ಮಣಿಪಾಲ: ರಿಸೆಪ್ಶನ್ ಹುದ್ದೆಗೆ ಬೇಕಾಗಿದ್ದಾರೆ.

ಮಣಿಪಾಲ: ಮಣಿಪಾಲದಲ್ಲಿ ಇರುವ ಪ್ರತಿಷ್ಠಿತ ಹೋಟೆಲ್’ನಲ್ಲಿ ರಿಸೆಪ್ಶನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯರಿಗೆ ಅವಕಾಶ ನೀಡಲಾಗುವುದು. ಪಿಯುಸಿ ಉತ್ತೀರ್ಣ ಆದವರು ಬೇಕಾಗಿದ್ದಾರೆ. ಸಮಯ ಬೆಳಿಗ್ಗೆ 8:30 ರಿಂದ ಸಂಜೆ 5:30 ತನಕ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7022084165
ಭಟ್ಕಳ: ಭೀಕರ ರಸ್ತೆ ಅಪಘಾತ; ಲಾರಿ ಚಕ್ರದಡಿಗೆ ಸಿಲುಕಿ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು.

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಭಟ್ಕಳದ ತೆಂಗಿನಗುಂಡಿ ಕ್ರಾಸ್ ಬಳಿ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದು ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅ.15 ರಂದು ಬುಧವಾರ ತಡರಾತ್ರಿ ನಡೆದಿದೆ. ಮೃತ ಸ್ಕೂಟರ್ ಸವಾರ ಫಿರ್ದೌಸ್ ನಗರದ ನಿವಾಸಿ ಅನೀಸ್ ಮೊಹ್ತಿಶಾಮ್ ಅವರ ಪುತ್ರ ಮೊಹ್ತಿಶಾಮ್ (18) ಎಂದು ಗುರುತಿಸಲಾಗಿದೆ. ಪ್ಲೈವುಡ್ ತುಂಬಿದ ಲಾರಿಯೊಂದು ಕೇರಳದಿಂದ ಮುಂಬೈಗೆ ತೆರಳುತ್ತಿದ್ದಾಗ ತೆಂಗಿನಗುಂಡಿ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ […]
ಕುಂದಾಪುರ:ಮೂಡ್ಲಕಟ್ಟೆ ಐಎಂಜೆ ಹೆಲ್ತ್ ಮತ್ತು ಸೈನ್ಸ್ ಬ್ಲಾಕ್ ಉದ್ಘಾಟನೆ

ಮೂಡ್ಲಕಟ್ಟೆ ಕುಂದಾಪುರದ ಐಎಂಜೆ ಸಂಸ್ಥೆಯು 2025ರ ಅಕ್ಟೋಬರ್ 13 ರಂದು ಐಎಂಜೆ ಹೆಲ್ತ್ ಮತ್ತು ಸೈನ್ಸ್ ಬ್ಲಾಕ್ ಉದ್ಘಾಟನೆ ಹಾಗೂ ಪಠ್ಯಾರಂಭ ಸಮಾರಂಭವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಸಂಸ್ಥೆಯ ಪಯಣದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿ, ಬಿ.ಎಸ್.ಸಿ ನರ್ಸಿಂಗ್ 6ನೇ ಬ್ಯಾಚ್, ಅಲೈಡ್ ಹೆಲ್ತ್ ಸೈನ್ಸ್ 2ನೇ ಬ್ಯಾಚ್ ಮತ್ತು ಫಿಸಿಯೋಥೆರಪಿ 1ನೇ ಬ್ಯಾಚ್‌ಗಳ ಉದ್ಘಾಟನೆಯಿಂದ ಗುರುತಿಸಲ್ಪಟ್ಟಿತು. ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಐಎಂಜೆ ಹೆಲ್ತ್ ಸೈನ್ಸ್ ಬ್ಲಾಕ್ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಗಿ, ನಂತರ ಪಠ್ಯಾರಂಭ ಕಾರ್ಯಕ್ರಮ ನಡೆಯಿತು.ಸಭೆಯನ್ನು […]
ಸರ್ಕಾರಿ ನೌಕರರು RSS ಚಟುವಟಿಕೆಗಳಲ್ಲಿ ಭಾಗಿಯಾದರೆ ಶಿಸ್ತು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ

ಬೆಂಗಳೂರು: ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸರ್ಕಾರದ ನಿಯಮದ ಏನು ಪಾಲನೆ ಇದೆಯೋ ಅದು ಪಾಲನೆಯಾಗಬೇಕು. ಗಣವೇಷ ಹಾಕಿಕೊಂಡು ಪಿಡಿಒಗಳು, ಆರೋಗ್ಯ ಅಧಿಕಾರಿಗಳು ಓಡಾಡುತ್ತಿದ್ದು ಅವರನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್ ಆಗಲಿ, ತಾಲಿಬಾನಿ ಆಗಲಿ ಯಾರಿಗೂ ಶಾಲೆಗಳಲ್ಲಿ ಅವಕಾಶ ಕೊಡಬಾರದು. ಶಾಲೆಗಳಲ್ಲಿ ಕೋಮು ವಿಷಬೀಜ ಬಿತ್ತಲು […]
ಉಡುಪಿ ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿ ವಾರ್ಷಿಕ ಸಭೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಪ್ರದಾಯ ಆಚರಣೆಗಳಲ್ಲೊಂದಾದ ಕಂಬಳವನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಕಾರ್ಯೋನ್ಮುಖರಾಗಿರುವ ಉಡುಪಿ ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯ ವಾರ್ಷಿಕ ಸಭೆಯು ಬ್ರಹ್ಮಾವರದ ಧರ್ಮಾವರಂ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು. ಇದೀಗ ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯ ಸುಮಾರು 35ಕ್ಕೂ ಹೆಚ್ಚಿನ ಸಂಪ್ರದಾಯ ಕಂಬಳ ಆಯೋಜನೆಯ ದಿನಾಂಕವನ್ನು ವಿವಿಧ ಸಂಘಟಕರು ತೀರ್ಮಾನಿಸುವುದರೊಂದಿಗೆ, ಇಂದಿನ ಕಾಲಘಟ್ಟದಲ್ಲಿ ಕಂಬಳವನ್ನು ಆಯೋಜನೆ ಮಾಡುವುದರ ಜೊತೆಗೆ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕಂಬಳ ಸಮಿತಿಯ ಕಾನೂನು […]