ಉಡುಪಿ: ದೇಶದ ಸುಭಿಕ್ಷೆ, ಸನಾತನ ಧರ್ಮದ ರಕ್ಷಣೆಗಾಗಿ ಮನ್ಯುಸೂಕ್ತ ಪುನಶ್ಚರಣ ಹೋಮ

ಉಡುಪಿ: ಭಾರತ ದೇಶದ ಸುಭಿಕ್ಷೆ ಕ್ಷೇಮ‌, ಸಮೃದ್ಧಿ ಹಾಗೂ ಸನಾತನ ಧರ್ಮಕ್ಕೆ ಎದುರಾಗುತ್ತಿರುವ ಹಾನಿಗಳಿಂದ ರಕ್ಷಣೆಗಾಗಿ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಮಾರು 300ಕ್ಕೂ ಅಧಿಕ ಋತ್ವಿಜರು ವೈದಿಕರಿಂದ ಮನ್ಯುಸೂಕ್ತ ಪುನಶ್ಚರಣ ಹೋಮವನ್ನು ನಡೆಸಲಾಯಿತು.‌ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪೇಜಾವರ ಶ್ರೀ ಅದಮಾರು ಹಾಗೂ ಶ್ರೀ ಕಾಣಿಯೂರು ಮಠಾಧೀಶರ ಪೂರ್ಣಾನುಗ್ರಹಪೂರ್ವಕ ಸಹಕಾರದೊಂದಿಗೆ ಈ ಹೋಮವನ್ನು ನಡೆಸಲಾಯಿತು. 25 ಯಜ್ಞ ಕುಂಡಗಳಲ್ಲಿ ಈ ಯಾಗ ಹಾಗೂ ಮಹಾಗಣಪತಿ ಹೋಮ ನಡೆಯಿತು.‌ ಶ್ರೀ ಪೇಜಾವರ ಮಠದ ಪಟ್ಟದ […]

ಪ್ರೀತಿಯ ಉಡುಪಿXPRESS ಓದುಗರೇ ನಿಮಗೆಲ್ಲಾ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು

ಪ್ರೀತಿಯ ಉಡುಪಿ ಓದುಗರೇ ನಿಮಗೆಲ್ಲಾ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ದೀಪಾವಳಿಗೆ ನಿಮ್ಮ ಬದುಕು ಇನ್ನಷ್ಟು ಬೆಳಗಲಿ. ಹಬ್ಬ, ಸಡಗರ, ನೆಮ್ಮದಿ, ಉಲ್ಲಾಸ ಕೊಡಲಿ. ದೀಪಾವಳಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭಾಶಯಗಳು.

ಬದುಕು ಭಾವಕ್ಕೆ ಬೆಳಕು ಸಿಗುವುದು ಇದೇ ಹಬ್ಬದಿಂದ: ದೀಪಾವಳಿಯ ವಿಶೇಷ ಬರಹ

ದೀಪಾವಳಿ ಹಬ್ಬ ಎಂದಾಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ ಮತ್ತು ಬೆಳಕು. ಆದರೆ ಈ ಬೆಳಕು ಕೇವಲ ಹೊರಗಿನ ಬೆಳಕು ಮಾತ್ರವಲ್ಲ, ಅದು ಮನುಷ್ಯನೊಳಗಿನ ಅಂಧಕಾರವನ್ನು ಹೋಗಲಾಡಿಸುವ ಸಂಕೇತವಾಗಿದೆ. ಮನುಷ್ಯನಲ್ಲಿರುವ ಅಜ್ಞಾನ, ದುರ್ವಿಚಾರ, ದುಆಚಾರ ಹಾಗೂ ಮನದ ಕತ್ತಲೆ ಇವುಗಳನ್ನೆಲ್ಲ ದೂರ ಮಾಡಿ, ಆತ್ಮಜ್ಞಾನ ಮತ್ತು ಶಾಂತಿಯ ಬೆಳಕು ಹಚ್ಚುವ ಹಬ್ಬವೇ ದೀಪಾವಳಿ. ನಾವು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಮನೆಯಲ್ಲಿ ದೀಪ ಬೆಳಗಿಸುತ್ತೇವೆ. ಆದರೆ ದೀಪಾವಳಿ ದಿನದಲ್ಲಿ ದೀಪ, ಹಣತೆ, ಬೆಳಕಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. […]

ಉಡುಪಿ:ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಇವರಿಂದ ಸರಕಾರಿ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗಳ ಪರಿಶೀಲನೆ

ಉಡುಪಿ:ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಅವರು ಶನಿವಾರ ಕಾಪು ತಾಲೂಕು ಬೆಳಪು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರಕಾರಿ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರಿನ ಲಾಡ್ಜ್ ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು: ಸಾವಿನ ಬಗ್ಗೆ ಅನುಮಾನ ವ್ಯಕ್ತ!

ಪುತ್ತೂರು: ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ತಕ್ಷಿತ್‌ (20) ಅವರ ಮೃತದೇಹ ಬೆಂಗಳೂರಿನ ವಸತಿಗೃಹದಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ಮೂಡಿದೆ. ತಕ್ಷಿತ್‌ ಕುಟುಂಬ ಮೂಲತ ತಮಿಳುನಾಡಿನವರು. ಸೇಡಿಯಾಪಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗಿನಿಂದ ತಕ್ಷಿತ್‌ ತಂದೆ ಪ್ರಸಾದ್‌ ಅವರು ಮಗನ ಮೊಬೈಲ್‌ಗೆ ಕರೆ ಮಾಡುತ್ತಿದ್ದರೂ ಆತ ಕರೆ ಸ್ವೀಕರಿಸಿರಲಿಲ್ಲ. ಸಂಜೆ ವೇಳೆಗೆ ಮಡಿವಾಳ ಪೊಲೀಸರು ಕರೆ ಮಾಡಿ ತಕ್ಷಿತ್‌ ವಸತಿಗೃಹದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಮಾಹಿತಿ […]