ಉಡುಪಿ: ವಿದ್ಯುತ್ ಅವಘಡದಲ್ಲಿ ಹೊಲೋ ಬ್ಲಾಕ್ ಫ್ಯಾಕ್ಟರಿ ಮಾಲೀಕ ಮೃತ್ಯು.

ಉಡುಪಿ: ಬೈಲೂರಿನ ಸುನೀತಾ ಹೊಲೋ ಬ್ಲಾಕ್ ಮಾಲೀಕ ಸುನಿಲ್ ಸೋನ್ಸ್ (45) ಅವರು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಅವಘಡ ಸಂಭವಿಸಿದೆ.ಬೈಲೂರಿನಲ್ಲಿರುವ ಸುನೀತಾ ಹೊಲೋ ಬ್ಲಾಕ್ ನಲ್ಲಿ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಾಗ ಅವರು ವಿದ್ಯುತ್ ಶಾಕ್‌ಗೆ ಒಳಗಾಗಿದ್ದರು. ತಕ್ಷಣವೇ ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷಿಸಿದ ವೈದ್ಯರು ಸುನಿಲ್ ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತರು ಪತ್ನಿ ಮತ್ತು ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಖ್ಯಾತ ಹಾಸ್ಯನಟ ‘ರಾಜು ತಾಳಿಕೋಟೆ’ ಹೃದಯಾಘಾತದಿಂದ ನಿಧನ

ಉಡುಪಿ: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ (59)  ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಜು ತಾಳಿಕೋಟೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು. ಕಳೆದ […]

ಉಡುಪಿ: ಕನಿಷ್ಠ ಕೂಲಿ, ತುಟ್ಟಿಭತ್ಯೆ ಪಾವತಿಸದೆ ಬೀಡಿ ಕಾರ್ಮಿಕರಿಗೆ ವಂಚನೆ

ಉಡುಪಿ: 2018ರಿಂದ 2024 ವರೆಗಿನ 6 ವರ್ಷಗಳ ಬಾಕಿ ಇರುವ ಕನಿಷ್ಠ ಕೂಲಿ, 2024ರಂದು ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ಯೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವಂತೆ ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಅಂಬಲಪಾಡಿಯ ಭಾರತ್ ಬೀಡಿ ಕಂಪೆನಿ ಎದುರು ಇಂದು ಧರಣಿ ನಡೆಸಿದರು. ಬೀಡಿ ಮಾಲೀಕರು ಕಾರ್ಮಿಕರನ್ನು ವಂಚನೆ ಮಾಡುತ್ತಿದ್ದಾರೆ. ಕಾನೂನುಬದ್ಧ ಸವಲತ್ತುಗಳನ್ನು ನಾಶ ಮಾಡಲು ಹೊರಟಿದ್ದಾರೆ. 2018ರಿಂದ 2024 ರವರೆಗೆ ಆರು ವರ್ಷಗಳ […]

ಉಡುಪಿ:ಕೆನರಾ ಬ್ಯಾಂಕ್ ‘ಕೆನರಾ ರಿಟೈಲ್ ಮೇಳ’ ಸಮಾರೋಪ

ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಎಂಜಿಎಂ ಕಾಲೇಜು ಮೈದಾನದಲ್ಲಿ ಅ. 11, 12ರಂದು ಯಶಸ್ವಿಯಾಗಿ ನಡೆದ ‘ಕೆನರಾ ರಿಟೈಲ್ ಮೇಳ-2025’ದ ಸಮಾರೋಪ ಸಮಾರಂಭ ರವಿವಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಎಚ್.ಕೆ. ಗಂಗಾಧರ್ ಮಾತನಾಡಿ, ಮೇಳದಲ್ಲಿ ವಿವಿಧ ಕಂಪೆನಿಗಳ ವಾಹನಗಳು, ಹೌಸಿಂಗ್ ಮತ್ತು ಸೋಲಾರ್ ಸಿಸ್ಟಮ್‌ಗಳಿಗೆ ಸಾಲ ಸೌಲಭ್ಯ ಒದಗಿಲಾಗಿದೆ. ಅಲ್ಲದೆ ಎರಡು ದಿನಗಳ ಕಾಲ ಜಿಲ್ಲೆಯ ವಿವಿಧ ಭಾಗಗಳ ಸಾಕಷ್ಟು ಗ್ರಾಹಕರು ಆಗಮಿಸಿ ವಾಹನಗಳ ವೈಶಿಷ್ಟ್ಯತೆ, […]

ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ನಲ್ಲಿ ವಿಶ್ವ ಪೋಸ್ಟ್‌ ದಿನಾಚರಣೆ.

ಕುಂದಾಪುರ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣದಲ್ಲಿ ಅಕ್ಟೋಬರ್ 9 ರಂದು ವಿಶ್ವ ಪೋಸ್ಟ್‌ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಗೂ ಕೀ ನೋಟ್ ಸ್ಪೀಕರ್ ಆಗಿ ಪ್ರವೀಣ ನಾಯಕ್ ಬಾಳೆಕೊಡ್ಲು, ಹಾಲಾಡಿ 76ರ ಶಾಖಾ ಅಂಚೆಮಾಸ್ಟರ್ ಮತ್ತು ಜೇಸಿಐ ಶಂಕರನಾರಾಯಣ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು. ಪ್ರವೀಣ ನಾಯಕ್ ಅವರು ಅಂಚೆ ಇಲಾಖೆಯ ಇತಿಹಾಸ, ಅದರ ಕಾರ್ಯಪದ್ಧತಿ ಹಾಗೂ ಇಂದಿನ ಡಿಜಿಟಲ್ ಯುಗದಲ್ಲಿಯೂ ಅಂಚೆಯ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮನೋಜ್ಞವಾಗಿ […]