ಪ್ರಗತಿ ಪರ ಕೃಷಿಕ,ಸಾಮಾಜಿಕ ಚಿಂತಕ,ಕೋಟ ಮೂರ್ತೆದಾರ ಸೆ .ಸ ಸಂಘದ ಅಧ್ಯಕ್ಷರಾದ ಕೆ. ಕೊರಗ ಪೂಜಾರಿಯವರು ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆ

ಉಡುಪಿ:ಪ್ರಗತಿ ಪರ ಕೃಷಿಕ,ಸಾಮಾಜಿಕ ಚಿಂತಕ,ಕೋಟ ಮೂರ್ತೆದಾರ ಸೆ .ಸ ಸಂಘದ ಅಧ್ಯಕ್ಷರಾದ ಕೆ. ಕೊರಗ ಪೂಜಾರಿಯವರು ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.ಕೆ. ಕೊರಗ ಪೂಜಾರಿಯವರ ತಂದೆ ದಿ. ಕಾಳಪ್ಪ ಪೂಜಾರಿ ತಾಯಿ ದಿ. ಚಂದು ಪೂಜಾರ್ತಿಯವರ ಮಗನಾಗಿ 01-01-1946 ರಂದು ಜನಿಸಿದರು.ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮುಗಿಸಿದ್ದು,ಕೃಷಿ, ಮೂರ್ತೆದಾರಿಕೆ, ಮೀನುಗಾರಿಕೆಯ ವೃತ್ತಿ ಮಾಡುತ್ತಿದ್ದರು.ಹವ್ಯಾಸವಾಗಿ ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಸೇವೆ ಸಲ್ಲಿಸಿದ್ದಾರೆ. ಕೆ. ಕೊರಗ ಪೂಜಾರಿಯವರು ಸುಮಾರು 58 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು, […]
ಜವಾಬ್ದಾರಿಯುತವಾಗಿ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ*

ಉಡುಪಿ: ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕೆಂದರೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಆಗಷ್ಟೇ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ಬದ್ಧತೆಯಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ತಯಾರಿ ಮಾಡಲಾಗುತ್ತದೆ. ಇದಕ್ಕೆ […]
ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್ ರೈಲು ಶೀಘ್ರದಲ್ಲೇ ಆರಂಭ.

ನವದೆಹಲಿ: ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್ ರೈಲು ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುರುವಾರ ಸುಳಿವು ನೀಡಿದ್ದಾರೆ. ಅ.30 ರಂದು ರೈಲ್ವೆ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ಬಿಜೆಪಿ ಸಂಸದ, ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಪ್ರಸ್ತಾವಿತ ಸೂಪರ್‌ಫಾಸ್ಟ್ ರೈಲು ಎರಡರ ಬಗ್ಗೆಯೂ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ, ರೈಲ್ವೆ ಮಂಡಳಿ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿದ್ದು, ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್ ರೈಲಿಗೆ ನೀಡಿದ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿದೆ ಎಂದು […]
ಸಿಬಿಎಸ್ಇ ಶಾಲೆಗಳಲ್ಲಿ AI ಪಠ್ಯಕ್ರಮಕ್ಕೆ ಚಿಂತನೆ: ತಜ್ಞರ ಸಮಿತಿ ರಚನೆ.

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಕಂಪ್ಯುಟೇಷನಲ್ ಥಿಂಕಿಂಗ್ (ಕಂಪ್ಯೂಟರ್ ಆಧಾರಿತ ಆಲೋಚನೆ) ವಿಷಯಾಧಾರಿತ ಪಠ್ಯ ರೂಪಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಕಾರ್ತಿಕ್ ರಮಣ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ. 2026-27ರ ಶೈಕ್ಷಣಿಕ ವರ್ಷದಿಂದ ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಎ.ಐ ಮತ್ತು ಕಂಪ್ಯುಟೇಷನಲ್ ಥಿಂಕಿಂಗ್ ಪಠ್ಯಕ್ರಮವನ್ನು ಅಳವಡಿಸುವ ಪ್ರಯತ್ನದ ಭಾಗವಾಗಿ ಸಮಿತಿ ರಚಿಸಲಾಗಿದೆ. “ಸಿಬಿಎಸ್‌ಇ, ಎನ್‌ಸಿಇಆರ್‌ಟಿ, ಕೆವಿಎಸ್, ಎನ್‌ವಿಎಸ್ ತಜ್ಞರು ಮತ್ತು ಬಾಹ್ಯ ತಜ್ಞರೊಂದಿಗೆ ಮಂಡಳಿಯ […]
2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟ

ಉಡುಪಿ: 2025 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ 77 ಮಂದಿಯ ಹೆಸರು ಪ್ರಶಸ್ತಿಗೆ ಆಯ್ಕೆಗೊಂಡಿದೆ. ಪ್ರಶಸ್ತಿ ಪುರಸ್ಕೃತರ ವಿವರ ಈ ಕೆಳಕಂಡಂತಿದೆ.