ಕಾರ್ಕಳ ಕ್ರೈಸ್ಟ್ಕಿಂಗ್: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೀತಗಾಯನ ಸ್ಪರ್ಧೆಯಲ್ಲಿ ರೋವರ‍್ಸ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಜಿಲ್ಲಾ ಸಂಸ್ಥೆಉಡುಪಿ ಇದರ ವತಿಯಿಂದ ಉಡುಪಿಯ ಮಣಿಪಾಲದ ಪ್ರಗತಿನಗರದಲ್ಲಿರುವ ಡಾ. ವಿ.ಎಸ್.ಆಚಾರ್ಯ ತರಬೇತಿ ಕೇಂದ್ರದಲ್ಲಿನಡೆದ ಉಡುಪಿ ಜಿಲ್ಲಾಮಟ್ಟದ ರೋವರ‍್ಸ್ ಮತ್ತು ರೇಂಜರ್ಸ್ ವಿಭಾಗದಗೀತಗಾಯನ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ರೋವರ‍್ಸ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ರೋರ‍್ಸ್ಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಆರ್ಯನ್ ಕೋಟ್ಯಾನ್, ನಿಹಾಲ್, ಮೊಹಮ್ಮದ್ ರಿಜಾನ್, ವೀಕ್ಷಿತ್,ಮೊಹಮ್ಮದ್ ಝಮೀರ್, ಪ್ರಥಮ ವಾಣಿಜ್ಯ ವಿಭಾಗದ ಶ್ರಧಿಕ್ತಂಡವನ್ನು ಪ್ರತಿನಿಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ:ಸಿ.ಎ. ಇಂಟರ್ ಮೀಡಿಯೆಟ್ 2025: ಆಳ್ವಾಸ್ ಕಾಲೇಜಿನ 34 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ: ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ ಬಿ.ಕಾಂ. ವಿದ್ಯಾರ್ಥಿಗಳಾದ ಶರಣ್ಯ ಬಂಗೇರ, ಭವಿತ್ ಹೆಗ್ಡೆ, ಶ್ರೀರಾಗ್ ಸಿ, ರಕ್ಷಿತ್ ಆರ್ ದೇವಾಡಿಗ, ಜೊಸ್ವಿನ್, ಖುಷಿ ಆರ್ ಪೂಜಾರಿ, ಪೂರ್ವಿಕಾ, ಧನ್ಯಾ ಆರ್, ಅನೂಪ್ ಹಾಗೂ ಕೌಶಿಕ್ ಇವರು ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಅಂಕದೊAದಿಗೆ ಉತ್ತೀರ್ಣರಾಗಿದ್ದಾರೆ. ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ಅಮೃತಾ, ಪ್ರಸ್ಮಿಯಾ, ವಿಜಯ್ ಕುಮಾರ್, ಅನಿಶಾ, ಶ್ರೇಯಾ ಸುರೇಂದ್ರ ಪೂಜಾರಿ, ಶ್ರೀನಿಧಿ, […]
ಮೂಡ್ಲಕಟ್ಟೆ: ನವೋನ್ಮೇಶ 2025 ಉದ್ಘಾಟನಾ ಕಾರ್ಯಕ್ರಮ.

ಕುಂದಾಪುರ: ಐ ಎಮ್ ಜೆ ಇನ್ಸ್ಟಿಟ್ಯೂಶನ್ಸ್ ಮೂಡ್ಲಕಟ್ಟೆ ಇಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ದೆ ನವೋನ್ಮೇಶ 2025 ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಉದ್ಘಾಟಕರಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಖ್ಯಾತ ಚಲನಚಿತ್ರ ನಟ ದೀಪಕ್ ರೈ ಪಾಣಾಜೆ ಆಗಮಿಸಿದ್ದರು. ಉದ್ಘಾಟನಾ ಭಾಷಣ ಮಾಡಿದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಕ್ಕಳು ವಿದ್ಯೆ ಜೊತೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತ ಸಂಸ್ಥೆಯ ಸ್ಥಾಪಕರಾದ ದಿ.ಐ ಎಮ್. ಜಯರಾಮ್ ಶೆಟ್ಟಿ ಹಾಗೂ ಬೆಳವಣಿಗೆಗೆ […]
ವನ್ಯಜೀವಿಧಾಮ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಷರತ್ತುಬದ್ಧ ಅನುಮತಿ!

ಬೆಂಗಳೂರು: ಶರಾವತಿ ಸಿಂಗಳೀಕ ವನ್ಯಜೀವಿಧಾಮ, ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ರಸ್ತೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣದ ಯೋಜನೆಗಳಿಗೆ ಬುಧವಾರ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆ ಷರತ್ತುಬದ್ಧ ಒಪ್ಪಿಗೆ ನೀಡಿದೆ.ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಯೋಜನೆಯನ್ನು ರೂಪಿಸಬೇಕು ಎಂಬ ಕರಾರು ವಿಧಿಸಿ ಸಭೆ ಅನುಮೋದನೆ ನೀಡಿತು. ಚಿತ್ತಾಪುರದಲ್ಲಿ ಚಿರತೆ ಸಂರಕ್ಷಣಾ ಮೀಸಲು ಸ್ಥಾಪಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ […]
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಫ್ರಾಂಚೈಸಿ ಮಾರಾಟ: ಅದಾನಿ ಸೇರಿದಂತೆ ಹಲವು ಕಂಪನಿಗಳಿಂದ ಖರೀದಿಗೆ ಆಸಕ್ತಿ!

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಮಾರಾಟ ಇದೀಗ ಅಧಿಕೃತಗೊಂಡಿದೆ. ಆರ್‌ಸಿಬಿಯ ಮಾತೃಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಬಾಂಬೆ ಷೇರುಪೇಟೆಗೆ ಈ ಮಾರಾಟದ ಮಾಹಿತಿಯನ್ನು ನೀಡಿದೆ. 2026ರ ಮಾ.31ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣ ಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. “ಯುನೈಟೆಡ್ ಸ್ಪಿರಿಟ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಆರ್ ಸಿಎಸ್‌ಪಿಎಲ್ ಸಂಸ್ಥೆಯನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಇದು ಆರ್‌ಸಿಬಿ ಪುರುಷ ಹಾಗೂ ಮಹಿಳಾ ತಂಡಗಳ ಮೇಲಿನ ನಿಯಂತ್ರಣವನ್ನು ವರ್ಗಾಯಿಸುತ್ತದೆ’ ಷೇರುಪೇಟೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖೀಸಲಾಗಿದೆ.17000 ಕೋಟಿ ರೂ.ಗೆ ಬೇಡಿಕೆ: ಆರ್‌ಸಿಬಿ […]