ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿಸುದ್ದಿ; ಸೆಪ್ಟಂಬರ್‌ 28ರಿಂದ ವಿಶೇಷ ರೈಲು ಸಂಚಾರ ಆರಂಭ.

ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ದಸರಾ ಹಬ್ಬದಲ್ಲಿ ಸಿಹಿಸುದ್ದಿ ನೀಡಿದೆ. ಶಬರಿಮಲೆಗೆ ತೆರಳುವ ಯಾತ್ರಿಕರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಪ್ರಯತ್ನದ ಫಲವಾಗಿ ಹುಬ್ಬಳ್ಳಿಯಿಂದ ಕೊಲ್ಲಂವರೆಗೆ 22 ಕೋಚ್‌ಗಳುಳ್ಳ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಸೆಪ್ಟಂಬರ್‌ 28ರಿಂದ ಸಂಚಾರ ಆರಂಭಿಸಲಾಗಿದೆ. ರೈಲು ಸಂಚಾರ ಯಾವ ಮಾರ್ಗದಲ್ಲಿ?:ರಾಜ್ಯದ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗವಾಗಿ ಹಾಗೂ ಕೃಷ್ಣರಾಜಪುರಂ, ಬಂಗಾರಪೇಟೆ, […]

“ಸೈನ್ಸ್ ಚಾಂಪ್ – 2025”: ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಪ್ರತಿಭೆಯ ಅನಾವರಣ.

ಕುಂದಾಪುರ: ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ “ ಸೈನ್ಸ್ ಚಾಂಪ್ – 2025” ಸ್ಪರ್ಧೆಯನ್ನು ಅತ್ಯುತ್ತಮವಾಗಿ ಆಯೋಜಿಸಿತು. ವಿಜ್ಞಾನ ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ನವೀನತೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಈ ಸ್ಪರ್ಧೆ ನಡೆಯಿತು. ಆರಂಭಿಕ ಸುತ್ತಿನ ಮೂಲಕ ಆಯ್ಕೆಯಾದ ನಾಲ್ವರು ಸ್ಪರ್ಧಾರ್ಥಿಗಳು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಭೆ ಹಾಗೂ ಚಾತುರ್ಯವನ್ನು ಮೆರೆದರು. ವಿವಿಧ ಹಂತಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ — ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಪ್ರಶ್ನೋತ್ತರಗಳು, ತಂತ್ರಜ್ಞಾನದ […]

ಉಡುಪಿ: ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನಲ್ಲಿ ‘ಹಿಂದಿ ದಿವಸ’ ಆಚರಣೆ

ಉಡುಪಿ: ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಆಶ್ರಯದಲ್ಲಿ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ’ ವನ್ನು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಕೃತಿಕಾ ಪಿ. ಶೆಣೈ ಅವರು ಭಾಷೆಯ ಉತ್ಪತ್ತಿ ಮತ್ತು ವಿಕಾಸದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿ, ಭಾಷೆ ಮನುಷ್ಯನ ಜೀವನದಲ್ಲಿ ಅತೀವ ಪ್ರಮುಖ ಪಾತ್ರ ವಹಿಸುವುದನ್ನು ಸ್ಪಷ್ಟಪಡಿಸಿದರು. ಅವರು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಭಾಷಾಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ರಾಷ್ಟ್ರದ ಏಕತೆಯನ್ನು ಬಲಪಡಿಸುವಲ್ಲಿ ಭಾಷೆಯ ಮಹತ್ವ ಅನನ್ಯ […]

ಜೆಕೆ ಟೈರ್ ರೇಸಿಂಗ್ ಸೀಸನ್ 2025: ಯುವ ಚಾಲಕರು ಮತ್ತು ಅನುಭವಿಗಳ ರೇಸರ್ ಗಳ ನಡುವೆ ಭರ್ಜರಿ ಪೈಪೋಟಿ!

ಬೆಂಗಳೂರು: ಕೊಯಮತ್ತೂರಿನ ಹೊರವಲಯದಲ್ಲಿರುವ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ 2025ರ ಜೆಕೆ ಟೈರ್ ರೇಸಿಂಗ್ ಸೀಸನ್‌ 2 ನೇ ಸುತ್ತಿನ ರೇಸಿಂಗ್ ನಡೆಯಿತು. ಅನುಭವಿ ರೇಸರ್‌ಗಳು ಮತ್ತು ಹೊಸ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಿ ಮೋಟಾರ್ ಸ್ಪೋರ್ಟ್ಸ್‌ನ ಸಂಭ್ರಮವನ್ನು ಹೆಚ್ಚಿಸಿದರು. ಗುರುಗ್ರಾಮಿನ 10ನೇ ತರಗತಿಯ ವಿದ್ಯಾರ್ಥಿ ನಿಹಾಲ್ ಸಿಂಗ್ ತಮ್ಮ ವೇಗ ಮತ್ತು ಉತ್ಸಾಹದಿಂದ ಎಲ್ಲರ ಗಮನ ಸೆಳೆದರು. ಅನುಭವಿ ರೆಸೀರ್ ಗಳೊಂದಿಗೆ ಸ್ಪರ್ಧೆ ನಡೆಸಿದ ನಿಹಾಲ್ ಶನಿವಾರದ ಮೊದಲ ರೇಸ್‌ನಲ್ಲಿ ವಿಜಯಶಾಲಿಯಾದರು. ಭಾನುವಾರ ನಡೆದ ರೇಸ್ ನ […]

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನದ ಸರ ಕಳವು ಪ್ರಕರಣ: ಆರೋಪಿ ಮಹಿಳೆ ಬಂಧನ

ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಕೊಲ್ಲೂರು ಪೊಲೀಸರು 24ಗಂಟೆಗಳ ಒಳಗಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಣೇಶ ನಗರದ ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದೆ. ಆಕೆಯಿಂದ ಕಳವುಗೈದ 2.5ಲಕ್ಷ ರೂ. ಮೌಲ್ಯದ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಸೆ.26ರಂದು ರಾತ್ರಿ 9ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ದೇವಿಪ್ರಿಯಾ ಎಂಬವರ ಬ್ಯಾಗ್‌ನಲ್ಲಿದ್ದ 2.5ಲಕ್ಷ ರೂ. ಮೌಲ್ಯದ 3 ಪವನ್‌ನ ಹವಳದ […]