ಉಡುಪಿ ವಕೀಲರ ಸಂಘದ ಚುನಾವಣೆಗೆ ತಡೆ ಕೋರಿದ ಅರ್ಜಿ ವಜಾ: ಸಮಯಸಾಧಕರಿಗೆ ತೀವ್ರ ಮುಖಭಂಗ – ರೆನೋಲ್ಡ್ ಪ್ರವೀಣ್ ಕುಮಾರ್

ಉಡುಪಿ: ಉಡುಪಿ ವಕೀಲರ ಸಂಘದ ಯಾವುದೇ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯಗಳಿಗೆ ಅಸಹಕಾರ ನೀಡುತ್ತಾ, ನಿರಂತರ ಕಿರುಕುಳ ಹಾಗೂ ಗೂಂಡಾ ವರ್ತನೆಗೆ ಹೆಸರಾದ ಎದುರಾಳಿ ಬಣವು ನೇರವಾಗಿ ಮತ್ತು ನ್ಯಾಯಯುತವಾಗಿ ಚುನಾವಣೆಯನ್ನು ಎದುರಿಸಲಾಗದೆ, ಸೋಲಿನ ಭಯದಿಂದ ಹತಾಶರಾಗಿ, ನಿಯಮಾವಳಿಯಂತೆ ಮತ್ತು ಪಾರದರ್ಶಕವಾಗಿ ದಿನಾಂಕ 21.11.2025ರಂದು ನಡೆಸಲಾಗುತ್ತಿರುವ ಉಡುಪಿ ವಕೀಲರ ಸಂಘದ ಚುನಾವಣೆಗೆ ಕ್ಷುಲ್ಲಕ ಕಾರಣಗಳನ್ನು ಒಡ್ಡಿ, ವಕೀಲರ ಸಂಘದ ಅಭಿವೃದ್ಧಿಗೆ ಕಿಂಚಿತ್ತೂ ಕೊಡುಗೆ ನೀಡದ ಮತ್ತು ಕುತಂತ್ರಕ್ಕೆ ಹೆಸರಾದ ಎಚ್. ರತ್ನಾಕರ ಶೆಟ್ಟಿ, ಸಂಜಯ್ ಕೆ. ನೀಲಾವರ ಮತ್ತು […]

ಹಿಂದುಜಾ ಗ್ರೂಪ್ ಅಧ್ಯಕ್ಷ ‘ಗೋಪಿಚಂದ್ ಹಿಂದುಜಾ’ ಲಂಡನ್‌ನಲ್ಲಿ ಆಸ್ಪತ್ರೆಯಲ್ಲಿ ನಿಧನ.

ನವದೆಹಲಿ: ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ ಲಂಡನ್ ಆಸ್ಪತ್ರೆಯಲ್ಲಿ ನಿಧನರಾದರು. ಗೋಪಿಚಂದ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ನಾಲ್ವರು ಹಿಂದುಜಾ ಸಹೋದರರಲ್ಲಿ ಎರಡನೆಯವರು. ಹಿರಿಯರಾದ ಶ್ರೀಚಂದ್ ಹಿಂದುಜಾ 2023 ರಲ್ಲಿ ನಿಧನರಾದರು. ಇನ್ನಿಬ್ಬರು ಸಹೋದರರಾದ ಪ್ರಕಾಶ್ ಹಿಂದುಜಾ ಮತ್ತು ಅಶೋಕ್ ಹಿಂದುಜಾ ಅವರನ್ನು ಅಗಲಿದ್ದಾರೆ.‌ ಗೋಪಿಚಂದ್ ಹಿಂದುಜಾ 1950 ರಲ್ಲಿ ಕುಟುಂಬ ವ್ಯವಹಾರಕ್ಕೆ ಸೇರಿದರು. ಇಂಡೋ-ಮಧ್ಯಪ್ರಾಚ್ಯ ವ್ಯಾಪಾರ ಕಾರ್ಯಾಚರಣೆಯಿಂದ ಕಂಪನಿಯನ್ನು ಅಂತರರಾಷ್ಟ್ರೀಯ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಬಾಂಬೆ ಜೈ ಹಿಂದ್ ಕಾಲೇಜಿನಿಂದ […]

ಉಡುಪಿ: ನ.7ರಂದು ಶೀರೂರು ಪರ್ಯಾಯ ಪೂರ್ವಭಾವಿ ಸಮಾಲೋಚನಾ ಸಭೆ

ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಇದೇ ನ. 7ರಂದು ಸಂಜೆ 4.30ಕ್ಕೆ ಉಡುಪಿಯ ಸೋದೆ ಮಠದ ಬಳಿಯ ವಿದ್ಯೋದಯ ಪಿ.ಯು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ಶೀರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಪರ್ಯಾಯ ಪೂರ್ವಭಾವಿ ಬಗ್ಗೆ ಪ್ರಮುಖರೊಂದಿಗೆ […]

ಕ್ರೈಮ್ ಥ್ರಿಲ್ಲರ್ ಜನಪ್ರಿಯ ವೆಬ್‌ ಸರಣಿ ‘ದೆಹಲಿ ಕ್ರೈಮ್ ಸೀಸನ್-3’ ನ.13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್!

ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ದೆಹಲಿ ಕ್ರೈಮ್ ಸೀಸನ್-3’ ಇದೀಗ ತನ್ನ ಹೊಸ ಅಧ್ಯಾಯದೊಂದಿಗೆ ಮರಳಿ ಬರುತ್ತಿದೆ. ಹಿಂದಿನ ಎರಡು ಸೀಸನ್‌ಗಳ ಯಶಸ್ಸಿನ ನಂತರ, ಕ್ರೈಮ್ ಥ್ರಿಲ್ಲರ್ ಪ್ರಕಾರದ ಈ ಜನಪ್ರಿಯ ವೆಬ್‌ ಸರಣಿ ಮತ್ತೆ ಒಂದು ಗಂಭೀರ ಸಾಮಾಜಿಕ ವಿಷಯವಾದ ಮಾನವ ಕಳ್ಳಸಾಗಣೆ ಕುರಿತ ಕಥೆಯನ್ನು ತೆರೆಮೇಲೆ ತರುತ್ತಿದೆ. ನವೆಂಬರ್ 13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಇದು ಅಧಿಕೃತವಾಗಿ ಸ್ಟ್ರೀಮಿಂಗ್ ಆಗಲಿದ್ದು, ಅದರ ಟ್ರೈಲರ್ ಇಂದು (ನವೆಂಬರ್ 4ರಂದು) ಬಿಡುಗಡೆಗೊಂಡಿದೆ. ಈ ಸೀಸನ್‌ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿ ಶೆಫಾಲಿ ಶಾ […]

ಮಣಿಪಾಲದ MSDC ಯಲ್ಲಿ ಡ್ರೋನ್ ಅಸೆಂಬ್ಲಿ ಕುರಿತು ವಿಶೇಷ ಕಾರ್ಯಾಗಾರ: ಒಂದೇ ದಿನದಲ್ಲಿ ಡ್ರೋಣ್ ನಿರ್ಮಾಣದ ಕುರಿತು ಮಾಹಿತಿ ಪಡೀರಿ

ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ DGCA-ಪ್ರಮಾಣೀಕೃತ ಡ್ರೋನ್ ಬೋಧಕರಿಂದ ಡ್ರೋನ್ ಅಸೆಂಬ್ಲಿ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಭಾಗವಹಿಸುವವರಿಗೆ ₹500/ ಶುಲ್ಕವಿದೆ. ನವೆಂಬರ್ 10 ರಂದು ಡ್ರೋನ್ ಮೂಲಭೂತ ವಿಷಯಗಳ ಪರಿಚಯ ಡ್ರೋನ್ ನಿಯಮಗಳು ಮತ್ತು ನಿಯಮಗಳ ಅವಲೋಕನ ಸಿಮ್ಯುಲೇಟರ್ ತರಬೇತಿ ನಡೆಯಲಿದೆ. ಏನು ಕಲಿಯಬಹುದು? ಹಂತ-ಹಂತದ ಡ್ರೋನ್ ನಿರ್ಮಾಣ ಡ್ರೋನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಮೊದಲಿನಿಂದ ಒಂದನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಕಲಿಯಲು ಆಸಕ್ತಿ ಇರುವವರು ಭಾಗವಹಿಸಬಹುದು. ಇನ್ನೇಕೆ ತಡ ಡ್ರೋಣ್ […]