ಪಡುಬಿದ್ರೆ: ಸಿರಿಮುಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉದ್ಘಾಟನೆ

ಪಡುಬಿದ್ರೆ: ಭಂಟರ ಸಂಘ ಪಡುಬಿದ್ರೆ, ಬಂಟ್ಸ್ ವೆಲ್ಪೇರ್ ಟ್ರಸ್ಟ್ ಪಡುಬಿದ್ರೆ ಹಾಗೂ ಸಿರಿಮುಡಿ ದತ್ತಿನಿಧಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರೆ ಸಹಭಾಗಿತ್ವದಲ್ಲಿ ಸದಾನಂದ ಕುಡ್ಡು ಶೆಟ್ಟಿ ಹವಾನಿಯಂತ್ರಿತ ಸ್ವಂತ ಕಟ್ಟಡದಲ್ಲಿ ಸ್ಥಾಪಿಸಿರುವ ಸಿರಿಮುಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ) ಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ರವಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ವಾಣಿಜ್ಯ ಬ್ಯಾಂಕ್‍ಗಳ ತವರೂರಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಸಹಕಾರ ಸಂಘ, […]

ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ ಕಾರು ಸುಟ್ಟು ಹಾಕಿದ ದುಷ್ಕರ್ಮಿಗಳು; ಪ್ರಕರಣ ದಾಖಲು

ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಯಾರೋ ದುಷ್ಕರ್ಮಿಗಳು ಸುಟ್ಟು ಹಾಕಿ, ದುಷ್ಕೃತ್ಯ ಮೆರೆದ ಘಟನೆ ಕಾವ್ರಾಡಿಯ ನೂರಾನಿ ಮಸೀದಿ ಸಮೀಪದ ರಸ್ತೆಯಲ್ಲಿ ಅ. 4ರಂದು ನಡೆದಿದೆ. ಸ್ಥಳೀಯ ನಿವಾಸಿ ಶೇಖ್‌ ಮೊಹಮ್ಮದ್‌ ಗೌಸ್‌ ಅವರು 10 ದಿನಗಳ ಹಿಂದೆ ಈ ಕಾರನ್ನು 5 ಲಕ್ಷ ರೂ. ನೀಡಿ ಖರೀದಿಸಿದ್ದು, ಮನೆಗೆ ಹೋಗುವ ದಾರಿ ಸಮಸ್ಯೆಯಿರುವ ಕಾರಣ ಮಸೀದಿಯ ಎದುರಿನ ರಸ್ತೆ ಬದಿ ನಿಲ್ಲಿಸಿದ್ದರು. ಅ. 1ರಂದು ಅವರು ಕುಟುಂಬದೊಂದಿಗೆ ಹೈದರಾಬಾದಿಗೆ ಪ್ರವಾಸಕ್ಕೆ ತೆರಳಿದ್ದರು. ಅ. 4ರ […]

ಉಡುಪಿ: ನಾಡೋಜ ಡಾ. ಜಿ.ಶಂಕರ್ ಕುರಿತ ‘ಸಮಾಜ ಸೇವಾ ಹರಿಕಾರ’ ಪುಸ್ತಕ ಬಿಡುಗಡೆ

ಉಡುಪಿ: ಸಮಾಜ ಸೇವಕ ನಾಡೋಜ ಡಾ.ಜಿ.ಶಂಕರ್ ಕುರಿತ ‘ಸಮಾಜ ಸೇವಾ ಹರಿಕಾರ’ ಪುಸ್ತಕವನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ರವಿವಾರ ಅಂಬಲಪಾಡಿ ಶಾಮಿಲಿ ಸಭಾಂಗಣದ ಮಿನಿ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ಅನುಪಮ ಕೊಡುಗೆ ನೀಡುತ್ತಿರುವ ಜಿ.ಶಂಕರ್, ನಿಜಾರ್ಥದಲ್ಲಿ ಸಮಾಜಸೇವಾ ಹರಿಕಾರರಾಗಿದ್ದಾರೆ. ಪ್ರತಿಭಾವಂತ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ನೆರವು ಹೀಗೆ ಅವರ ಬಹುಮುಖ ಸಮಾಜ ಸೇವೆ ಇತತರಿಗೆ ಮಾದರಿ. […]

ಕಾರ್ಕಳ: ಶಿರ್ಲಾಲು’ನಲ್ಲಿ ದನಗಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

ಅಜೆಕಾರು: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಕೆಲವು ದಿನಗಳ ಹಿಂದೆ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆಯ ಮೊಹಮ್ಮದ್ ಯೂನಿಸ್ ( 31), ಮೂಡಬಿದ್ರೆ ಕಲ್ಲಬೆಟ್ಡುವಿನ ಮೊಹಮ್ಮದ್ ನಾಸೀರ್ (28), ಮೂಡಬಿದ್ರೆ ಪುತ್ತಿಗೆ ಗ್ರಾಮದ ಮಿಜಾರಿನ ಮೊಹಮ್ಮದ್ ಇಕ್ಬಾಲ್ (29) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ್ದ 2 ತಲವಾರು, ಕಾರು, ಬೋಲೆರೋ ವಾಹನ, 5 ಮೊಬೈಲ್ ಫೋನ್ […]

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ, ಭೀಕರ ಭೂಕುಸಿತ: ಮಕ್ಕಳು ಸೇರಿ 20 ಮಂದಿ ಮೃತ್ಯು.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಿರಿಕ್ ಮತ್ತು ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಭಾನುವಾರ ನಿರಂತರ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 20 ಜನ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿವೆ. ಗ್ರಾಮಗಳು ಪ್ರತ್ಯೇಕಗೊಂಡಿವೆ ಮತ್ತು ನೂರಾರು ಪ್ರವಾಸಿಗರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತ ಸಂಗ್ರಹಿಸಿದ ವರದಿಗಳ ಪ್ರಕಾರ, ಸರ್ಸಾಲಿ, ಜಸ್‌ಬಿರ್‌ಗಾಂವ್, […]