ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಭಾರತ ಭಾಗ್ಯ ವಿಧಾತ” ಬಿರುದು ಪ್ರದಾನ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಶ್ರೀಕೃಷ್ಣ ಮಠದ ವತಿಯಿಂದ ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುತ್ತಿಗೆ ಮಠದಿಂದ “ಭಾರತ ಭಾಗ್ಯ ವಿಧಾತ” ಬಿರುದು ನೀಡಿ ಸನ್ಮಾನಿಸಲಾಯಿತು. ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು, ಬಿರುದು ನೀಡಿ ಸನ್ಮಾನಿಸಿದರು. ಕಾಶಿ ಕಾರಿಡಾರ್ ರೀತಿಯಲ್ಲಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಅವರು ಮನವಿ ಮಾಡಿದರು. ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ […]
ಉಡುಪಿ:ಹೀರೋಶಕ್ತಿ ಮೋಟರ್ಸ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ :ಹೀರೋಶಕ್ತಿ ಮೋಟರ್ಸ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔹ಸೇಲ್ಸ್ ಮ್ಯಾನೇಜರ್ 1- ಉಡುಪಿ🔹ಬ್ರಾಂಚ್ ಮ್ಯಾನೇಜರ್ 1- ಬ್ರಹ್ಮಾವರ🔹ಬ್ರಾಂಚ್ ಮ್ಯಾನೇಜರ್ 1 -ಸಿದ್ಧಾಪುರ🔹 ಸೇಲ್ಸ್ ಎಕ್ಸಿಕ್ಯೂಟಿವ್ 2 -ಬ್ರಹ್ಮಾವರ ಅನುಭವಿ ಆಟೋಮೊಬೈಲ್ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ. ಆಕರ್ಷಕ ಸಂಬಳ + ಪಿಎಫ್ / ಇಎಸ್ಐ ಮತ್ತು ಪ್ರೋತ್ಸಾಹಧನ ಸೌಲಭ್ಯವಿದೆ. ನಿಮ್ಮ ರೆಸ್ಯೂಮ್ ಕಳುಹಿಸಿ: [email protected]ಸಂಪರ್ಕಿಸಿ: +91 7996210666
ಶ್ರೀಲಂಕಾದಲ್ಲಿ ಭಾರಿ ಮಳೆ, ಭೂಕುಸಿತ: 56 ಮಂದಿ ಮೃತ್ಯು; 600ಕ್ಕೂ ಹೆಚ್ಚು ಮನೆಗೆ ಹಾನಿ

ಶ್ರೀಲಂಕಾದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರೊಂದಿಗೆ ಅಲ್ಲಲ್ಲಿ ಭೂಕುಸಿತಗಳೂ ಸಂಭವಿಸಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ನಿರಂತರ ಮಳೆಯಿಂದಾಗಿ ಮನೆಗಳು, ಹೊಲಗಳು, ರಸ್ತೆಗಳು ಜಲಾವೃತವಾಗಿದ್ದು, ಭೂಕುಸಿತ ಸಂಭವಿಸಿದೆ. ಇದುವರೆಗೆ 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ಶ್ರೀಲಂಕಾ ಸರ್ಕಾರ ರಜೆ ಘೋಷಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ವಾತಾವರಣ ಮುಂದುವರಿದರೆ, ಬಂದ್ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಲರ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಅಲರ್ ಇನ್ನೋವೇಶನ್ ಸಹಯೋಗದೊಂದಿಗೆ ದಿನಾಂಕ 22 ನವೆಂಬರ್ 2025 ರಂದು “ಅಲರ್ ಸೆಂಟರ್ ಆಫ್ ಎಕ್ಸಲೆನ್ಸ್” ಅನ್ನು ಉದ್ಘಾಟಿಸಲಾಯಿತು. ಇದು ಸಂಸ್ಥೆಯ ನಾವೀನ್ಯತೆ ಮತ್ತು ಉದ್ಯಮ – ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಈ ಕೇಂದ್ರವು ಪ್ರಾಯೋಗಿಕ ಸಂಶೋಧನೆ, ಮೂಲಮಾದರಿ ಅಭಿವೃದ್ಧಿ ಮತ್ತು ಉದ್ಯಮ – ಶೈಕ್ಷಣಿಕ ಸಹಯೋಗವನ್ನು ಸಕ್ರಿಯಗೊಳಿಸುವ ಮೂಲಕ ನಾವಿನ್ಯತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಹಾಗೂ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಮಾರ್ಗದರ್ಶನವನ್ನು ನೀಡುತ್ತದೆ. […]
ಕ್ರೈಸ್ಟ್ಕಿಂಗ್:ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಸ್ಥಳೀಯ ಗಾಂಧೀ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳ ನಗರ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಶೇಖರ್ ನಾಯ್ಕ್ ಅವರು ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿದರು. ರಾಷ್ಟ್ರೀಯ ವಾಲಿಬಾಲ್ ಆಟಗಾರ, ಕಾರ್ಕಳದ ಝಕ್ರಿಯಾ ಎಂ ಅವರು ಕ್ರೀಡಾ ಜ್ಯೋತಿ ಬೆಳಗಿದರು. ಕಾರ್ಕಳ ಯುವಜನ ಸೇವಾ ಅಧಿಕಾರಿ ಹಾಗೂ ಸರಕಾರಿ ಪ್ರೌಢಶಾಲೆ, ಹಿರ್ಗಾನ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ಕ್ರೀಡಾ […]