ಕೋಟ:ಅ.11 ರಿಂದ 22 ರವರೆಗೆ ಹನುಮಾನ್ ಸಿಲ್ಕ್ಸ್ ನಲ್ಲಿ ದೀಪಾವಳಿ ಧಮಾಕ ಸೇಲ್

ಕೋಟ: ಹನುಮಾನ್ ಸಿಲ್ಕ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 11 ರಿಂದ 22 ರವರೆಗೆ ಧಮಾಕ ಸೇಲ್ ನಡೆಯಲಿದೆ.₹3999/- ರ ಖರೀದಿಗೆ ಒಂದು ಕೂಪನ್ ಪಡೆಯಿರಿ. ಹಾಗೂ ಪ್ರತಿದಿನ ಬಹುಮಾನಗಳನ್ನು ಗೆಲ್ಲಿರಿ. 25ಕ್ಕಿಂತಲೂ ಹೆಚ್ಚು ಬಹುಮಾನಗಳನ್ನು ಕೊಡುಗೆಯಾಗಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9611088053

ಡಾ ತಲ್ಲೂರು ಶಿವರಾಮ ಶೆಟ್ಟಿಯವರಿಗೆ 75: ಸಾರ್ಥಕ ಬದುಕಿನ ಅಮೃತ ಮಹೋತ್ಸವ

ಓರ್ವ ವ್ಯಕ್ತಿಯ ಜೀವನದಲ್ಲಿ ಎಪ್ಪತ್ತೈದರ ಹರೆಯ ಅತ್ಯಂತ ವಿಶೇಷವಾದದ್ದು. ಪ್ರಾಯವಾಗಬೇಕಾದರೆ ಏನೂ ಸಾಧನೆ ಮಾಡಬೇಕಿಲ್ಲ. ಪ್ರಾಯವಾಗುವುದು ಸಾಧನೆಯೂ ಅಲ್ಲ. ಆದರೆ, ಇಷ್ಟು ವರ್ಷದ ಜೀವನದಲ್ಲಿ ಹೇಗೆ ಬದುಕಿದ್ದಾರೆ ಎಂಬುದೇ ಸಾಧನೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಡಾ. ತಲ್ಲೂರು ಶಿವರಾಮ ಶೆಟ್ಟಿಯವರದ್ದು ಸಾರ್ಥಕ ಎಪ್ಪತ್ತೈದು ವರ್ಷಗಳು. ಹತ್ತಾರು ಸಂಸ್ಥೆಗಳೊಂದಿಗೆ ಸಕ್ರಿಯರಾಗಿದ್ದುಕೊಂಡು ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಅವರ ಬದುಕಿನಲ್ಲಿದು ಅಮೃತ ಮಹೋತ್ಸವ. ಶಿವ ಮತ್ತು ರಾಮ ಎಂಬ ದೇವರ ನಾಮಗಳಿಂದಲೇ ಪ್ರಸಿದ್ಧರಾಗಿ, ಬದುಕಿನಲ್ಲಿ ಸಮನ್ವಯ ತತ್ತ್ವವನ್ನು ಅನುಸರಿಸುತ್ತಿರುವ ಮಾನವತಾವಾದಿ […]

ಕುಂದಾಪುರ: ಗಿಫ್ಟ್ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಆನ್‌ಲೈನ್’ನಲ್ಲಿ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು

ಕುಂದಾಪುರ: ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿಯ ಅಭಿನಯ(40) ಎಂಬವರು ಫೇಸ್‌ಬುಕ್‌ಗೆ ಡೆನಿಯಲ್ ಮೈಕಲ್ ಎಂಬ ಹೆಸರಿನ ವ್ಯಕ್ತಿ ಮೇ ತಿಂಗಳಲ್ಲಿ ಸಂದೇಶ ಕಳುಹಿಸಿ, ಒಂದು ಮೊಬೈಲ್ ಹಾಗೂ ಬ್ಯಾಗ್ ಮತ್ತು 50000 ಡಾಲರ್ ನೀಡುವುದಾಗಿ ತಿಳಿಸಿದ್ದನು. ಅದು ಇಂಡಿಯನ್ ಕರೆನ್ಸಿಯಲ್ಲಿ 56 ಲಕ್ಷ ರೂ. ಆಗುವುದಾಗಿ ಹೇಳಿ ಇದನ್ನು ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಹೇಳಿದ್ದನು. ಈ […]

ಮಣಿಪಾಲ ಆರೋಗ್ಯ ಕಾರ್ಡ್-2025 ನೋಂದಣಿ ಆರಂಭ; ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ: ಮೋಹನ್ ಶೆಟ್ಟಿ

ಕುಂದಾಪುರ: ‘ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನಿಂದ (ಮಾಹೆ) ಕರ್ನಾಟಕ, ನೆರೆಯ ರಾಜ್ಯಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ‘ಮಣಿಪಾಲ ಆರೋಗ್ಯ ಕಾರ್ಡ್ 2025’ರ ನೋಂದಣಿ ಪ್ರಾರಂಭಿಸಿರುವುದಾಗಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್‌ ಘೋಷಿಸಿದ್ದಾರೆ’ ಎಂದು ಕೆಎಂಸಿ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದರು. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತಕ್ಕೆ ಆರೋಗ್ಯ ಸೇವೆ ನೀಡುವ ಧ್ಯೇಯ ಹೊಂದಿದ್ದ ಮಣಿಪಾಲ ಸಂಸ್ಥೆಯ ಸಂಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ ದೂರದೃಷ್ಟಿ, ಮಾಹೆ […]

ಮಂಗಳೂರು: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ ರೂ.29,000 ದಂಡ.

ಮಂಗಳೂರು: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ ನ್ಯಾಯಾಲಯ 29,000 ರೂ. ದಂಡ ವಿಧಿಸಿದೆ. ಮಾರುತಿ ಕಂಬಾಲ್ ದಂಡ ಪಾವತಿಸಬೇಕಾದ ವ್ಯಕ್ತಿ ಎಂದು ತಿಳಿದುಬಂದಿದೆ. ಜೆಎಂಎಫ್‌ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಅವರು ಮಾರುತಿ ಕಂಬಾಲ್‌ಗೆ ದಂಡ ವಿಧಿಸಿ ಆದೇಶ ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.