ಕ್ರೈಸ್ಟ್ ಕಿಂಗ್: ಸಂಭ್ರಮದ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಪಿತಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರೀಯ ಅವರಜಯಂತಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ. ಶ್ರೀರಾಮ ಮೊಗೆರಾಯ ಆಯುರ್ವೇದಿಕ್ ವೈದ್ಯರು ಮತ್ತುಸಮಾಜ ಸೇವಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಗಾಂಧೀಜಿಯವರುಸರಳ ವ್ಯಕ್ತಿತ್ವದೊಂದಿಗೆ ಅಹಿಂಸೆ, ಸತ್ಯ ಹಾಗೂ ಶಾಂತಿಯುತಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಈಗುಣಗಳನ್ನು ಇಂದಿನ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳುದರಜೊತೆಗೆ ದೇಶದ ಸೈನಿಕರಾಗಿ, ಸ್ವಚ್ಚತಾ ಸೇನಾನಿಗಳಾಗಿ ಕರ್ತವ್ಯನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು”. ಕಾರ್ಯಕ್ರಮದ ಇನ್ನೋರ್ವ […]

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಮೂವರು ಶಿಕ್ಷಕಿಯರು ಅಮಾನತು

ಉಡುಪಿ ಅಕ್ಟೋಬರ್ ೦4: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವತಿಯಿಂದ ನಡೆಯುವ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಾಗಿ ಉಡುಪಿ ತಾಲೂಕಿನ ಒಳಕಾಡು ಸ.ಪ್ರೌ.ಶಾಲೆಯ ಶಿಕ್ಷಕಿ ಸುರೇಖ, ಒಳಕಾಡು ಸ.ಪ್ರೌ.ಶಾಲೆಯ ಶಿಕ್ಷಕಿ ರತ್ನ, ಉದ್ಯಾವರ ಸ.ಪ.ಪೂ.ಕಾಲೇಜು ಸಹ ಶಿಕ್ಷಕಿ ಪ್ರಭಾ ಬಿ ಇವರನ್ನು ಗಣತಿದಾರರಾಗಿ ನೇಮಿಸಲಾಗಿದ್ದು, ಶಿಕ್ಷಕರು ನೇಮಕಾತಿ ಆದೇಶವನ್ನು ಸ್ವೀಕರಿಸಿರುವುದಿಲ್ಲ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿದರೂ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿರುತ್ತಾರೆ.ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರೂ ಇದುವರೆಗೂ ಸಮಜಾಯಿಷಿ ನೀಡಿರುವುದಿಲ್ಲವಾದ್ದರಿಂದ […]

ಉಡುಪಿ:ಅ.11,12 ರಂದು ಕೃಷಿ ಮೇಳ

ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ,ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಕೃಷಿ, ತೋಟಗಾರಿಕೆ ಪಶು ಸಂಗೋಪನೆ, ಮೀನುಗಾರಿಕೆ ಅರಣ್ಯ ಇಲಾಖೆ ಉಡುಪಿ ಮತ್ತು ದ.ಕ ಜಿಲ್ಲೆ, ಜಿಲ್ಲಾ ಕೃಷಿಕ ಸಮಾಜ, ಉಡುಪಿ ಮತ್ತು ದ.ಕ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಜಿಲ್ಲಾ ಪಂಚಾಯತ್, ಗೇರು ಮತ್ತು ಕೋಕೋ […]

ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ: ಟೈಲರ್‌ಗಳು ಬೇಕಾಗಿದ್ದಾರೆ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿದೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅನುಭವಿ ಟೈಲರ್ ಗಳು ಬೇಕಾಗಿದ್ದಾರೆ. 🔹ಸಲ್ವಾರ್ ಕಮೀಜ್ ಮತ್ತು ಬ್ಲೌಸ್‌ನ ಎಲ್ಲಾ ಶೈಲಿಗಳಲ್ಲಿ ಪರಿಣಿತರು. 🔹ಅನುಭವಕ್ಕೆ ಆದ್ಯತೆ ನೀಡಲಾಗುವುದು. ಸಂದರ್ಶನ: ದಿನಾಂಕ: 08-10-2025, ಸಮಯ: ಬೆಳಿಗ್ಗೆ 10 ಗಂಟೆ.ಸ್ಥಳ: MSDC, ಈಶ್ವರ್ ನಗರ ಮಣಿಪಾಲ ಸಂಪರ್ಕ ಸಂಖ್ಯೆ: 8123163932

ಮಂಗಳೂರು: ಶಾರ್ದೂಲವನ್ನು ಬೆನ್ನಟ್ಟಿದ ‘ಗ್ರಾಮ ಸಿಂಹ’

ಮಂಗಳೂರು: ದಸರಾ ಸಂದರ್ಭ ಕರಾವಳಿಯಲ್ಲಿ ಹುಲಿ, ಕರಡಿ, ಶಾರ್ದೂಲ ವೇಷಗಳು ಸರ್ವೇ ಸಾಮಾನ್ಯ. ಇಂತಹ ಶಾರ್ದೂಲ ವೇಷಧಾರಿಗಳ ತಂಡವೊಂದು ಮನೆಯೊಂದರ ಶ್ವಾನದ ಬೊಗಳುವಿಕೆಗೆ ದಿಕ್ಕಾಪಾಲಾಗಿ ಓಡಿದ ವೀಡಿಯೋವೊಂದು ವೈರಲ್ ಸಖತ್ ಆಗಿದೆ. ಬ್ಯಾಂಡ್ ಬಡಿಯುತ್ತಾ ಬಂದ ಶಾರ್ದೂಲ ವೇಷಧಾರಿಗಳ ತಂಡ ಮನೆಯೊಂದರ ಗೇಟ್ ಹೊಕ್ಕು ಇನ್ನೇನು ಅಂಗಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಮನೆಯ ಶ್ವಾನ ಜೋರಾಗಿ ಬೊಗಳಲಾರಂಭಿಸಿದೆ. ನಾಯಿಯ ಬೊಬ್ಬೆಗೆ ಬೆದರಿದ ವೇಷ ಹಾಕಿದವರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ. ವೇಷಧಾರಿಗಳು ಓಟಕ್ಕಿತ್ತ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು […]