ಬೀದಿನಾಯಿಗಳ ದಾಳಿಗೆ ಮೂರು ವರ್ಷದ ಬಾಲಕಿ ಮೃತ್ಯು.

ಜಲ್ನಾ: ನಗರದ ಯಶವಂತ್ ನಗರ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಬೀದಿನಾಯಿಗಳ ಹಿಂಡು ನಡೆಸಿದ ದಾಳಿಗೆ ಮೂರು ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ನಡೆದಿದೆ. ಪಾರಿ ಗೋಸ್ವಾಮಿ (3) ಮೃತ ಬಾಲಕಿ. ರವಿವಾರ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಬಿಹಾರಕ್ಕೆ ತೆರಳಬೇಕಿದ್ದ ಪಾರಿ, ಕೊನೆಗಳಿಗೆಯಲ್ಲಿ ತಂದೆಯೊಂದಿಗೆ ಉಳಿಯಲು ನಿರ್ಧರಿಸಿದ್ದಳು. ಸೋಮವಾರ ಮುಂಜಾನೆ 3.30ರ ಸುಮಾರಿಗೆ ತಂದೆ ಗಾಢ ನಿದ್ರೆಯಲ್ಲಿದ್ದಾಗ ತಾಯಿಯನ್ನು ಹುಡುಕುತ್ತಾ ಪಾರಿ ಮನೆಯಿಂದ ಹೊರಬಂದಿದ್ದಾಳೆ. ಈ ವೇಳೆ ಬೀದಿಯಲ್ಲಿ ಅಲೆಯುತ್ತಿದ್ದ ಬಾಲಕಿಯನ್ನು ಸುತ್ತುವರಿದ ಬೀದಿನಾಯಿಗಳ ಗುಂಪು, ಆಕೆಯ ಮೇಲೆ […]

ರಾಜ್ಯಾದ್ಯಂತ 13 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟ: ಸಚಿವ ಮಧು ಬಂಗಾರಪ್ಪ ಮಾಹಿತಿ

ಶಿವಮೊಗ್ಗ: ರಾಜ್ಯಾದ್ಯಂತ 13 ಸಾವಿರ ಶಿಕ್ಷಕರ ನೇಮಕಾತಿಗೆ ಸರಕಾರ ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 23 ರಿಂದ ನವೆಂಬರ್ 9 ರವರೆಗೆ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 7ರಂದು ಟಿಇಟಿ ಪರೀಕ್ಷೆ ನಡೆಸಿ, ಡಿಸೆಂಬರ್ 31ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಾಲೇಜಿನಲ್ಲಿ ದೀಪಾವಳಿ ಹಬ್ಬ ಆಚರಣೆ.

ಮೂಡ್ಲಕಟ್ಟೆ: ದೀಪಾವಳಿ ಸಂಭ್ರಮಾಚರಣೆ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಐ ಎಮ್ ಜೆ ಸಂಸ್ಥೆಯ ಅಕಾಡೆಮಿಕ್ ಡೀನ್ ಡಾ.ಎಸ್ ಎನ್ ಭಟ್, ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮಕೃಷ್ಣ ಹೆಗ್ಡೆ, ಉಪಪ್ರಾಂಶುಪಾಲರಾದ ಡಾ ಮೆಲ್ವಿನ್ ಡಿ ಸೋಜ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊಫೆಸರ್ ಅಕ್ಷತ ನಾಯಕ್, ವಿದ್ಯಾರ್ಥಿ ಮುಖಂಡ ಶ್ರೀಹರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರು ಉದ್ಘಾಟನಾ ಭಾಷಣದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. […]

ಉಡುಪಿ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ; ಗಂಧೋಪಚಾರ, ಎಣ್ಣೆಶಾಸ್ತ್ರದಲ್ಲಿ ಪಾಲ್ಗೊಂಡ ಮಠಾಧೀಶರು

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ದೀಪಾವಳಿ‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತರು ಕಲಶಪೂಜೆ ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ಮಾಡಲಾಯಿತು. ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಪಾದರು […]

ಪಣಿಯಾಡಿ ಏಕದಂತ ಸೇವಾ ಸಮಿತಿಯಿಂದ 27 ಬಡಕುಟುಂಬಕ್ಕೆ ಆಹಾರ ಸಾಮಗ್ರಿ ವಿತರಣೆ

ಉಡುಪಿ: ಏಕದಂತ ಸೇವಾ ಸಮಿತಿ ಪಣಿಯಾಡಿ ಸಂಸ್ಥೆ ದಾನಿಗಳ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ತಲಾ 2000ರಂತೆ 27 ಕುಟುಂಬಕ್ಕೆ 54,000ರೂಪಾಯಿ ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸುವ ಪಂಚಮ ವರ್ಷದ ಕಾರ್ಯಕ್ರಮಕ್ಕೆ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ಅವರು ಪಣಿಯಾಡಿ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಾಲನೆ ನೀಡಿದರು. ಸಮಿತಿಯ ಅಧ್ಯಕ್ಷ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರ ಶೇಖರ್ ಶೆಟ್ಟಿ, ಸಂಚಾಲಕ ಪಳ್ಳಿ ಲಕ್ಷ್ಮೀ ನಾರಾಯಣ ಹೆಗ್ಡೆ, ವಿಠ್ಠಲಮೂರ್ತಿ […]