ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ: ಅ. 2ರಂದು ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ- 2025 ಪ್ರದಾನ ಸಮಾರಂಭ

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಉಡುಪಿ ಜಿಲ್ಲೆ ಇದರ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ- 2025 ಪ್ರದಾನ ಸಮಾರಂಭವು ಅಕ್ಟೋಬರ್ 2 ರಂದು ಕಾರ್ಕಳ ಅತ್ತೂರು ಸಂತ ಲಾರೇನ್ಸ್ ಬೆಸಿಲಿಕಾದ ಸಮುದಾಯ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಡಿ’ಸಿಲ್ವಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇದರ […]
ಮಹಾರಾಷ್ಟ್ರ: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಶಾಲಾ ಮುಖ್ಯೋಪಾಧ್ಯಾಯ ಬಂಧನ.

7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ.ಒಂದನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಖಾಸಗಿ ಭಾಗಗಳನ್ನು ಮುಖ್ಯೋಪಾಧ್ಯಾಯ ಅನುಚಿತವಾಗಿ ಮುಟ್ಟಿರುವ ಆರೋಪ ಕೇಳಿಬಂದಿದೆ. ಈ ವೇಳೆ ಆತನನ್ನು ಮುನಾಡ್ ಪೊಲೀಸರು ಬಂಧಿಸಿದ್ದು, ಅಕ್ಟೋಬರ್ 1 ರವರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿ ಮುಖ್ಯೋಪಾಧ್ಯಾನ್ನು ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ. ಹಾಗೆಯೇ ಪ್ರಕರಣದ ಕುರಿತು ಹೆಚ್ಚಿನ […]
ಹೋಂ ವರ್ಕ್ ಮಾಡದಿದ್ದಕ್ಕೆ 7 ವರ್ಷದ ಬಾಲಕನಿಗೆ ತಲೆ ಕೆಳಗಾಗಿ ನೇತುಹಾಕಿ ಹಿಂಸೆ!

ಚಂಡೀಗಢ: ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ಹರಿಯಾಣದ ಪಾಣಿಪತ್‌ನ ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಅಂತ ಶಿಕ್ಷಕಿಯೊಬ್ಬಳು ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿಸಿ ನೇತುಹಾಕಿದ್ದಾಳೆ, ವಿದ್ಯಾರ್ಥಿಯನ್ನು ಚೆನ್ನಾಗಿ ಥಳಿಸಿದ್ದಾಳೆ. ಆಗಸ್ಟ್ 13ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಆಡಳಿಯ ಮಂಡಳಿಗೆ ಈ ವಿಷಯ ತಿಳಿದಿದ್ದೂ ಮುಚ್ಚಿಟ್ಟಿದ್ದರು. ಆದರೆ […]
ವಾಣಿಜ್ಯ ವ್ಯವಸ್ಥೆಗೆ ಸಿದ್ದ ಜಾಗತಿಕ ಕಾರ್ಯಪಡೆ: ವಿದೇಶಾಂಗ ಸಚಿವ ಜೈ ಶಂಕರ್

ನ್ಯೂಯಾರ್ಕ್: ಜಗತ್ತಿಗೆ ಜಾಗತಿಕ ಕಾರ್ಯಪಡೆಯ ಅಗತ್ಯವಿದೆ ಮತ್ತು ಅನಿಶ್ಚಿತತೆಯ ನಡುವೆಯೂ ಹೊಸ ವಾಣಿಜ್ಯ ವ್ಯವಸ್ಥೆಯು ಜಾರಿಗೆ ಬರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ನಡುವೆ ‘ಅಬ್ಸರ್‌ವರ್ ರಿಸರ್ಚ್ ಫೌಂಡೇಶನ್’ (ಒಆರ್‌ಎಫ್) ಸಭೆಯಲ್ಲಿ ಮಾತನಾಡಿದ ಅವರು, ‘ಅನಿಶ್ಚಿತತೆ ಮಧ್ಯೆಯೂ ವಾಣಿಜ್ಯ ವ್ಯಾಪಾರವು ತನ್ನ ಮಾರ್ಗವನ್ನು ತಾನೇ ಹುಡುಕಿಕೊಂಡು ಸಾಗುತ್ತದೆ’ ಎಂದು ಆಶಾವಾದ ವ್ಯಕ್ತಪಡಿಸಿದರು. ಭಾರತವು ವ್ಯಾಪಾರ ಮತ್ತು ಪಾಲುದಾರಿಕೆಯನ್ನು ವಿಸ್ತರಿಸುವ ಉದ್ದೇಶದೊಂದಿಗೆ ಲ್ಯಾಟಿನ್ ಅಮೆರಿಕ ಮತ್ತು ಕೆರೀಬಿಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿದೆ ಎಂದು […]
ಉಡುಪಿ: ರಿತನ್ಯ ಎಸ್.ಆಚಾರ್ಯಗೆ ಸೂಪರ್ ಟ್ಯಾಲೆಂಟೆಡ್ ಕಿಡ್ ಬಿರುದು.

ಉಡುಪಿ: ಉಡುಪಿ ಜಿಲ್ಲೆಯ ಕಮಲಶಿಲೆ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಮಗಳು ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನೇಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಸೂಪರ್ ಟ್ಯಾಲೆಂಟೆಡ್ ಕಿಡ್ ಎಂಬ ಬಿರುದನ್ನು ಪಡೆದು ‘ಒನ್ ಇನ್ ಎ ಮಿಲಿಯನ್’ ಗೌರವ ಪಡೆದಿದ್ದಾಳೆ. ರಿತನ್ಯ 21 ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 20 ಹಣ್ಣುಗಳು, 10 ಜಲಚರ ಪ್ರಾಣಿಗಳು, 6 ಕೀಟಗಳು, 23 ತರಕಾರಿಗಳು, 65ಕ್ಕೂ ಹೆಚ್ಚು […]