ಉಡುಪಿ: ಉದ್ಯಮಿ, ಪೂಂಜಾ ಟ್ರಾವಲ್ಸ್ ನ ಮಾಲೀಕ ಸಂಜಯ್ ಶೆಟ್ಟಿ ನಿಧನ

ಉಡುಪಿ: ಹೋಟೆಲ್ ಉದ್ಯಮಿ, ಪೂಂಜಾ ಟ್ರಾವಲ್ಸ್ ನ ಮಾಲೀಕ ಸಂಜಯ್ ಶೆಟ್ಟಿ ಕೊರಂಗ್ರಪಾಡಿ (65) ಅವರು ಅಲ್ಪಕಾಲದ ಅಸ್ವೌಖ್ಯದಿಂದ ಗುರುವಾರ (ಅ.23) ನಿಧನ ಹೊಂದಿದರು‌. ಕೊರಂಗ್ರಪಾಡಿ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಹಾಗೂ ಬೈಲೂರು ಮಹಿಷಮರ್ದಿನಿ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ, ಮಾರ್ಪಳ್ಳಿ, ಕೊರಂಗ್ರಪಾಡಿ, ಬೈಲೂರು ಪ್ರದೇಶದಲ್ಲಿ ಸಾಮಾಜಿಕ ಕಾರ್ಯಗಳ ಹೆಸರುವಾಸಿಯಾಗಿದ್ದರು. ಅವರು ಒರ್ವ ಪುತ್ರ, ಪತ್ನಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಉಡುಪಿಯ ಪರಶುಭೂಮಿ ಚಿಟ್ಸ್ ಪ್ರೈ. ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಪರಶುಭೂಮಿ ಚಿಟ್ಸ್ ಪ್ರೈ. ಲಿಮಿಟೆಡ್ ನಲ್ಲಿ ಆಫೀಸ್ ಸ್ಟಾಫ್(ಪುರುಷ) ಹುದ್ದೆಗೆ ನೇಮಕಾತಿ ನಡೆಯಲಿದೆ. ಬಿ.ಕಾಮ್ ಪದವೀಧರ ಫ್ರೆಶರ್ಸ್ / ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರೆಸ್ಯೂಮ್ ಅನ್ನು ಕೆಳಗಿನ ನಂ ಗೆ ಕಳುಹಿಸಿ:+91 99867 76755+91 98448 98370

ಅನೈತಿಕ ಸಂಬಂಧ: ಪತ್ನಿಯನ್ನು ಕೊಂದು ಮನೆ ಬೆಡ್ರೂಮ್’ನ ಕೆಳಗೆ ಶವ ಹೂತ ಪತಿ!

ಉತ್ತರ ಪ್ರದೇಶ: ಬಹ್ರೈಚ್ ಜಿಲ್ಲೆಯಲ್ಲಿ ಅನೈತಿಕ ಸಂಬಂಧ(Immoral relationship) ಹಿನ್ನೆಲೆ ತನ್ನ ಪತ್ನಿ ಇನ್ನೊಬ್ಬರ ಜೊತೆ ಖಾಸಗಿ ಕ್ಷಣದಲ್ಲಿ ಇರೋದನ್ನು ನೋಡಿದ ಪತಿ, ಆಕೆಯನ್ನು ಕೊಂದು ಮನೆಯ ಬೆಡ್​ರೂಂನಲ್ಲಿಯೇ ಶವ ಹೂತು, ಅದರ ಮೇಲೆಯೇ 12 ದಿನ ಮಲಗಿದ್ದಾನೆ. ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು 48 ವರ್ಷದ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಗುರುವಾರ(ಅ. 23) ವರದಿಯಾಗಿದೆ. ಅಹತಾ ಗ್ರಾಮದ ಹರಿಕಿಶನ್ ಎಂಬ ಆರೋಪಿಯನ್ನು ಮಂಗಳವಾರ ನೆರೆಯ ಬಾರಾಬಂಕಿ ಜಿಲ್ಲೆಯ ದುರ್ಗಾಪುರ ತಪೇಸಿ ಗ್ರಾಮದಲ್ಲಿ ಬಂಧಿಸಲಾಗಿದೆ. […]

ಉಡುಪಿ: ಕಳೆದುಹೋದ ಪ್ರಯಾಣಿಕರ ಬ್ಯಾಗ್’ನ್ನು ಹಿಂದಿರುಗಿಸಿದ ಆರ್ ಪಿಎಫ್ ಸಿಬ್ಬಂದಿ.

ಉಡುಪಿಯಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ನಿಲ್ದಾಣದ ಸಿಬ್ಬಂದಿಯ ಸಕಾಲಿಕ ಕ್ರಮದಿಂದಾಗಿ ಬುಧವಾರ ಚಲಿಸುತ್ತಿದ್ದ ರೈಲಿನಿಂದ ಟ್ರಾಲಿ ಬ್ಯಾಗ್ ಬಿದ್ದ ಪರಿಣಾಮ ಪ್ರಯಾಣಿಕರೊಬ್ಬರಿಗೆ ಆಗಬಹುದಾಗಿದ್ದ ದೊಡ್ಡ ನಷ್ಟ ತಪ್ಪಿದೆ. ವರದಿಗಳ ಪ್ರಕಾರ, ರೈಲು ಸಂಖ್ಯೆ 16595 ರಲ್ಲಿ ME2 ಕೋಚ್, ಬರ್ತ್ ಸಂಖ್ಯೆ 9 ರಲ್ಲಿ ಪ್ರಯಾಣಿಸುತ್ತಿದ್ದ ಪ್ರಿಯಾ ಎಂಬ ಪ್ರಯಾಣಿಕರು ರೈಲು ಉಡುಪಿ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಆಕಸ್ಮಿಕವಾಗಿ ತನ್ನ ಟ್ರಾಲಿ ಬ್ಯಾಗ್ ಅನ್ನು ಕಳೆದುಕೊಂಡರು. ಘಟನೆ ಬಗ್ಗೆ ತಕ್ಷಣವೇ ಕರ್ತವ್ಯದಲ್ಲಿದ್ದ RPF ಸಿಬ್ಬಂದಿಗೆ ವರದಿ […]

ಕುಂದಾಪುರದಲ್ಲಿ ಎಂಐಟಿಕೆ ಪ್ರೀಮಿಯರ್ ಲೀಗ್; ಹಾವ್ಕ್ ಐಸ್ ತಂಡಕ್ಕೆ ಜಯ.

ಕುಂದಾಪುರ: ಎಂಐಟಿ ಕುಂದಾಪುರದಲ್ಲಿ ಎಂಪಿಎಲ್ 2025 (ಎಂ ಐ ಟಿ ಕೆ ಪ್ರೀಮಿಯರ್ ಲೀಗ್) ಆಯೋಜಿಸಲಾಗಿತ್ತು. ಇದರಲ್ಲಿ 8 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಹಾವ್ಕ್ ಐಸ್ ತಂಡವು ಎಂಬಿಎ ಡೆಮನ್ಸ್ ತಂಡವನ್ನು ಸೋಲಿಸಿ ವಿಜೇತರಾದರು. ಹುಡುಗಿಯರ ಆರು ತಂಡಗಳಿದ್ದು, ಫೀನಿಕ್ಸ್ ತಂಡ ವಿಜೇತರು ಮತ್ತು ಹಾಕ್ ಐಸ್ ರನ್ನರ್ಸ್ ಆಗಿ ಹೊರಹೊಮ್ಮಿದರು. ಫೈನಲ್ಸ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ವಿಕಾಸ್ ಬಿ ಪೂಜಾರಿ, ಬೆಸ್ಟ್ ಬೌಲರ್ ರಜಿಕ್, ಬೆಸ್ಟ್ ಬ್ಯಾಟ್ಸ್‌ಮನ್ ಅಖಿಲ್ ಮತ್ತು ಮ್ಯಾನ್ ಆಫ್ […]