ಬ್ರಹ್ಮಾವರ: ಎಸ್ ಎಂ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ.

ಬ್ರಹ್ಮಾವರ: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಉಡುಪಿ ಹಾಗೂ ಜನತಾ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಎಸ್ ಎಂ ಎಸ್ ಪದವಿಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳಾದ ಶರಣ್ 97kg, ಸುಕನ್ಯಾ 72kg, ಧನ್ವಿತಾ 68kg, ಅನನ್ಯ 62kg, ಪ್ರಜ್ಞಾ 59kg ಹಾಗೂ ಮಂದಾರ 55kg ವಿಭಾಗದಲ್ಲಿ ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಂದ್ರ 57kg, ಮೆರಿಲ್ 50kg ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ […]

ಬೈಂದೂರು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ದಾಳಿ: ಸೊತ್ತು ವಶ

ಉಡುಪಿ: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ಅ.11ರಂದು ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಲ್ತೋಡು ಗ್ರಾಮದ ಕಪ್ಪಡಿ ಎಂಬಲ್ಲಿರುವ ಸರಕಾರಿ ಜಾಗದಲ್ಲಿ ವಿಜಯ ಶೆಟ್ಟಿ ಎಂಬಾತ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, 90,000ರೂ. ಮೌಲ್ಯದ ಯಂತ್ರ, ಟಿಲ್ಲರ್, ಕೆಂಪು ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೈಂದೂರು: ಅಕ್ರಮ ಗಣಿಗಾರಿಕೆಗೆ ದಾಳಿ; ಓರ್ವನ ಬಂಧನ, ಸೊತ್ತು‌ ವಶ

ಉಡುಪಿ: ಬೈಂದೂರು ತಾಲೂಕಿನ ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆಲೂರು ಗ್ರಾಮದ ಮನೋಜ ಮೊಗವೀರ(43) ಬಂಧಿತ ಆರೋಪಿ. ವಿಚಾರಣೆ ವೇಳೆ ಸರಕಾರಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಸುಮಾರು 60*40 ಉದ್ದ ಅಗಲದ ವಿಸ್ತೀರ್ಣ ಜಾಗದಲ್ಲಿ ನೆಲದಿಂದ ಸುಮಾರು 3 ಅಡಿ ಅಳದಲ್ಲಿ ಸುಮಾರು 60 ಅಡಿ ಉದ್ದ ಮತ್ತು 40 ಅಡಿ ಅಗಲದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು […]

ಮಂಗಳೂರು:ಮಾನಸಿಕ ಆರೋಗ್ಯ ದಿನಾಚರಣೆ:“ಬೀಕನ್ ಬಡ್ಡೀಸ್” ಮಕ್ಕಳ ಹಕ್ಕುಗಳ ಕ್ಲಬ್ ಉದ್ಘಾಟನೆ

ಮಂಗಳೂರು : ಪ್ರಸಕ್ತ ದಿನಗಳಲ್ಲಿ ಮಕ್ಕಳ ಮಾನಸಿಕ ಸಮಸ್ಯೆ ಆತಂಕಕಾರಿಯಾಗಿದೆ. ಪೊಲೀಸ್ ಠಾಣೆಗೆ ಬರುತ್ತಿರುವ ಯುವಜನತೆಯ ಸಮಸ್ಯೆಗಳು ಗಾಬರಿ ಹುಟ್ಟಿಸುತ್ತದೆ. ಶಾಲಾ ಕಾಲೇಜುಗಳು ಉತ್ತಮ ಮೌಲ್ಯ ಮತ್ತು ಶಿಸ್ತುಬದ್ಧ ಶಿಕ್ಷಣವನ್ನು ನೀಡಿದರೆಉತ್ತಮ ನಾಗರಿಕರನ್ನು ನಿರ್ಮಾಣ ಮಾಡಬಹುದು. ಇಂಥ ಸೇವೆಯನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದು ಮಂಗಳೂರಿನ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಟಿ. ಡಿ. ನಾಗರಾಜ್ ಅವರು ಹೇಳಿದರು. ಮಾನಸಿಕ ಆರೋಗ್ಯ ದಿನಾಚರಣೆಯಂಗವಾಗಿ ವಳಚ್ಚಿಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ “ಸಹಪಾಠಿಗಳ […]

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ಉಡುಪಿ:ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 12ನೇ “ಪದವಿ ಪ್ರದಾನ” ಸಮಾರಂಭವು ದಿನಾಂಕ 11 ಅಕ್ಟೋಬರ್ 2025 ಶನಿವಾರದಂದುಕಾಲೇಜಿನ ಆವರಣದಲ್ಲಿ ನಡೆಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಗೌರವಾನ್ವಿತಕುಲಪತಿಗಳಾದ ಡಾ. ವಿದ್ಯಾಶಂಕರ್ ಎಸ್ ಇವರು ಮುಖ್ಯ ಅತಿಥಿಗಳಾಗಿಭಾಗವಹಿಸಿ ಮಾತನಾಡಿ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್,ಬಯೋಟೆಕ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಉದಯೋನ್ಮುಖಕ್ಷೇತ್ರಗಳಲ್ಲಿ ನಿರಂತರ ಕಲಿಕೆಯ ಮಹತ್ವವನ್ನು ತಿಳಿಸಿದರು.ಮುಂದುವರೆದ ತಂತ್ರಜ್ಞಾನಗಳಲ್ಲಿ ಭಾರತದ ಸ್ಥಾನ ಮತ್ತು“ವಿಕಸಿತ ಭಾರತ್”ನ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಪಾತ್ರವಹಿಸಬೇಕೆಂದು ಕರೆನೀಡಿದರು. ನಿವಿಯಸ್ ಸೊಲ್ಯೂಷನ್ ಮಂಗಳೂರು ಇದರ ಸಹ […]