ಖ್ಯಾತ ತೆಂಕುತಿಟ್ಟು ಯಕ್ಷಗಾನ ಭಾಗವತ ದಿನೇಶ ಅಮ್ಮಣ್ಣಾಯ ನಿಧನ.

ಮಂಗಳೂರು: ಯಕ್ಷಗಾನ ಹಿರಿಯ ಭಾಗವತ ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ(65) ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ‘ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು. ದಾಮೋದರ ಮಂಡೆಚ್ಚರ ಗರಡಿಯಲ್ಲಿ ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು. ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ […]
ಅಕ್ರಮ ಪಟಾಕಿ ದಾಸ್ತಾನು ಮಳಿಗೆಗೆ ಪೊಲೀಸರ ದಾಳಿ, ಕೋಟ್ಯಾಂತರ ಮೌಲ್ಯದ ಪಟಾಕಿ ವಶ

ಉಡುಪಿ: ಉಡುಪಿ ಜಿಲ್ಲೆಯ ವಿವಿಧೆಡೆ ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ದಾಳಿ ನಡೆಸಿದ ಪೊಲೀಸರು, ಅಪಾರ ಪ್ರಮಾಣದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯ್ಯಾರು, ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಂಜಾಲು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಎಂಬಲ್ಲಿ ದಾಳಿ ನಡೆಸಿ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ವಶಪಡಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಆರೋಪಿಗಳನ್ನು ಶಿವಾನಂದ ರಾವ್ ಕುಂಜಾಲು, ಪ್ರಶಾಂತ್ ಕೆ. ಜೋಗಿ ತೆಕಟ್ಟೆ ಎಂದು ಗುರುತಿಸಿದೆ. ದೀಪಾವಳಿಯ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಪಟಾಕಿ […]
ಉಡುಪಿ: ಸರಕಾರಿ ಆಸ್ಪತ್ರೆಯ ನಿವೇಶನದಲ್ಲಿ ರಾಶಿ ರಾಶಿ ತ್ಯಾಜ್ಯ; ಸೂಕ್ತ ಕ್ರಮಕ್ಕೆ ಆಗ್ರಹ

ಉಡುಪಿ: ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಂಭಾಗದ ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿವೇಶನದಲ್ಲಿ ಕಸ ತ್ಯಾಜ್ಯಗಳ ರಾಶಿ ಹಾಕಲಾಗಿದ್ದು, ಪರಿಣಾಮ ಪರಿಸರದಲ್ಲಿ ಗಬ್ಬು ವಾಸನೆ ಹೊಡೆಯುತ್ತಿದೆ.ಇದರಿಂದ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಸ್ಥಳದಲ್ಲಿ ಹಸಿ ತ್ಯಾಜ್ಯ, ಕಟ್ಟಡ ನಿರ್ಮಾಣದ ತ್ಯಾಜ್ಯಗಳು, ತುಂಬಿಕೊಂಡಿವೆ. ತ್ಯಾಜ್ಯ ಎಸೆಯಲು ಸರಕಾರಿ ಸ್ಥಳವನ್ನು ಬಳಸಿಕೊಂಡಿದ್ದು, ನಿವೇಶನದ ತಡೆಬೇಲಿಯನ್ನು ತೆರವುಗೊಳಿಸಲಾಗಿದೆ. ತಕ್ಷಣ ನಗರಸಭೆ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ […]
ಉಡುಪಿ: ವಿವಿಧ ಹುದ್ದೆಗಳಿಗೆ ನೇಮಕಾತಿ.

ಉಡುಪಿ: ಉಡುಪಿ ಕಿನ್ನಿಮುಲ್ಕಿಯಲ್ಲಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಕಂಪನಿಗೆ ವಿವಿಧ ಹುದ್ದೆಗೆ ಜನ ಬೇಕಾಗಿದ್ದಾರೆ. ಹುದ್ದೆಗಳು: ಆಸಕ್ತರು ತಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳಿಸಬಹುದು.ಮೊ: [email protected]
ಉದ್ಯೋಗ ತೊರೆದವರು ಶೇ.75ರಷ್ಟು ಪಿಎಫ್ ಹಣವನ್ನು ತಕ್ಷಣ ಪಡೆಯಬಹುದು: ಇಪಿಎಫ್ಒ

ನವದೆಹಲಿ: ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ(ಪಿಎಫ್) ಖಾತೆಯಲ್ಲಿನ ಶೇ.75ರಷ್ಟು ಹಣವನ್ನು ಉದ್ಯೋಗ ತೊರೆದ ತಕ್ಷಣವೇ ಹಿಂಪಡೆಯಬಹುದು ಹಾಗೂ ಉದ್ಯೋಗ ತೊರೆದು ಒಂದು ವರ್ಷದವರೆಗೂ ನಿರುದ್ಯೋಗಿಯಾಗಿ ಉಳಿದ ಬಳಿಕ ಸಂಪೂರ್ಣ ಮೊತ್ತವನ್ನು ಪಡೆಯಬಹುದು ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬುಧವಾರ ಸ್ಪಷ್ಟೀಕರಣ ನೀಡಿದೆ. ಉದ್ಯೋಗ ತೊರೆದವರು ಪಿಎಫ್ ಮೊತ್ತ ಪಡೆಯಲು 1 ವರ್ಷ ಕಾಯಬೇಕು ಎಂಬ ಹೊಸ ನಿಯಮವನ್ನು ಮಂಗಳವಾರವಷ್ಟೇ ಇಪಿಎಫ್‌ಒ ಘೋಷಿಸಿತ್ತು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಇಪಿಎಫ್‌ಒ, […]