ನವದೆಹಲಿ ಪೇಜಾವರ ಶಾಖಾ ಮಠದಲ್ಲಿ ವೈಭವದ ಚಂಡಿಕಾಯಾಗ

ಉಡುಪಿ: ನವದೆಹಲಿ ವಸಂತಕುಂಜ್ ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ವಿಜಯದಶಮೀ ಪ್ರಯುಕ್ತ ಲೋಕಕಲ್ಯಾಣಾರ್ಥ ಮತ್ತು ವಿಶೇಷವಾಗಿ ಸಮಸ್ತ ದೆಹಲಿ ಜನತೆಯ ಕ್ಷೇಮ ಸಮೃದ್ಧಿಗಾಗಿ ಪ್ರಾರ್ಥಿಸಿ ಚಂಡಿಕಾ ಯಾಗವು ವೈಭವದಿಂದ ನೆರವೇರಿತು. ಮುಖ್ಯಮಂತ್ರಿ ರೇಖಾ ಗುಪ್ತಾ ದಂಪತಿಯ ಹೆಸರು ಜನ್ಮ ನಕ್ಷತ್ರ ರಾಶಿ ಉಲ್ಲೇಖಿಸಿಯೇ ಯಾಗದ ಸಂಕಲ್ಪ ನೆರವೇರಿಸಲಾಯಿತು .ರೇಖಾ ಅವರು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಶ್ರೀಗಳು ಈ ಯಜ್ಞದಿಂದ ಲೋಕ ಕ್ಷೇಮವಾಗಲಿ , ಸಮಸ್ತ ದೆಹಲಿ ಜನತೆಗೆ ಶಾಂತಿ […]

ಯಕ್ಷಗಾನದ ಕಂಪು ಹರಡುವ ಹೂವಿನಕೋಲು ತಂಡ

ಉಡುಪಿ: ನವರಾತ್ರಿಯ ಸಮಯದಲ್ಲಿ ಆಯ್ದ ಕೆಲವು ಕಲಾಸಕ್ತರ ಮನೆಗಳಿಗೆ ಬಂದು ಹರಸುವ ಹೂವಿನಕೋಲು ಕಲೆಗೆ ನೂರಾರು ವರ್ಷಗಳ ಇತಿಹಾಸ, ಪರಂಪರೆ ಇದೆ. ಹೂವಿನಕೋಲು ಕಲೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜನಪದೀಯ ನಂಟಿರುವುದು ವಿಶೇಷವಾಗಿದೆ. ಮಕ್ಕಳಲ್ಲಿ ಮಾತುಗಾರಿಕೆ ಹಾಗೂ ಧಾರ್ಮಿಕ ಮತ್ತು ಪುರಾಣದ ಪರಿಕಲ್ಪನೆ ಅರಳಲು ಇದು ಸೂಕ್ತ ವೇದಿಕೆಯಾಗಿದೆ. ಯಕ್ಷಗಾನ ಮೇಳಗಳು ಸಾಧಾರಣವಾಗಿ ನವೆಂಬ‌ರ್ ತಿಂಗಳಿನಲ್ಲಿ ಆರಂಭಗೊಳ್ಳುತ್ತದೆ. ಅದಕ್ಕೂ ಮುಂಚೆ ನವರಾತ್ರಿಯ ದಿನಗಳಲ್ಲಿ ಹೂವಿನಕೋಲು ಎನ್ನುವ ಕಾರ್ಯಕ್ರಮವನ್ನು ಮನೆ ಮನೆಗೂ ಹೋಗಿ ನಡೆಸಿಕೊಡುತ್ತಾರೆ. ಹೂವಿನಕೋಲು ಪ್ರಕಾರದಲ್ಲಿ ಮಕ್ಕಳು […]

ಉಡುಪಿ: ದೇವಸ್ಥಾನದಲ್ಲಿ ಸರಗಳ್ಳತನ -ಕಳ್ಳಿಯರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಉಡುಪಿ: ಅಂಬಲಪಾಡಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರದ ನಡುವೆ ಮಹಿಳೆಯರಿಬ್ಬರು ವೃದ್ಧೆಯೊಬ್ಬರ ಚಿನ್ನದ ಸರವನ್ನು ಚಾಣಾಕ್ಷತನದಿಂದ ಎಗರಿಸಿದ್ದಾರೆ. ಸಂಶಯಗೊಂಡ ವೃದ್ಧೆ, ಮಹಿಳೆಯರಿಬ್ಬರ ಮೇಲೆ ಸಂಶಯ ಇದೆ ಎಂದು ಹೇಳಿದ್ದಾರೆ. ನಂತರ ಮಹಿಳೆಯರನ್ನು ಪರಿಶೀಲಿಸಿದಾಗ ಸರ ಸಿಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ಮಹಿಳೆಯರು ಆಪಾದಿತ ಮಹಿಳೆಯರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಬಳಿಕ ಪೆಟ್ಟು ತಿಂದ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಲಾಯಿತು.ಈ ಸಂದರ್ಭದಲ್ಲಿ ಅನಾರೋಗ್ಯದ ನೆಪ ಹೇಳಿ ಬಚಾವಾಗಲು ಯತ್ನಿಸಿದರು. ಸ್ಥಳಕ್ಕೆ ಬಂದ ಸಮಾಜ ಸೇವಕ ವಿಶು ಶೆಟ್ಟಿ, ಆಪಾದಿತ ಮಹಿಳೆಯರನ್ನು ತಮ್ಮ […]

ಉಡುಪಿ‌‌: ವಲಯ 1 ಮತ್ತು 2ರ ಆಟೋ ರಿಕ್ಷಾ- ಆಟೋ ಸ್ಟ್ಯಾಂಡ್ ಗಳಲ್ಲಿ ಪಾಲಿಸಬೇಕಾದ ನಿಯಮಗಳು ಇಲ್ಲಿದೆ.!

ಉಡುಪಿ: ಉಡುಪಿ‌‌ ನಗರದಲ್ಲಿ ಕಾರ್ಯಚರಿಸುತ್ತಿರುವ ವಲಯ 1 ಹಾಗೂ ವಲಯ 2 ಆಟೋ ರಿಕ್ಷಾ ವಾಹನಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದು, ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್ ಗಳಲ್ಲಿ ಪಾಲಿಸಬೇಕಾದ ನಿಯಮಗಳು ಈ ಕೆಳಕಂಡಂತಿದೆ.

ಬಾರ್ಕೂರು-ಶಿರಿಯಾರ-ಜನ್ನಾಡಿ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಗೆ ಶಿರಿಯಾರ ಪ್ರಭಾಕರ ನಾಯಕ್ ಆಗ್ರಹ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು-ಶಿರಿಯಾರ-ಜನ್ನಾಡಿ ರಾಜ್ಯ ಹೆದ್ದಾರಿ ರಸ್ತೆಯೂ ಭಾರಿ ಹೊಂಡಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅಡೆತಡೆಯುಂಟು ಮಾಡಿದೆ. ಸಣ್ಣ ಪುಟ್ಟ ಅಪಘಾತಗಳು ತೀವ್ರ ಸ್ವರೂಪದ ಗಾಯಾಳುಗಳು, ವಾಹನಗಳು ಜಖಂ ಆದ ಅನೇಕ ಅಪಘಾತಗಳು ಸಂಭವಿಸಿದೆ. ಕ್ರಾಂಕ್ರೀಟು ರಸ್ತೆಗಳಲ್ಲೂ ಸಹ ಬಿರುಕು ಬಿಟ್ಟು ಹೊಂಡಗಳಿಂದ ಕೂಡಿದೆ. ಬಾರ್ಕೂರು ಸೇತುವೆ ಬಳಿ, ಯಡ್ತಾಡಿ ಸಾಯಿಬ್ರಕಟ್ಟೆ ಮಹಾತ್ಮಗಾಂಧಿ ಹೈಸ್ಕೂಲ್ ಎದುರುಗಡೆ, ‘ಜೈಗಣೇಶ್ ಸೊಸೈಟಿಯ ಸೌಹಾರ್ದ ಶಿರಿ ಎದುರು, ಕದ್ರಿಕಟ್ಟೆ, ಶಿರಿಯಾರ, ಹಳ್ಳಾಡಿ, ಗಾವಳಿ ಇನ್ನಿತರ ಕಡೆಗಳಲ್ಲಿ ವಾಹನ […]