ದೇಶದಲ್ಲಿ ‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ಜನರನ್ನು ಬೆದರಿಸಿ ರೂ.3000 ಕೋಟಿಗೂ ಹೆಚ್ಚು ಸುಲಿಗೆ.

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ’ಯು ‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ದೇಶದ ಜನರನ್ನು ಬೆದರಿಸಿ ರೂ.3,000 ಕೋಟಿಗೂ ಹೆಚ್ಚು ಮೊತ್ತವನ್ನು ಸುಲಿಗೆ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿವೆ. ಈ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ‘ಈ ಪಿಡುಗು ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ’ ಎಂದು ಹೇಳಿದೆ. ಹರಿಯಾಣದ ವೃದ್ಧ ದಂಪತಿ ತಾವು ‘ಡಿಜಿಟಲ್‌ ಅರೆಸ್ಟ್‌’ನಲ್ಲಿ ರೂ.1.5 ಕೋಟಿ ಕಳೆದುಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರಿಗೆ […]

ನ.6ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ.ಆರ್.ಜಿ. ಗ್ರೂಪ್ ಪ್ರಾಯೋಜಕತ್ವದಲ್ಲಿ 4ನೇ ಬಾರಿ “ಬೃಹತ್ ಉದ್ಯೋಗ ಮೇಳ”ವನ್ನು ನವೆಂಬರ್ 6ರಂದು ಉಡುಪಿಯ ಕುಂತಳನಗರದ ಪ್ರಕಾಶ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ತಿಳಿಸಿದರು. ಈ ಕುರಿತು‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು […]

ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಹುದ್ದೆಗಳು: 🔹ಮೆಕ್ಯಾನಿಕ್ಸ್ – 03🔹 ಅಸಿಸ್ಟೆಂಟ್ ಮೆಕ್ಯಾನಿಕ್ಸ್ -05 🔹 ಹೆಲ್ಪರ್ -02 ಅನುಭವಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.ಆಕರ್ಷಕ ಸಂಬಳ + ಪಿಎಫ್ / ಇಎಸ್‌ಐ ಮತ್ತು ಪ್ರೋತ್ಸಾಹಧನ ಸೌಲಭ್ಯವಿದೆ. ನಿಮ್ಮ ರೆಸ್ಯೂಮ್ ಕಳುಹಿಸಿ[email protected] ಸಂಪರ್ಕಿಸಿ: +91 7996210666

BSNL’ಗೆ 44.18 ಕೋಟಿ ರೂ. ಬಿಲ್ ಬಾಕಿ: ಕ್ರಮ ಕೈಗೊಳ್ಳುವಂತೆ ಸೂಚನೆ!

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮಕ್ಕೆ (ಬಿಎಸ್‌ಎನ್‌ಎಲ್‌) ಒಟ್ಟು ₹44.18 ಕೋಟಿ ಮೊತ್ತದ ಬಿಲ್‌ ಪಾವತಿಸಲು ಉಳಿಸಿಕೊಂಡಿವೆ.ಈ ಪೈಕಿ, ಗೃಹ ಇಲಾಖೆಯು ಅತೀ ಹೆಚ್ಚು ಅಂದರೆ, ₹15.89 ಕೋಟಿ ಪಾವತಿಸಲು ಬಾಕಿ ಇದೆ. ಉಳಿದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಸೆಂಟರ್‌ ಫಾರ್‌ ಇ– ಗರ್ವರ್ನೆನ್ಸ್‌ ₹4.25 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆ (ಗ್ರಾಮ ಪಂಚಾಯತ್‌) ₹3.50 ಕೋಟಿ, ಕಿಯೋನಿಕ್ಸ್‌ ₹2 ಕೋಟಿ ಪಾವತಿಸಬೇಕಿದೆ. ಬಿಲ್‌ ಬಾಕಿ […]

ಅಶ್ಲೀಲ ಚಿತ್ರ ನಿಷೇಧ: ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ನವದೆಹಲಿ: ಅಶ್ಲೀಲ ಚಿತ್ರಗಳ (ಪೋನೋಗ್ರಫಿ-ನೀಲಿ ಚಿತ್ರ) ಮೇಲೆ ನಿಷೇಧ ಕೋರಿ ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಸಕ್ತಿ ತೋರಿದೆ. ಆದರೂ ನಾಲ್ಕು ವಾರಗಳ ನಂತರ ಅದನ್ನು ಪರಿಶೀಲಿಸುವುದಾಗಿ ಹೇಳಿದೆ. ಭ್ರಷ್ಟ ಆಡಳಿತವನ್ನು ಕಿತ್ತೊಗೆಯಲು ಸೆಪ್ಟೆಂಬರ್​ನಲ್ಲಿ ಯುವಜನರು ನಡೆಸಿದ ಜನ್ ಝುಡ್ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠ, ‘ನಿಷೇಧವೊಂದರ ಸಂಬಂಧ ನೇಪಾಳದಲ್ಲಿ ಏನು ನಡೆಯಿತು ಎನ್ನುವುದನ್ನು ನೋಡಿ’ ಎಂದು ಅರ್ಜಿದಾರರಿಗೆ ಹೇಳಿತು. ವಿಶೇಷವಾಗಿ ಪ್ರಾಪ್ತ ವಯಸ್ಸು ತಲುಪದವರು ಸಾರ್ವಜನಿಕ […]