ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರು ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ; ಆಹಾರ ಇಲಾಖೆ ಮಾಹಿತಿ

ಬೆಂಗಳೂರು: ಎಪಿಎಲ್‌ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ ಸಿಗಲಿದೆ. ಹೌದು, ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಮಧ್ಯೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಅರ್ಹತೆ ಇದ್ರೂ ಎಪಿಎಲ್‌ಗೆ ಬದಲಾಗಿ ವಂಚಿತರಾದವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. 45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರ ಆಹಾರ ಇಲಾಖೆಗೆ ಗಡುವು ಕೊಟ್ಟಿದೆ. ಎಪಿಎಲ್‌ಗೆ ಬದಲಾದವರು ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. […]
ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; DA ಶೇ.2 ಹೆಚ್ಚಳ.

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ತುಟ್ಟಿ ಭತ್ಯೆಯನ್ನು (Dearness Allowance) ಶೇ. 2ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ.12.25 ರಿಂದ ಶೇ.14.25 ಗೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಘೋಷಿಸಿದ ಬೆನ್ನಲ್ಲೇ ಸಾಮಾನ್ಯವಾಗಿ ರಾಜ್ಯ ಸರ್ಕಾರವೂ ಏರಿಕೆ ಮಾಡುತ್ತದೆ. ವಿಜಯದಶಮಿಯ […]
ಉಡುಪಿ: ಅ.17ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಅ.17ರಂದು ಬೆಳಿಗ್ಗೆ 09:30ರಿಂದ ಸಂಜೆ 05:30 ಗಂಟೆಯವರೆಗೆ ಕುಂದಾಪುರ/ಹಾಲಾಡಿ/ಬೆಳ್ವೆ/ಹೈಕಾಡಿ/ಬಿದ್ಕಲ್‌ಕಟ್ಟೆ/ಆವರ್ಸೆ ವ್ಯಾಪ್ತಿಯಲ್ಲಿ 110/11ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರ ದಿಂದ ಹೊರಡುವ 11 ಕೆ.ವಿ. ಬೆಳ್ವೆ, ಹೈಕಾಡಿ,ಬಿದ್ಕಲ್‌ಕಟ್ಟೆ ಮತ್ತು ಆವರ್ಸೆ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ರಟ್ಟಾಡಿ, ಮಾವಿನಕೊಡ್ಲು, ಹೆಮ್ಮಣ್ಣು, ಅಮಾಸೆಬೈಲು, ಜಡ್ಡಿನಗದ್ದೆ, ತೊಂಬಟ್ಟು, ಬಳ್ಮನೆ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ, ಹಾರ್ದಳ್ಳಿ- ಮಂಡಳ್ಳಿ, ಯಡಾಡಿ-ಮತ್ಯಾಡಿ ಮತ್ತು ಹಾಲಾಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅ.18ರಂದು ಬೆಳಿಗ್ಗೆ […]
ಉಡುಪಿ:ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಜಿಲ್ಲಾ ಪಂಚಾಯತ್ ನ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನೆಡೆಯಿತು. ಸಂಸದರು ಸಂಜೀವಿನಿ ಸ್ವ ಸಹಾಯ ಗುಂಪು ಹಾಗೂ ಒಕ್ಕೂಟಗಳ ಬಲವರ್ಧನೆ, ಸಂಜೀವಿನಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ವಿವಿಧ ಸ್ವ ಉದ್ಯೋಗ ಹಾಗೂ ಪ್ರವಾಸೋದ್ಯಮ ಚಟುವಟಿಕೆ, ಹಣಕಾಸು ಸೇರ್ಪಡೆ ಹಾಗೂ ವಿವಿಧ ವಿಷಯಗಳ ಬಗ್ಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.ಸಭೆಯಲ್ಲಿ […]
ಉಡುಪಿ:ಅಲ್ಪಸಂಖ್ಯಾತ ಕಾನೂನು ಪದವೀಧರರ ಶಿಷ್ಯವೇತನ: ಅರ್ಜಿ ಆಹ್ವಾನ

ಉಡುಪಿ: 2025-26 ನೇ ಸಾಲಿಗೆ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ (ಮುಸ್ಲಿಂ,ಕ್ರಿಶ್ಚಿಯನ್,ಜೈನ್,ಬೌದ್ದ ಮತ್ತು ಸಿಖ್) ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಹ ಮತ್ತು ಆಸಕ್ತ ಕಾನೂನುಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅವಶ್ಯಕ ದಾಖಲೆಗಳೊಂದಿಗೆ ಅ.31 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಿಂದ ಕೆಲಸದ ಸಮಯದಲ್ಲಿ ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ:0820-2574596 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ […]