ಉಡುಪಿ:ನ.16ರಂದು ರಾಜ್ಯಮಟ್ಟದ ಭರತನಾಟ್ಯ ಗುಂಪು ಸ್ಪರ್ಧೆ “ನೃತ್ಯ ವಲ್ಲರಿ” ಕಾರ್ಯಕ್ರಮ

ಉಡುಪಿ: ಸಾವಿತ್ರಿ ನಾಟ್ಯಶಾಲಾ ಉಡುಪಿ ತನ್ನ “ದಶ ಹರ್ಷೋತ್ಸವ” ದ ಅಂಗವಾಗಿ ರಾಜ್ಯಮಟ್ಟದ ಭರತನಾಟ್ಯ ಗುಂಪು ಸ್ಪರ್ಧೆ “ನೃತ್ಯ ವಲ್ಲರಿ” ಯನ್ನು ನವೆಂಬರ್ 16ರಂದು (ಭಾನುವಾರ) ಆಯೋಜಿಸಿದೆ. ಈ ಸ್ಪರ್ಧೆ ಉಡುಪಿಯ ಯಕ್ಷಗಾನ ಕಲಾರಂಗ (IYC Auditorium)ದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಪ್ರಾರಂಭವಾಗಲಿದೆ. ಸ್ಪರ್ಧೆಯಲ್ಲಿ 7ರಿಂದ 15 ಮಂದಿ ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪುಗಳು ಭಾಗವಹಿಸಬಹುದಾಗಿದೆ. ವರ ರೂಪದಲ್ಲಿ ಗರಿಷ್ಠ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ವಿಜೇತ ತಂಡಗಳಿಗೆ ಪುರಸ್ಕಾರವಾಗಿ: 🥇 ಪ್ರಥಮ ಬಹುಮಾನ ₹15,000 + ಟ್ರೋಫಿ […]

RSS ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ: ಹೈಕೋರ್ಟ್ ಮಧ್ಯಂತರ ತಡೆ

ಆರ್‌ಎಸ್‌ಎಸ್‌ ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಖಾಸಗಿ ಸಂಘಟನೆಗಳು ಸರ್ಕಾರಿ ಸ್ಥಳ ಬಳಕೆಗೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ನಿಯಮಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಖಾಸಗಿ ಸಂಘಟನೆಯೊಂದು ಸರ್ಕಾರದ ನಿರ್ಬಂಧವನ್ನು ಪ್ರಶ್ನೆ ಮಾಡಿ ಹೈಕೋರ್ಟ್‌ ಮೊರೆ ಹೋಗಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸರ್ಕಾರದ ನಿಯಮಕ್ಕೆ ತಡೆ ನೀಡಿದ್ದಾರೆ. ವಿಚಾರಣೆಯನ್ನು ನವೆಂಬರ್ 2 ನೇ ವಾರಕ್ಕೆ ಮುಂದೂಡಿದ್ದಾರೆ. “19(1)(A) ಮತ್ತು (B) ವಿಧಿಯ ಅಡಿಯಲ್ಲಿ […]

‘ಅಮೆಜಾನ್’ ಉದ್ಯೋಗಿಗಳಿಗೆ ಬಿಗ್ ಶಾಕ್: 30,000 ನೌಕರರನ್ನು ವಜಾಗೊಳಿಸಲು ಸಿದ್ಧತೆ!

ಸ್ಯಾನ್ ಫ್ರಾನ್ಸಿಸ್ಕೋ: ಆನ್ ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಅಮೆಜಾನ್ 30 ಸಾವಿರ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಕೋವಿಡ್ ಸಮಯದಲ್ಲಿ ಆದ ಹೆಚ್ಚಿನ ನೌಕರರ ನೇಮಕದಿಂದ ಆದ ವೆಚ್ಚಗಳನ್ನು ಸರಿದೂಗಿಸಲು ಸಂಸ್ಥೆ ಈಗ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ವರದಿಗಳು ಹೇಳಿವೆ. ಅಮೆಜಾನ್ ನ ಒಟ್ಟು ನೌಕರರ ಪೈಕಿ ಸುಮಾರು ಶೇ. 10 ರಷ್ಟು ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಜಾಗತಿಕವಾಗಿ ಅಮೆಜಾನ್ ನಲ್ಲಿ ಸುಮಾರು 15 ಲಕ್ಷ ನೌಕರರಿದ್ದಾರೆ. ಕಳೆದ ವರ್ಷ ಅಮೆಜಾನ್ ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ […]

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ರೈತರ ಕೃಷಿ ಭೂಮಿ ಸ್ವಾಧೀನವಿಲ್ಲ; ಕರ್ನಾಟಕ ವಿದ್ಯುತ್ ನಿಗಮ ಸ್ಪಷ್ಟನೆ.

ಸಾಗರ: ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಉತ್ಪಾದನೆಗೊಳ್ಳುವ ವಿದ್ಯುತ್ ವಿತರಣೆಗಾಗಿ ಯಾವುದೇ ಹೊಸ ಗ್ರಿಡ್ ಸ್ಥಾಪಿಸುವುದಿಲ್ಲ. ಈಗಿರುವ ವಿದ್ಯುತ್ ಮಾರ್ಗಗಳ ಮೂಲಕವೇ ವಿತರಣೆ ಕಾರ್ಯ ನಡೆಯುವುದರಿಂದ ರೈತರ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಂ.ವಿಜಯ್ ಸ್ಪಷ್ಟಪಡಿಸಿದರು. ‘ಒಟ್ಟಾರೆಯಾಗಿ ಯೋಜನೆಯಿಂದ ಲಾಭವೇ ಇಲ್ಲ ಎಂದು ಹೇಳುವುದು ಸರಿಯಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಮೇಲ್ಭಾಗದಲ್ಲಿ ಒಂದು ಹಾಗೂ ಕೆಳ ಭಾಗದಲ್ಲಿ ಒಂದು […]

ಋತುಚಕ್ರ ರಜೆ ಘೋಷಣೆ ಹಿನ್ನೆಲೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದ ಮಹಿಳಾ ನೌಕರರ ಸಂಘ

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ವಾರ್ಷಿಕ 12 ಋತುಚಕ್ರ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಕೃತಜ್ಞತೆ ಸಲ್ಲಿಸಿ,  ಸನ್ಮಾನಿಸಿದರು. ವಿಧಾನಸೌಧದ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಸಂಘದ ಅಧ್ಯಕ್ಷರಾದ ರೋಷಿನಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಶಶಿಕಲಾ, ಈ ನಿರ್ಧಾರಕ್ಕಾಗಿ ಧನ್ಯವಾದ ಅರ್ಪಿಸಿದರು. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಇಂತಹ ತೀರ್ಮಾನ ಕೈಗೊಂಡಿರುವ […]