ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ: ನಗರದಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್!

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಎಲ್ಲಾ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೋಡ್ ಶೋ ನಡೆಯುವ ಬನ್ನಂಜೆಯಿಂದ ಕಲ್ಸಂಕದವರೆಗೆ ಬ್ಯಾರಿಕೇಡ್ ಅಳವಡಿಸಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ದಾರಿಯುದ್ದಕ್ಕೂ ಎರಡು ಬದಿಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿತು. ಇಕ್ಕೆಲಗಳಲ್ಲಿ ಸಾಗುವ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಹಾಗೂ ಬ್ಯಾಗ್ ಗೋಣಿಚೀಲಗಳನ್ನು ಪರಿಶೀಲನೆ ನಡೆಸಲಾಯಿತು. ಬೆಳಗ್ಗೆ 8:30ರ ಬಳಿಕ ಬನ್ನಂಜೆ ಮಾರ್ಗದಲ್ಲಿ ಖಾಸಗಿ ವಾಹನವನ್ನು ಸಂಪೂರ್ಣ ನಿರ್ಬಂಧಿಸಲಾಯಿತು.ಆ ಬಳಿಕ […]
ಮಂಗಳೂರಿನಲ್ಲಿ ಜಿಐಎಸ್ ಆಧಾರಿತ ಒಳಚರಂಡಿ ಮ್ಯಾಪಿಂಗ್ ಯೋಜನೆಗೆ ನಿಟ್ಟೆ ತಾಂತ್ರಿಕ ವಿದ್ಯಾರ್ಥಿಗಳ ಸಾಥ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದ ಶ್ರೇಷ್ಠಿ, ಅವ್ಯಯ ಶರ್ಮಾ ಪಿ, ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಾಸವಿ ನಾಗರಾಜ್ ಜೋಶಿ ಹಾಗೂ ಮಂಗಳೂರಿನ ಕೆಲ ಎಂಜಿನಿಯರಿಂಗ್ ಕಾಲೇಜುಗಳ ಆರು ವಿದ್ಯಾರ್ಥಿಗಳು ಸೇರಿದಂತೆ ಮಂಗಳೂರಿನ ಅಂಡರ್ಗ್ರೌಂಡ್ ಒಳಚರಂಡಿ ಜಾಲದ ನಿರ್ವಹಣೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಜಿಐಎಸ್ ಆಧಾರಿತ ಮ್ಯಾಪಿಂಗ್ ಉಪಕ್ರಮಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಇಇ ಎಂ.ಎನ್.ಶಿವಲಿಂಗಪ್ಪ ಮತ್ತು […]
ಬಾಲಕಿಯನ್ನು ಅಪಹರಿಸಿ 90,000 ಕ್ಕೆ ಮಾರಾಟ ಮಾಡಿದ ಸೋದರ ಮಾವ; ಮುಂಬೈ ಪೋಲಿಸರಿಂದ ಬಾಲಕಿ ರಕ್ಷಣೆ!

ಮುಂಬೈ: ಸೋದರ ಮಾವನೇ ಬಾಲಕಿಯನ್ನು ಅಪಹರಿಸಿ ₹ 90 ಸಾವಿರಕ್ಕೆ ಮಾರಾಟ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಮುಂಬೈ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆಯಲ್ಲಿ ಅಪಹರಣಕ್ಕೆ ಒಳಗಾಗಿ ಮಾರಾಟವಾಗಿದ್ದ ಬಾಲಕಿ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾಳೆ. ವಕೋಲಾ ಪ್ರದೇಶದಿಂದ ಬಾಲಕಿಯ ಸೋದರ ಮಾವ ಹಾಗೂ ಇತರ ಐವರು ಗುರುವಾರ ಮಧ್ಯರಾತ್ರಿ ಅಪಹರಿಸಿದ್ದರು. ನಂತರ * 90 ಸಾವಿರಕ್ಕೆ ಮಾರಾಟ ಮಾಡಿದ್ದರು. ನಂತರ ಆಕೆಯನ್ನು ಖರೀದಿಸಿದ್ದ ವ್ಯಕ್ತಿ ₹1,80,000ಕ್ಕೆ ಮರು ಮಾರಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. […]
ಉಡುಪಿ:ಸಾಲ ಯೋಜನೆಯ ದಿನಾಂಕ ವಿಸ್ತರಣೆ

ಉಡುಪಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಆನೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಈಗಾಗಲೇ ರಾಜ್ಯದಲ್ಲಿ 3,434 ಅರ್ಜಿಗಳು ಸಲ್ಲಿಕೆಯಾಗಿದ್ದು, ದಕ್ಷಿಣ ಕನ್ನಡದಿಂದ 429 ಮತ್ತು ಉಡುಪಿ ಜಿಲ್ಲೆಯಿಂದ 150 ಅರ್ಜಿಗಳು ಬಂದಿವೆ. ಕ್ರಿಶ್ಚಿಯನ್ ಸಮುದಾಯದ ಹೆಚ್ಚಿನ ಅರ್ಹ ಫಲಾನುಭವಿಗಳು ಲಾಭ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆನ್ಸೆನ್ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ನ.30ರಿಂದ ಡಿ.15ರವರೆಗೆ ವಿಸ್ತರಿಸಲಾಗಿದ್ದು, ಸಮುದಾಯದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯ ಪ್ರಯೋಜನವನ್ನು ಪಡೆಯುವಂತೆ […]
ಬರೋಬ್ಬರಿ 350 ಕೆ.ಜಿ ತೂಕದ ಬೃಹತ್ ಗಾತ್ರದ ಮಡಲು ಮೀನು ಬಲೆಗೆ!

ಮಲ್ಪೆ: ಗಿಲ್‌ನೆಟ್ ಮೀನುಗಾರರ ಬಲೆಗೆ ಸ್ಥಳೀಯವಾಗಿ ಕರೆಯುವ ಬೃಹತ್ ಗಾತ್ರದ ಮಡಲು ಮೀನು ದೊರೆತಿರುವ ಬಗ್ಗೆ ವರದಿಯಾಗಿದೆ. ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ಗಿಲ್‌ನೆಟ್ ಮೀನುಗಾರರ ಬಲೆಗೆ ಬಿದ್ದ ಈ ಮೀನನ್ನು ಮಲ್ಪೆ ಬಂದರಿಗೆ ತರಲಾಗಿದೆ. ಕೇರಳದಲ್ಲಿ ಕಟ್ಟಕಂಬ ಎಂದು ಕರೆಯಲ್ಪಡುವ ಈ ಮೀನು ಸುಮಾರು 13 ಅಡಿ ಉದ್ದದ ಈ ಮೀನು 350 ಕೆಜಿ ತೂಕವನ್ನು ಹೊಂದಿದೆ. ಈ ಮೀನು ಕೆ.ಜಿ.ಗೆ 70ರೂ.ನಂತೆ ಕೇರಳದ ಮೀನು ವ್ಯಾಪಾರಸ್ಥರಿಗೆ ಮಾರಾಟವಾಗಿದೆ. ಮಲೆನಾಡು ಮತ್ತು ಕೇರಳದಲ್ಲಿ ಇದಕ್ಕೆ ಹೆಚ್ಚು […]