ಉಡುಪಿಯ ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಚಿಲ್ಲರೆ ಕ್ಷೇತ್ರದಲ್ಲಿ ಕಡ್ಡಾಯವಾಗಿ 1-2 ವರ್ಷಗಳ ಕೆಲಸದ ಅನುಭವವಿರಬೇಕು. ಬಿ.ಕಾಂ ಮತ್ತು ಬೇಸಿಕ್ ಕಂಪ್ಯೂಟರ್ ಕಾರ್ಯಾಚರಣೆಗಳ ಅರ್ಹತೆ ಹೊಂದಿರಬೇಕು. ನಿಮ್ಮ ನವೀಕರಿಸಿದ ಸಿವಿಯನ್ನು ನಿಮ್ಮ ಆಧಾರ್ ಕಾರ್ಡ್‌ನ ಛಾಯಾಚಿತ್ರದೊಂದಿಗೆ ತನ್ನಿ. ಕನಕದಾಸ ರಸ್ತೆ ಉಡುಪಿ[email protected]+91 ​​6363-914186

ರಾಜ್ಯದ ಮೂವರು ಸಾಹಿತಿಗಳಿಗೆ ‘ಮಲಬಾರ್ ವಿಶ್ವ ಸಾಹಿತ್ಯ’ ಪ್ರಶಸ್ತಿ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ವತಿಯಿಂದ ಪ್ರದಾನ ಮಾಡಲಾಗುವ ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ ಮಲಬಾರ್​ ವಿಶ್ವಸಾಹಿತ್ಯ ಪುರಸ್ಕಾರ-2025ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ. ಸಮಗ್ರ ಸಾಹಿತ್ಯ ವಿಭಾಗಕ್ಕೆ ಸಂಬಂಧಿಸಿ ಧಾರವಾಡದ ಚನ್ನಪ್ಪ ಅಂಗಡಿ, ಸಂಶೋಧನೆ ಹಾಗೂ ವಿಮರ್ಶೆ ವಿಭಾಗಕ್ಕೆ ಉಡುಪಿಯ ಡಾ. ನಿಕೇತನಾ ಹಾಗೂ ಕಾವ್ಯ ವಿಭಾಗಕ್ಕೆ ಬೆಂಗಳೂರಿನ ಮುದಲ್​ ವಿಜಯ್​ ಆಯ್ಕೆಯಾಗಿದ್ದಾರೆ. ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ನ ಉಡುಪಿ ಶಾಖೆಯಲ್ಲಿ ನ. 22ರಂದು ಪ್ರಶಸ್ತಿ […]

ಉಡುಪಿ: ಶೈಲಜಾ ಬಾಯರಿ ಅವರಿಗೆ ಪಿಎಚ್‌ಡಿ ಪದವಿ

ಮಣಿಪಾಲ: ಮಣಿಪಾಲ ಮಾಧವಕೃಪಾ ಶಾಲೆಯ ಗಣತಿ ಶಿಕ್ಷಕಿ ಶೈಲಜಾ ಬಾಯರಿ ಅವರು ಮಂಡಿಸಿದ ಶಾಲೆಗಳಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಮಾಹೆ ವಿವಿ ಪಿಎಚ್‌ಡಿ ಪ್ರದಾನ ಮಾಡಿದೆ. ಶೈಲಜಾ ಬಾಯರಿ ಅವರು ಈಗ ಪುಣೆಯ ಸಿಂಬಯೋಸಿಸ್ ವಿವಿಯಲ್ಲಿ ಡೀನ್ ಆಗಿರುವ ಡಾ.ನೀತಾ ಇನಾಂದಾರ್ ಇವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಕ್ರಿಯಾತ್ಮಕ ಶೈಕ್ಷಣಿಕ ಸಂಶೋಧನೆಯಲ್ಲಿ ಸಕ್ರಿಯರಾಗಿರುವ ಬಾಯರಿ, ರಚನಾತ್ಮಕ ಗಣಿತ ಯೋಜನೆ, ಬೋಧನಾ ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಣಿಪಾಲ ಎಂಐಟಿಯ ಬಯೋಮೆಡಿಕಲ್ […]

ಉಡುಪಿ: ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಸಂಭ್ರಮಾಚರಣೆ

ಉಡುಪಿ: ಭಾರತದ ವನಿತೆಯರ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿರುವ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಜಹಾಂಗೀ‌ರ್ ಭಟ್ ಉಡುಪಿ ಸ್ವೀಟ್ಸ್ ಹೌಸ್ ಸಹಯೋಗದಲ್ಲಿ ನಗರದ ಸಿಟಿ ಬಸ್ಸ್ ನಿಲ್ದಾಣದ ಬಳಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಉಡುಪಿ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.‌ ಬಳಿಕ ಮಾತನಾಡಿದ ಪೂರ್ಣಿಮಾ ಅವರು, ಹೆಣ್ಣು ಮಕ್ಕಳಿಗೆ ಶಿಕ್ಷಣದ […]

ಕುಂದಾಪುರ: ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಯ್ಯಪ್ಪ ಮಾಲಾಧಾರಿ ಮೃತ್ಯು

ಕುಂದಾಪುರ: ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಯ್ಯಪ್ಪ ವ್ರತಧಾರಿಗಳು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗದಿಂದ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಅಯ್ಯಪ್ಪ ಮಾಲಾಧಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಹಾಡಿಮನೆ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ. ಸುಮಾರು 15 ಮಂದಿ ಅಯ್ಯಪ್ಪ ಮಾಲಾಧಾರಿಗಳು ಕೋಟೇಶ್ವರದಿಂದ ಹೆದ್ದಾರಿ ಮೂಲಕ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದೆಡೆಗೆ ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾಗ ಅಪಘಾತ […]