ದೀಪಾವಳಿ ಸಂಭ್ರಮಿಸಿ ಮನೆಗೆ ತೆರಳುತ್ತಿದ್ದಾಗ ರೈಲು ಡಿಕ್ಕಿ; ತಾಯಿ, ಮಗಳು ಸೇರಿ ನಾಲ್ವರು ಮೃತ್ಯು.

ಬೇಗುಸರಾಯ್, (ಬಿಹಾರ): ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎಂದು ಸಾಹೇಬ್‌ಪುರ ಕಮಲ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ರಾಹುವಾ ಎಂಬ ಹಳ್ಳಿಯ ರೀಟಾ ದೇವಿ (40) ಮತ್ತು ಅವರ ಮಗಳು ರೋಶನಿ ಕುಮಾರಿ (14) ಹಾಗೂ ಅದೇ ಊರಿನವರಾದ ಆರೋಹಿ (7) ಹಾಗೂ ಧರ್ಮದೇವ್ ಮೆಹತೋ (36) […]

ಕ್ರೀಡಾಪಟು ನೀರಜ್ ಚೋಪ್ರಾ’ಗೆ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ.

ಬೆಂಗಳೂರು: ಜಾವೆಲಿನ್ ಥ್ರೋ ತಾರೆ, ಒಲಿಂಪಿಕ್‌ ಚಿನ್ನದ ಪದಕ ವಿಜೇತ ಕ್ರೀಡಾಪಟು ನೀರಜ್ ಚೋಪ್ರಾ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿ (ಪ್ರಾದೇಶಿಕ ಸೇನೆ) ಸೇರ್ಪಡೆಯಾಗಿದ್ದಾರೆ.ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಯ ಕಚೇರಿಯಲ್ಲಿ ನೀರಜ್ ಚೋಪ್ರಾ ಅವರಿಗೆ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಲಾಂಛನವನ್ನು ತೊಡಿಸಿ ಅಭಿನಂದಿಸಿದರು. ಈ ವೇಳೆ ಭಾರತೀಯ ಸೇನೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಹಾಜರಿದ್ದರು. ನೀರಜ್ ಚೋಪ್ರಾ ಭಾರತದ ಅತ್ಯುತ್ತಮ ಕ್ರೀಡಾಪಟು. ಅವರ […]

ಬ್ರಹ್ಮಾವರ: ಚಲಿಸುತ್ತಿದ್ದ ಬೈಕ್’ಗೆ ಅಡ್ಡ ಬಂದ ಚಿರತೆ: ಸವಾರ ಗಂಭೀರ!

ಬ್ರಹ್ಮಾವರ: ವೇಗವಾಗಿ ಚಲಿಸುತ್ತಿದ್ದ ಬೈಕ್ ಗೆ ಢಿಕ್ಕಿಯಾಗಿ ಚಿರತೆ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಂಚಾರು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.ಬೈಕ್ ಸವಾರರಾಗಿದ್ದ ನಂಚಾರು ಭಾಸ್ಕರ್ ಶೆಟ್ಟಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತದ ತೀವ್ರತೆಗೆ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಮ್.ಸಿ.ಸಿ. ಬ್ಯಾಂಕಿನಲ್ಲಿ ದೀಪಾವಳಿ ಆಚರಣೆ

ಮಂಗಳೂರು: ಎಮ್.ಸಿ.ಸಿ.ಬ್ಯಾಂಕಿನ ಆಡಳಿತ ಕಛೇರಿ ಮಂಗಳೂರಿನಲ್ಲಿ ಅಕ್ಟೋಬರ್ 21, 2025ರಂದು ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್‌ಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾದ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಪ್ರತಾಪ್ ಸಿಂಗ್ ಥೋರಟ್ ಮತ್ತು ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಜ್ಮಾ ಫಾರೂಕ್ ಅವರು ಉಪಸ್ಥಿತರಿದ್ದರು. ಕತ್ತಲೆಯ ಮೇಲೆ ಬೆಳಕಿನ ಗೆಲುವು ಮತ್ತು ಒಳ್ಳೆಯತನದ ವಿಜಯವನ್ನು […]

ಉಡುಪಿ- ಮಂಗಳೂರಿನ ಪ್ರಖ್ಯಾತ ಗ್ರೂಪ್ ಆಫ್ ಕಂಪೆನಿಗಳಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಹಾಗೂ ಮಂಗಳೂರಿನ ಪ್ರಖ್ಯಾತ ಗ್ರೂಪ್ ಆಫ್ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: ▪️ಅಕೌಂಟೆಂಟ್ – 5 Posts▪ ಗ್ರಾಫಿಕ್ ಡಿಸೈನರ್ – 10 Posts▪️ಕಸ್ಟಮರ್ ಸಪೋರ್ಟ್ – 40 Posts▪️ಡೇಟಾ ಎಂಟ್ರಿ – 30 Posts▪️ಟೆಕ್ನೀಷಿಯನ್ (ITI) – 100 Posts▪️ಎಲೆಕ್ಟ್ರೀಷಿಯನ್ – 20 Posts▪️ಟಿಲಿಕಾಲರ್ -20 Posts▪️ಸೇಲ್ಸ್ & ಮಾರ್ಕೆಟಿಂಗ್ – 10 Posts▪️ಆಫೀಸ್ ಬಾಯ್ – 05 Posts PUC,ITI, DEGREE,DIPLOMA, BE ವಿದ್ಯಾರ್ಹತೆ ಹೊಂದಿರಬೇಕು. ಸಂಪರ್ಕಿಸಿ:7019891796, […]