ಮೂಡುಬಿದಿರೆ:ಮಂಗಳೂರು ವಿ ವಿ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ ಆಳ್ವಾಸ್‌ಗೆ ಸತತ 15 ನೇ ಬಾರಿ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯ ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ 11 ಚಿನ್ನ, 07 ಬೆಳ್ಳಿ ಹಾಗೂ 02 ಕಂಚಿನ ಪದಕದೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಫಲಿತಾಂಶ :ಪುರುಷರ ವಿಭಾಗದಲ್ಲಿ : ದೇವರಾಜು – 61 ಕೆಜಿ ವಿಭಾಗದಲ್ಲಿ (ದ್ವಿತೀಯ), ನಿಖಿಲ್ – 65 ಕೆಜಿ ವಿಭಾಗದಲ್ಲಿ (ಪ್ರಥಮ), ರಾಕೇಶ್ – 70 ಕೆಜಿ ವಿಭಾಗದಲ್ಲಿ […]
ಶ್ರೀನಿವಾಸ್ ಯೂನಿವರ್ಸಿಟಿ ಮುಕ್ಕ ಕ್ಯಾಂಪಸ್‌ನಲ್ಲಿ ಭಾರತೀಯ ಜ್ಞಾನ ಪದ್ದತಿಯ ಕುರಿತು ವಿಶೇಷ ಸಂವಾದ ಕಾರ್ಯಕ್ರಮ.

ಮಂಗಳೂರು: ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮತ್ತು ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕುಡುಪು ಕಟ್ಟೆಯ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದ ಸಹಯೋಗದೊಂದಿಗೆ ಭಾರತೀಯ ಜ್ಞಾನ ಪದ್ದತಿಯ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಖ್ಯಾತ ಉಪನ್ಯಾಸಕರು, ಸಾಮಾಜಿಕ ಮಾಧ್ಯಮದ ಪ್ರಸಿದ್ಧ ವಾಗ್ಮಿ, ಆಧ್ಯಾತ್ಮಿಕ ನಾಯಕರು ಹಾಗೂ ಇಸ್ಕಾನ್ ದ್ವಾರಕಾ ನವದೆಹಲಿ ಇದರ ಉಪಾಧ್ಯಕ್ಷರಾದ […]
ಉಡುಪಿ: ಆರೆಸ್ಸೆಸ್ ವಿಶ್ವಮಟ್ಟದಲ್ಲಿ ಸನಾತನ ಧರ್ಮದ ಮಹತ್ವ, ಗೌರವ ಹೆಚ್ಚಿಸಿದೆ: ಪುತ್ತಿಗೆ ಶ್ರೀ

ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಶ್ವದಲ್ಲಿ ಸನಾತನ ಧರ್ಮದ ಮಹತ್ವ ಗೌರವವನ್ನು ಹೆಚ್ಚಿಸಿದೆ ಮತ್ತು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ ತ್ಯಾಗ, ಸೇವೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ. ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ವೀಡಿಯೋ ಮೂಲಕ ಸಂದೇಶ ನೀಡಿದ ಶ್ರೀಪಾದರು, ಆರೆಸ್ಸೆಸ್ ಶತಮಾನೋತ್ಸವ ಆಚರಿಸುತ್ತಿದೆ. ವ್ಯಕ್ತಿಗೆ ವರ್ಷ ನೂರಾದರೆ ದುರ್ಬಲ ಆದಂತೆ. ಆದರೆ ಸಂಸ್ಥೆಗೆ 100 ವರ್ಷವಾದರೆ ಇನ್ನಷ್ಟು ಪ್ರಬಲವಾಗಿ ಬೆಳೆಯುತ್ತಿದೆ ಎಂದರ್ಥ. ಈ ದೃಷ್ಟಿಯಲ್ಲಿ ಆರೆಸ್ಸೆಸ್ […]
ಉಡುಪಿ: ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಆಯೋಜಿಸಲಾದ ಕಾರಂತ ಜನ್ಮದಿನೋತ್ಸವ- ಸಾಹಿತ್ಯೋತ್ಸವದಲ್ಲಿ ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಅವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಶಿವರಾಮ ಕಾರಂತರು ಬರೆದ ಚೋಮನ ದುಡಿ ಕನ್ನಡ ಮೊದಲ ದಲಿತ ಕಾದಂಬರಿ. ಅವರು ದಲಿತರ ಭೂಮಿಯ ಪ್ರಶ್ನೆ ಮೊತ್ತ ಮೊದಲ ಬಾರಿಗೆ ಈ ಕಾದಂಬರಿಯಲ್ಲಿ […]