ನಾಳೆ ಆಂಧ್ರಕ್ಕೆ ‘ಮೊಂಥ’ ಚಂಡಮಾರುತ: ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ!

ಆಂಧ್ರಪ್ರದೇಶ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಾಳೆ(ಅ.28) ಆಂಧ್ರಪ್ರದೇಶದ ಕರಾವಳಿ ಭಾಗದ ಜಿಲ್ಲೆಗಳಿಗೆ ಮೊಂಥಾ ಚಂಡಮಾರುತ(Cyclone) ಅಪ್ಪಳಿಸಲಿದ್ದು, ಈ ಹಿನ್ನೆಲೆ ಈ ಭಾಗದಲ್ಲಿ(ಕರಾವಳಿ) ಭಾರೀ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಥೈಲ್ಯಾಂಡ್‌ನಿಂದ ‘ಮೋಂಥಾ’ ಎಂದು ಹೆಸರಿಸಲ್ಪಟ್ಟ ಈ ಚಂಡಮಾರುತವು, ಭಾರೀ ಮಳೆಯನ್ನು ತರುವ ಸಾಧ್ಯತೆಯಿರುವುದರಿಂದ ಆಂಧ್ರಪ್ರದೇಶದಲ್ಲಿ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.ಅಕ್ಟೋಬರ್ 28ರ ಸಂಜೆ ಅಥವಾ ರಾತ್ರಿ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತ ಭೂಕುಸಿತವನ್ನು ನಿರೀಕ್ಷಿಸಲಾಗಿದೆ. ಇದರೊಂದಿಗೆ ಆಂಧ್ರಪ್ರದೇಶ, […]
ಎಲ್ ಐ ಸಿಗಿಂತ ವಿದೇಶಿ ಸಂಸ್ಥೆಗಳಲ್ಲೇ ಅದಾನಿ ಭಾರೀ ಹೂಡಿಕೆ!

ನವದೆಹಲಿ: ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್‌ಐಸಿ ಹಣ ಹೂಡಿರುವುದು ವಿದೇಶಿ ಮಾಧ್ಯಮ ವರದಿಗಳಿಂದ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದರೂ, ಅಸಲಿಗೆ ಅಮೆರಿಕ ಮತ್ತು ಜಾಗತಿಕ ವಿಮಾ ಕಂಪನಿಗಳೇ ಅದಾನಿ ಸಮೂಹದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿರುವುದು ಬಯಲಾಗಿದೆ. ಕಳೆದ ಜೂನ್‌ನಲ್ಲಿ ಅದಾನಿ ಪೋರ್ಟ್ಸ್ ಎಸ್‌ಇಝಡ್‌ನಲ್ಲಿ ಎಲ್‌ಐಸಿ 570 ದಶಲಕ್ಷ ಡಾಲರ್ (5,000 ಕೋಟಿ ರೂ.) ಹೂಡಿಕೆ ಮಾಡಿದ ಒಂದು ತಿಂಗಳಲ್ಲೇ ಅಮೆರಿಕದ ಅಥೆನೆ ಇನ್ಶೂರೆನ್ಸ್ ಕಂಪನಿಯು ಅದಾನಿ ಸಮೂಹದ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ 6,650 ಕೋಟಿ ರೂ. […]
ಗಂಡ-ಹೆಂಡತಿ ಜಗಳ: ಅವಳಿ ಮಕ್ಕಳ ಕತ್ತು ಸೀಳಿ ಕೊಂದ ತಂದೆ!

ಮಹಾರಾಷ್ಟ್ರ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆದು ಪತ್ನಿ ತವರು ಮನೆ ಸೇರಿದ ನಂತರ ಪಾಪಿ ತಂದೆಯೊಬ್ಬ ತನ್ನ ಎರಡು ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ಡು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆರೋಪಿ ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್. ಚವಾಣ್ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಪ್ರಯಾಣಿಸುತ್ತಿದ್ದಾಗ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ತದನಂತರ ಹೆಂಡತಿ ತನ್ನ ಹೆತ್ತವರ ಮನೆಗೆ […]
ಉಡುಪಿ: ಪಿಪಿಸಿ ಸಂಧ್ಯಾ ಕಾಲೇಜು; ಜ್ಞಾನಂ -2025 ಸ್ಪರ್ಧೆ

ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ ಇದರ ವತಿಯಿಂದ ದಿನಾಂಕ 28-10-2025ನೇ ಮಂಗಳವಾರದಂದು ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಕುಂದಾಪುರದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಜ್ಞಾನಂ – 2025 ಎಂಬ ವಿಭಿನ್ನ ಸ್ಪರ್ಧಾ ಕಾರ್ಯಕ್ರಮ ಒಂದನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಯುಕ್ತ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ, ವಾಣಿಜ್ಯ ವಿಭಾಗ, ಮಾಹಿತಿ ತಂತ್ರಜ್ಞಾನ ಹಾಗೂ ಕಲಾ ವಿಭಾಗಗಳಿಗೆ ಸಂಬಂಧಿಸಿದಂತೆ ವಿಶಿಷ್ಟವಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ತಂಡವು ಈಗಾಗಲೇ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳನ್ನು ಸಂಪರ್ಕಿಸಿದ್ದು ಮಾಹಿತಿಯನ್ನು […]
ಮಲ್ಪೆ: ಚಂಡಮಾರುತ ಎಫೆಕ್ಟ್- ಮೀನುಗಾರಿಕಾ ಬೋಟ್ ಗಳು ವಾಪಸ್

ಉಡುಪಿ: ಲಕ್ಷದ್ವೀಪದ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು ಚಂಡಮಾರುತದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಭಾರಿ ಗಾಳಿಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ. ಉಡುಪಿ ಜಿಲ್ಲೆಯ ಮಲ್ಪೆ ಸರ್ವ ಋತು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟುಗಳು ವಾಪಸ್ ಆಗಿವೆ. ರಾಜ್ಯದ ಗಡಿ ದಾಟಿ ಗೋವಾ, ಮಹಾರಾಷ್ಟ್ರ ಗುಜರಾತ್ ಬಾರ್ಡರ್ ನಲ್ಲಿ ಇರುವ ಬೋಟ್ ಗಳಿಗೆ ಹತ್ತಿರದ ಬಂದರುಗಳನ್ನು ಆಶ್ರಯಿಸುವಂತೆ ಸೂಚನೆ ನೀಡಲಾಗಿದೆ.ಸರ್ವಋತು ಬಂದರು […]