ಸುರತ್ಕಲ್: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸೋರಿಕೆ: ಭೀತಿಯ ವಾತಾವರಣ ನಿರ್ಮಾಣ

ಸುರತ್ಕಲ್‌: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದ ಘಟನೆ ರಾ.ಹೆ. 66ರ ಸುರತ್ಕಲ್ ಅಥರ್ವಾ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ವರದಿಯಾಗಿದೆ. ಗೇಲ್ ಇಂಡಿಯಾ ಕಂಪೆನಿಗೆ ಸೇರಿದ ತೆರೆದ ಲಾರಿಯಲ್ಲಿ ಸಿಎನ್ ಜಿ ಆಟೋ ಅನಿಲವನ್ನು ಪಣಂಬೂರು ಶೇಖರಣಾ ಘಟಕದಿಂದ ಉಡುಪಿ ಕಡೆ ಬೃಹತ್ ಸಿಲಿಂಡರ್ ಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು ಕೆಲಹೊತ್ತು ಸಾರ್ವಜನಿಕರು ಆತಂಕಕ್ಕೀಡಾದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಮತ್ತು […]

ಬಿಹಾರ ಚುನಾವಣೆಯಲ್ಲಿ ಬಿಜೆಪಿ ವಿಜಯ: ಮೈಥಿಲಿ ಠಾಕೂರ್ ಅತ್ಯಂತ ಕಿರಿಯ ಶಾಸಕಿ!

ಪಾಟ್ನಾ: ಬಿಹಾರ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ರಾಜಕೀಯ ಪ್ರವೇಶ ಮಾಡಿದ್ದ ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ ಮೈಥಿಲಿ ಠಾಕೂರ್, ದರ್ಭಾಂಗ್ ಜಿಲ್ಲೆಯ ಅಲಿನಗರ ಕ್ಷೇತ್ರದಿಂದ ಗೆದ್ದದ್ದಾರೆ. ಕೇವಲ 25 ವರ್ಷ ವಯಸ್ಸಿನ ಮೈಥಿಲಿ ಬಿಹಾರದ ಅತ್ಯಂತ ಕಿರಿಯ ಶಾಸಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೊದಲ ಬಾರಿಗೆ ಅಲಿನಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೈಥಿಲಿ, ಆರ್​ಜೆಡಿ ಅಭ್ಯರ್ಥಿ ವಿನೋದ್ ಮಿಶ್ರಾ ಅವರನ್ನು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ […]

ಕಾರ್ಕಳ: ಯುವಕ ಮೃತ್ಯು

ಕಾರ್ಕಳ: ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಜೆಸಿಬಿ ಅಡಿಗೆ ನಡುವೆ ಸಿಲುಕಿ ಮೃತಪಟ್ಟ ಘಟನೆ ನ.13ರಂದು ಮಧ್ಯಾಹ್ನ ವೇಳೆ ಮಿಯ್ಯಾರು ಗ್ರಾಮದ ಇಂಡಸ್ಟೀಯಲ್ ಏರಿಯಾದಲ್ಲಿ ನಡೆದಿದೆ. ಮೃತರನ್ನು ಚಿಂಟು ಚೌಹಾಣ್(26) ಎಂದು ಗುರುತಿಸಲಾಗಿದೆ. ಇವರು ವಿಶ್ವಾಸ್ ಗ್ಯಾರೇಜ್ನಲ್ಲಿ ಜೆಸಿಬಿ ಆಪರೇಟರ್ ಸಾಗರ್, ಜೆಸಿಬಿಯ ಮುಂದಿನ ಬಕೆಟ್ನ್ನು ಎತ್ತಿಹಿಡಿದಿದ್ದು, ಒಮ್ಮೆಲೇ ನಿರ್ಲಕ್ಷತನದಿಂದ ಕೆಳಗೆ ಇಳಿಸಿದ ಪರಿಣಾಮ ಜೆಸಿಬಿ ರಿಪೇರಿ ಕೆಲಸ ಮಾಡುತ್ತಿದ್ದ ಚಿಂಟು ಚೌಹಾಣ್ ಜೆಸಿಬಿಯ ಮುಂದಿನ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿದರೆನ್ನ ಲಾಗಿದೆ. ಇದರಿಂದ ಗಂಭೀರವಾಗಿ […]

ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ; ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಮೃತ್ಯು.

ಶ್ರೀನಗರ, ನ.15: ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಒಂಭತ್ತು ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಮೂವರು ನಾಗರಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಶ್ರೀನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಪೊಲೀಸರು, ವಿಧಿವಿಜ್ಞಾನ ಸಿಬ್ಬಂದಿ ಸೇರಿದ್ದಾರೆ ಎಂದು ಪೊಲೀಸ್ ಮೂಲವನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಫೋಟದ ತೀವ್ರತೆಯಿಂದ ಠಾಣೆ ಕಟ್ಟಡಕ್ಕೂ ಹಾನಿಯಾಗಿದೆ. ಸ್ಥಳದಲ್ಲೇ ಏಳು ಮೃತದೇಹಗಳು ಪತ್ತೆಯಾಗಿದ್ದು, […]

ಉಡುಪಿ:ಪೋಷಕರ – ಶಿಕ್ಷಕರ ಮಹಾಸಭೆ, ಮಕ್ಕಳ ದಿನಾಚರಣೆ ಕಾರ್ಯಕ್ರಮ

ಉಡುಪಿ: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇವರ ಜಂಟಿ ಆಶ್ರಯದಲ್ಲಿ ಪೋಷಕರ – ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಶುಕ್ರವಾರ ಮಣಿಪಾಲದ ರಾಜೀವನಗರ ಸರಕಾರಿಸಂಯುಕ್ತ ಪ್ರೌಢಶಾಲೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಈ ಸಂದರ್ಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಎಲ್ಲಾ ಪೋಷಕರು ಶಾಲೆಯ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸುವುದರೊಂದಿಗೆ […]