ಮಂಗಳೂರು: ಚಿಪ್ಸ್ ಪ್ಯಾಕೆಟ್’ನಲ್ಲಿ ಹಾವಿನ ದೇಹ ಪತ್ತೆ!

ಮದರಸದಿಂದ ವಾಪಸಾಗುತ್ತಿದ್ದ ವೇಳೆ ಮಕ್ಕಳು ಸ್ಥಳೀಯ ಅಂಗಡಿಯಿಂದ ಜಂಕ್ ಫುಡ್ ಪ್ಯಾಕೆಟ್ ಖರೀದಿಸಿ ತಿನ್ನುವ ವೇಳೆ ಇದು ಪತ್ತೆಯಾಗಿದೆ. ಈ ವಿಚಾರವನ್ನು ಮಕ್ಕಳು ತಕ್ಷಣ ಮನೆಯವರಿಗೆ ತಿಳಿಸಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿದೆ ಹಾಗೂ ಅವರು ಆರೋಗ್ಯವಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮನೆಯವರು ಸಂಬಂಧಪಟ್ಟ ಇಲಾಖೆಗೆ ಇದುವರೆಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.
ಬಂಟಕಲ್:ಆವಿಷ್ಕಾರ್ 2025: ಕರ್ನಾಟಕದ ಯುವ ವಿಜ್ಞಾನಿಗಳಿಗೆ ರಾಜ್ಯಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆ

ಉಡುಪಿ, ಬಂಟಕಲ್: ಬಂಟಕಲ್‌ನಲ್ಲಿರುವ ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಮತ್ತು ಫ್ರೌಢಶಾಲಾವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಹಾಗೂ ಹೊಸಆಲೋಚನೆಗಳನ್ನು ಉತ್ತೇಜಿಸಲು ಆವಿಷ್ಕಾರ 2025 ರಾಜ್ಯಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆಯನ್ನು ದಿನಾಂಕ 15 ನವೆಂಬರ್ 2025 ರಂದು ಆಯೋಜಿಸಲಾಗಿದೆ. ವಿಜ್ಞಾನದಲ್ಲಿ ಆಸಕ್ತಿ ಬೆಳೆಸುವ, ಸೃಜನಾತ್ಮಕ ಚಿಂತನೆಗೆ ಉತ್ತೇಜನನೀಡುವ ಹಾಗೂ ತಂತ್ರಜ್ಞಾನ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದಆವಿಷ್ಕಾರ 2025 ಯನ್ನು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯ್ಯಲ್ ಐ. ಎ. ಎಸ್ ಇವರು ಮುಖ್ಯ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕೋತ್ಸವ 2025 ಸಮಾರೋಪ ಸಮಾರಂಭ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ೩೦ಗಂಟೆಗಳ ಹ್ಯಾಕಥಾನ್ –ಹ್ಯಾಕೋತ್ಸವ 2025ರ ಸಮಾರೋಪ ಸಮಾರಂಭವು 04 ನವಂಬರ್2025 ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು. ಬೆಂಗಳೂರಿನ ನಿಯೋಕ್ರಡ್‌ನ ತಂತ್ರಜ್ಞಾನ ವಿಭಾಗದಉಪಾಧ್ಯಕ್ಷರಾದ ರವಿಶಂಕರ್ ನಟೇಶ್‌ಮೂರ್ತಿ ಅವರುಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಹ್ಯಾಕೋತ್ಸವದ ಮೂಲಕವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ಪ್ರದರ್ಶಿಸಲುಸರಿಯಾದ ವೇದಿಕೆಯನ್ನು ನೀಡಿದ್ದಕ್ಕಾಗಿ ಕಾಲೇಜನ್ನು ಶ್ಲಾಘಿಸಿದರು.ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪರಿಣತಿಯನ್ನುಪಡೆಯುವಂತೆ ಸಲಹೆ ನೀಡಿದರು. ಇದು ಅವರ ವೃತ್ತಿ ಜೀವನದಲ್ಲಿಉನ್ನತ ಸ್ಥಾನಕ್ಕೆ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಗೆ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ವಿಭಾಗದ ವಿದ್ಯಾರ್ಥಿನಿಯಾದಅನನ್ಯಾ ಭಟ್ ಇವರು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಾಜ್ಯ ಮಟ್ಟದ ಅಂತರ್ ಕಾಲೇಜು ಕರಾಟೆ ಪಂದ್ಯಾವಳಿ 2025-26 ರ ಮಹಿಳೆಯರ 55 ಕೆಜಿ ವಿಭಾಗದ ಕುಮಿಟೆಯಲ್ಲಿ ರನ್ನರ್ ಆಫ್ ಬಹುಮಾನವನ್ನು ಪಡೆದಿರುತ್ತಾರೆ. ಈ ಪಂದ್ಯಾವಳಿಯು ಬೆಂಗಳೂರಿನ ಆರ್ ವಿ ಇನ್ಸ್ಟಿಟ್ಯೂಟ್ ಆಫ್ಮ್ಯಾನೇಜ್‌ಮೆಂಟ್ ನಲ್ಲಿ ದಿನಾಂಕ 31 ಅಕ್ಟೋಬರ್ ಮತ್ತು 1ನವಂಬರ್ ರಂದು ನಡೆಯಿತು. ವಿದ್ಯಾರ್ಥಿನಿಯ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರುಮತ್ತು ದೈಹಿಕ […]
ಕಾರ್ಕಳ ಕ್ರೈಸ್ಟ್ಕಿಂಗ್‌ನ ಅಭಿಷ್ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಸರಕಾರಿಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು ಇವರ ಸಹಯೋಗದಲ್ಲಿಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕುಮಟ್ಟದ ಪ್ರಾಥಮಿಕ ಶಾಲಾ 14 ರ ವಯೋಮಿತಿಯ ವಿದ್ಯಾರ್ಥಿಗಳಕ್ರೀಡಾಕೂಟದಲ್ಲಿ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ಅಭಿಷ್ ೪೦೦ ಮೀ ಓಟದಲ್ಲಿ ಪ್ರಥಮಸ್ಥಾನ ಮತ್ತು 80 ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.