾದ ಪನ್ನಗ ಕೆ. ಆರೂರ್. ಅವರು ಕೇವಲ ನಾಲ್ಕನೇ ವಯಸ್ಸಿನಲ್ಲಿಯೇ ಕಲಾರಾಧನೆಗೆ ತೊಡಗಿಕೊಂಡು, ಐದನೇ ವಯಸ್ಸಿನಲ್ಲಿ […]